Wednesday, September 11, 2024

ಜೈಲಿನಲ್ಲಿರಲಿ, ಹೊರಗಿರಲಿ ನನ್ನ ಜೀವನ ದೇಶಕ್ಕೆ ಮುಡಿಪು : ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ !

ಜನಪ್ರತಿನಿಧಿ (ನವ ದೆಹಲಿ) :  ನಾನು ಜೈಲಿನಲ್ಲಿರಲಿ ಅಥವಾ ಜೈಲಿನ ಹೊರಗಿರಲಿ ನನ್ನ ಜೀವನ ಈ ದೇಶಕ್ಕೆ ಮುಡಿಪು ಆಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು(ಶುಕ್ರವಾರ) ಹೇಳಿದ್ದಾರೆ.

ಜಾರಿ ನಿರ್ದೇಶನಾಲಯ(ಇಡಿ) ಕೇಜ್ರಿವಾಲ್ ಅವರನ್ನು ಇಲ್ಲಿನ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅಬಕಾರಿ ನೀತಿ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 10 ದಿನಗಳ ಕಸ್ಟಡಿಗೆ ಕೋರಿದೆ.

ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿರುವ ಸಂದರ್ಭದಲ್ಲಿ ಮಾಧ್ಯಮಗಳ ವರದಿಗಾರರೊಂದಿಗೆ ಕೇಜ್ರಿವಾಲ್  ಮಾತನಾಡಿದರು. ನಿನ್ನೆ (ಗುರುವಾರ) ರಾತ್ರಿ ಜಾರಿ ನಿರ್ದೇಶನಾಲಯ ಬಂಧಿಸಿದ ನಂತರ ಮೊದಲ ಬಾರಿಗೆ ಕೇಜ್ರಿವಾಲ್ ಪ್ರತಿಕ್ರಿಯಿಸಿದರು.

ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿದ ಎಎಪಿ  ಇದು ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡದಂತೆ ತಡೆಯುವ “ರಾಜಕೀಯ ಪಿತೂರಿ” ಎಂದು ಟೀಕಿಸಿದೆ. ಮಾತ್ರವಲ್ಲದೇ ಕೇಜ್ರಿವಾಲ್ ಬಂಧನದ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಪಕ್ಷ ಕರೆ ನೀಡಿದೆ.

ದೆಹಲಿ ಕ್ಯಾಬಿನೆಟ್ ಸಚಿವರುಗಳಾದ ಅತಿಶಿ, ಸೌರಭ್ ಭಾರದ್ವಾಜ್, ಪೂರ್ವ ದೆಹಲಿಯ ಲೋಕಸಭಾ ಅಭ್ಯರ್ಥಿ ಕುಲದೀಪ್ ಕುಮಾರ್ ಸೇರಿದಂತೆ ಪಕ್ಷದ ಹಲವಾರು ನಾಯಕರನ್ನು ಐಟಿಒದಲ್ಲಿ ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!