spot_img
Friday, April 25, 2025
spot_img

ಚುನಾವಣಾ ಬಾಂಡ್‌ : ಪ್ರಮುಖ ಹತ್ತು ಕಂಪೆನಿಗಳಿಂದಲೇ ಬಿಜೆಪಿಗೆ ಒಟ್ಟು 2,123 ಕೋಟಿ ರೂ. ದೇಣಿಗೆ !

ಜನಪ್ರತಿನಿಧಿ (ನವ ದೆಹಲಿ) : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮಾರ್ಚ್ 21 ರಂದು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಯೂನಿಕ್‌ ನಂಬರ್‌ಗಳು ಸೇರಿದಂತೆ ಎಲೆಕ್ಟೋರಲ್ ಬಾಂಡ್ ಯೋಜನೆಯ ಬಗ್ಗೆ ಎಲ್ಲಾ ವಿವರಗಳನ್ನು ಹಂಚಿಕೊಂಡಿದೆ. ಸುಪ್ರೀಂ ಕೋರ್ಟ್‌ನಿಂದ ಎಸ್‌ಬಿಐಗೆ ಚುನಾವಣಾ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡುವಂತೆ ಆದೇಶಿಸಿತ್ತು.

ಈ ವರ್ಷ ಮಾರ್ಚ್ 14 ರಂದು ಎರಡು ಪಟ್ಟಿಗಳಲ್ಲಿ ಚುನಾವಣಾ ಬಾಂಡ್‌ ಮೂಲಕ ದೇಣಿಗೆ ನೀಡಿದವರು ಮತ್ತು ಪಕ್ಷಗಳ ಹೆಸರುಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲಾಗಿದೆ. ಇದು ಮೂರನೇ ಬಾರಿಗೆ ಎಸ್‌ಬಿಐ ಚುನಾವಣಾ ಬಾಂಡ್‌ಗಳ ಡೇಟಾವನ್ನು ಬಹಿರಂಗಪಡಿಸಿದೆ ಮತ್ತು ಅಂತಿಮವಾಗಿ, ಬಾಂಡ್ ಸಂಖ್ಯೆ ಸಾರ್ವಜನಿಕವಾಗಿದೆ.

ರಾಷ್ಟ್ರೀಯ ಸುದ್ದಿ ಮಾದ್ಯಮ ಇಂಡಿಯಾ ಟುಡೇ ಮಾಡಿರುವ ವಿಶೇಷ ಅಂಕಿಅಂಶಗಳ ಪ್ರಕಾರ, ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಅಗ್ರಸ್ಥಾನದಲ್ಲಿರುವ 10 ದೇಣಿಗೆದಾರಿಂದಲೇ ಒಟ್ಟು 2,123 ಕೋಟಿ ರೂ. ದೇಣಿಗೆ ಬಂದರೇ, ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ)ಗೆ ಟಾಪ್ 10 ದೇಣಿಗೆದಾರರಿಂದ 1,198 ಕೋಟಿ ರೂ. ಮತ್ತು ಕಾಂಗ್ರೆಸ್‌ಗೆ 615 ಕೋಟಿ ರೂ. ಚುನಾವಣಾ ಬಾಂಡ್‌ ಮೂಲಕ ಬಂದಿದೆ ಎಂದು ಮಾಹಿತಿ ನೀಡಿದೆ.

ಬಿಜೆಪಿಯ ಪ್ರಮುಖ ದಾನಿಗಳಲ್ಲಿ ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ 584 ಕೋಟಿ ರೂ. ಮತ್ತು ಕ್ವಿಕ್ ಸಪ್ಲೈ ಚೈನ್ ಪ್ರೈ. ಲಿಮಿಟೆಡ್ 375 ಕೋಟಿ, ವೇದಾಂತ ಲಿಮಿಟೆಡ್ 230 ಕೋಟಿ, ಭಾರ್ತಿ ಏರ್ ಟೆಲ್ 197 ಕೋಟಿ, ಮದನ್ ಲಾಲ್ ಲಿಮಿಟೆಡ್ 176 ಕೋಟಿ ದೇಣಿಗೆ ನೀಡಿದೆ.

ತೃಣಮೂಲ ಕಾಂಗ್ರೆಸ್‌ ಗೆ, ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವೀಸಸ್‌ನಿಂದ 542 ಕೋಟಿ ರೂ. , ಹಲ್ಡಿಯಾ ಎನರ್ಜಿ ಲಿಮಿಟೆಡ್ ರೂ. 281 ಕೋಟಿ, ಧರಿವಾಲ್ ಇನ್‌ಫ್ರಾಸ್ಟ್ರಕ್ಚರ್ ರೂ. 90 ಕೋಟಿ, ಮತ್ತು ಎಂಕೆಜೆ ಎಂಟರ್‌ಪ್ರೈಸಸ್ ಮತ್ತು ಏವೀಸ್ ಟ್ರೇಡಿಂಗ್ 46 ಕೋಟಿ ರೂ.

ಕಾಂಗ್ರೆಸ್‌ಗೆ, ವೇದಾಂತ ಲಿಮಿಟೆಡ್ 125 ಕೋಟಿ ರೂ.ಗೆ ಅತಿ ಹೆಚ್ಚು ದಾನಿಗಳಾಗಿದ್ದು, ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್‌ಮಿಷನ್ ಕಂಪನಿ ರೂ. 110 ಕೋಟಿ, ಎಂಕೆಜೆ ಎಂಟರ್‌ಪ್ರೈಸಸ್ ಲಿಮಿಟೆಡ್ ರೂ. 91.6 ಕೋಟಿ, ಯಶೋದಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ರೂ. 64 ಕೋಟಿ, ಮತ್ತು ಏವೀಸ್ ಟ್ರೇಡಿಂಗ್ ಫೈನಾನ್ಸ್ ಪ್ರೈ. ಲಿಮಿಟೆಡ್ 53 ಕೋಟಿ ರೂ. ನೀಡಿದೆ.

ಕೃಪೆ : ಇಂಡಿಯಾ ಟುಡೇ

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!