spot_img
Friday, March 27, 2026
spot_img

ಸುರ್ಜೇವಾಲ ಅವರು ಕಾಂಗ್ರೆಸ್‌ನನ್ನು ಗೆಲ್ಲಿಸಿ, ಬಿಜೆಪಿಯನ್ನು ಸೋಲಿಸಲು ನನಗೆ ಸುಪಾರಿ ಕೊಟ್ಟಿದ್ದಾರೆ : ಬಿ. ಎಮ್‌ ಸುಕುಮಾರ ಶೆಟ್ಟಿ

ಜನಪ್ರತಿನಿಧಿ (ಬೆಂಗಳೂರು) : 2014ರಲ್ಲಿ ಬಿಜೆಪಿ ಅವರು ಒತ್ತಾಯ ಮಾಡಿ ನನ್ನನ್ನು ಕರೆದರು. ನಾನು ಬಿಜೆಪಿಗೆ ಸೇರ್ಪಡೆಗೊಳ್ಳುವುದಕ್ಕೂ ಮುನ್ನಾ ಬೈಂದೂರು ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ನಾನು ಮೂಲತಃ ಕಾಂಗ್ರೆಸ್ ನವ. ಜಿ.ಎಸ್ ಆಚಾರ್, ಪ್ರತಾಪ್ ಚಂದ್ರ ಶೆಟಿಯವರು, ಎಸ್ ಎಂ ಕೃಷ್ಣ ಇರುವಾಗ ನಾನು ಕಾಂಗ್ರೆಸ್ ಕಾರ್ಯಕರ್ತನಾಗಿದ್ದೆ ಎಂದು ಮಾಜಿ ಶಾಸಕ ಬಿ.ಎಮ್‌. ಸುಕುಮಾರ್‌ ಶೆಟ್ಟಿ ಹೇಳಿದರು.

ಅವರು ಇಂದು (ಮಂಗಳಾರ) ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಆದ ಡಿ. ಕೆ ಶಿವಕುಮಾರ್‌ ಸಮ್ಮುಖದಲ್ಲಿ ಅವರು ಬಿ.ಎಂ ಸುಕುಮಾರ್‌ ಶೆಟ್ಟಿ ಅವರನ್ನು ಕಾಂಗ್ರೆಸ್‌ ಪಕ್ಷದ ಶಾಲು ಹೊದಿಸಿ, ಧ್ವಜ ನೀಡಿ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡು ಮಾತನಾಡಿದರು.

ಇಡೀ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬೈಂದೂರು ಮುಖ್ಯವಾದ ಕ್ಷೇತ್ರ. ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರಿಯಾಗಿ ಮತದಾನ ಆದರೇ ನಮ್ಮ ಅಭ್ಯರ್ಥಿ ವಿಜಯ ಸಾಧಿಸುವುದಕ್ಕೆ ಸಮಸ್ಯೆ ಇಲ್ಲ. ನಿನ್ನೆ(ಸೋಮವಾರ) ಸುರ್ಜೆವಾಲ ಅವರನ್ನು ಭೇಟಿ ಮಾಡಿದ್ದೇನೆ. ಆಗ ಅವರಿಗೆ ನಾನು ಅಡಿಕೆ ಹಾರ ಹಾಕಿ ಗೌರವಿಸಿದ್ದೆ. ಸುರ್ಜೇವಾಲ ಅವರು ನನ್ನನ್ನು ವಾಪಾಸ್ ಕರೆದು ನನಗೆ ಆ ಅಡಿಕೆ ಹಾರ ಹಾಕುವುದರ ಮೂಲಕ ನಿಮಗೆ ಸುಪಾರಿ ಕೊಟ್ಟಿದ್ದೇನೆ ಅಂದುಕೊಳ್ಳಿ. ನಿಮ್ಮ ಕ್ಷೇತ್ರದಲ್ಲಿ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್ ಗೆಲ್ಲಿಸುವಂತಾಗಬೇಕು ಎಂದು ಹೇಳಿದ್ದರು ಎಂದಿದ್ದಾರೆ.

ಬಂಗಾರಪ್ಪ ಅವರನ್ನು ಬೈಂದೂರಿನಲ್ಲಿ ದೇವರು ಎನ್ನುವ ಭಾವನೆಯಲ್ಲಿ ನೋಡುತ್ತಾರೆ. ಕಾಂಗ್ರೆಸ್ ಗೆಲ್ಲಿಸುವುದಕ್ಕೆ ಪಣ ತೊಡುತ್ತೇನೆ ಅಂದಷ್ಟೇ ಹೇಳಿದರೇ ಸಾಕಾಗುವುದಿಲ್ಲ. ಕೊಲ್ಲೂರು ಮೂಕಾಂಬಿಕೆಯ ಪೂರ್ಣಾನುಗ್ರಹ ಬೇಕು. ಬಂಗಾರಪ್ಪನವರ ಕುಟುಂಬಕ್ಕೂ ಮೂಕಾಂಬಿಕೆಯ ಪೂರ್ಣಾನುಗ್ರಹ ಆದರೆ ಕಾಂಗ್ರೆಸ್ ಗೆಲ್ಲುವುದಕ್ಕೆ ಖಂಡಿತ ಸಾಧ್ಯವಿದೆ ಎಂದು ಅವರು ಹೇಳಿದರು.

ಇನ್ನು, ಬಿಜೆಪಿಯ ಸಹವಾಸವನ್ನು ನಾನು ಒಪ್ಪುವುದಿಲ್ಲ. ಬಿಜೆಪಿಯದ್ದು ಡುಪ್ಲಿಕೇಟ್ ಗರ್ಭಗುಡಿ, ನಮ್ಮದು ಪ್ರಾಮಾಣಿಕ ಗರ್ಭಗುಡಿ ಎಂದು ಅವರು ಬಿಜೆಪಿಗೆ ಟಾಂಗ್ ನೀಡಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!