spot_img
Thursday, December 5, 2024
spot_img

ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್‌ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ಗೆ ಲಯನ್ಸ್ ಜಿಲ್ಲೆ ೩೧೭ ಸಿ ಯ ರಾಜ್ಯಪಾಲರಾದ ಡಾ. ನೇರಿ ಕರ್ನೆಲಿಯೋ ಅವರ ಅಧಿಕೃತ ಭೇಟಿ ಕಾರ್ಯಕ್ರಮ ಫಿಲೋಮಿನಾ ಕಮರ್ಷಿಯಲ್ ಹಾಲ್ ವಡೇರಹೋಬಳಿಯಲ್ಲಿ ಇತ್ತೀಚೆಗೆ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಗವರ್ನರ್ ಡಾ. ನೇರಿ ಕರ್ನೆಲಿಯೋ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ಕಳೆದ ಐದು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸೇವಾ ಚಟುವಟಿಕೆಗಳು ಇತರ ಎಲ್ಲಾ ಸಂಸ್ಥೆಗಳಿಗೂ ಮಾದರಿಯಾದದು. ಈ ವರ್ಷ ಕ್ರಿಯಾಶೀಲ ಅಧ್ಯಕ್ಷರ ಸೇವಾ ಚಟುವಟಿಕೆಗಳಿಂದ ಜಿಲ್ಲೆಯ ೧೨೦ ಕ್ಲಬ್ ಗಳಲ್ಲಿ ೧೦ನೇ ಸ್ಥಾನದಲ್ಲಿ ಇರುವುದು ಪ್ರಶಂಸನೀಯ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ಅಧ್ಯಕ್ಷರಾದ ಲ. ವಸಂತರಾಜ್ ಶೆಟ್ಟಿ ವಹಿಸಿದ್ದರು.

ಕ್ಲಬ್ ನ ಸೇವಾ ಚಟುವಟಿಕೆಯ ಭಾಗವಾಗಿ ಮೊಳಹಳ್ಳಿ ಗ್ರಾಮದ ಅನುಷಾ ಶೆಟ್ಟಿಯವರಿಗೆ ಹೊಲಿಗೆ ಯಂತ್ರವನ್ನು, ಮಾಂಗಲ್ಯ ಭಾಗ್ಯ ಯೋಜನೆಯಡಿ ಅಂಪಾರಿನ ಮಮತಾ ಶೆಟ್ಟಿ ಅವರಿಗೆ ಸಹಾಯಧನವನ್ನು, ಆರೋಗ್ಯ ಭಾಗ್ಯ ಯೋಜನೆಯಡಿ ಶಿರಿಯಾರದ ಅಶೋಕ್ ಶೆಟ್ಟಿ, ಕಂದಾವರದ ಮಂಜುಳಾ ಶೆಟ್ಟಿ, ಅಲ್ಬಾಡಿ ಆರ್ಡಿಯ ಅರುಣ್ ಕುಮಾರ್ ಶೆಟ್ಟಿ ಅವರಿಗೆ ಸಹಾಯಧನವನ್ನು ವಿತರಿಸಲಾಯಿತು.

೨೦೨೨ನೇ ಸಾಲಿನ ಮುಖ್ಯಮಂತ್ರಿ ಪ್ರಶಸ್ತಿ ಪುರಸ್ಕೃತ ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ಪರಿವೀಕ್ಷಕ ಶ್ರೀ ಪ್ರತಾಪ್ ಚಂದ್ರ ಶಟ್ಟಿ ಹಳ್ನಾಡು, ಭಾವೈಕ್ಯ ಬಂಟರ ಮಹಾಸಮಾಗಮದ ರೂವಾರಿ ಸಂಘಟನಾ ಚತುರ ಡಾ.ಅಂಪಾರು ನಿತ್ಯಾನಂದ ಶೆಟ್ಟಿ ಇವರನ್ನು ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಲಯನ್ಸ್ ಕ್ಲಬ್ ನ ವಿಸ್ತರಣಾಧಿಕಾರಿ ಲ ಅರುಣ್ ಕುಮಾರ್ ಹೆಗ್ಡೆ, ಮಾಜಿ ಜಿಲ್ಲಾ ಗವರ್ನರ್ ಲ ಜಯಕರ ಶೆಟ್ಟಿ, ಪ್ರಥಮ ಮಹಿಳಾ ಗವರ್ನರ್ ಲ. ಸ್ವಪ್ನ ಸುರೇಶ್ , ಜಿಲ್ಲಾ ಸಂಪುಟ ಕಾರ್ಯದರ್ಶಿ ಲ. ರವಿರಾಜ್ ನಾಯಕ್, ಪ್ರಾಂತೀಯ ಅಧ್ಯಕ್ಷ ಲ. ದೀನಪಾಲ್ ಶೆಟ್ಟಿ, ವಲಯ್ಯಾಧ್ಯಕ್ಷ ಲ. ಶಂಕರ್ ಶೆಟ್ಟಿ, ಪ್ರಾಂತೀಯ ಕಾರ್ಯದರ್ಶಿ ಲ. ಮೋಹನದಾಸ್ ಶೆಟ್ಟಿ, ಕುಂದಾಪುರ ಕೋಸ್ಟಲ್‌ನ ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್ ಶೆಟ್ಟಿ ಕೋಶಾಧಿಕಾರಿ ಸುಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀಮತಿ ನಿಮಿತಾ ಪಿ ಶೆಟ್ಟಿ ಪ್ರಾರ್ಥನೆಗೈದು , ಅಧ್ಯಕ್ಷರಾದ ಲ .ವಸಂತರಾಜ್ ಶೆಟ್ಟಿ ಸ್ವಾಗತಿಸಿದರು. ಶ್ರೀಮತಿ ಶೈಲಜಾ ವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!