Sunday, September 8, 2024

ನೀರನ್ನು ಹೀರಿಕೊಳ್ಳುವ ವ್ಯವಸ್ಥೆ ಭೂಮಿ ಮೇಲೆ ಇಲ್ಲದಂತಾಗಿದೆ ! : ಕೆ. ಜಯಪ್ರಕಾಶ್ ಹೆಗ್ಡೆ

ʼಫೈನ್‌ ಪ್ಲಾಂಟ್‌ʼ ಮಾರುಕಟ್ಟೆ ಬಿಡಗಡೆ, ʼಹೊಸ ಪುಟʼ ಅಪ್ಲಿಕೇಶನ್‌ ಲೋಕಾರ್ಪಣೆ ಕಾರ್ಯಕ್ರಮ ಜನಪ್ರತಿನಿಧಿ (ಕುಂದಾಪುರ) : ರಸ್ತೆಗಳಿಗೆ ಕಾಂಕ್ರೀಟ್‌ ಹಾಸಲಾಗಿದೆ, ಡ್ರೈನೇಜ್‌ಗಳಲ್ಲಿಯೂ ಕಾಂಕ್ರೀಟ್‌ಮಯವಾಗಿದೆ, ಮನೆಯ ಅಂಗಳದಲ್ಲಿ ನಾವು ಮಣ್ಣಿನ ಮೇಲೆ ನಡೆಯುತ್ತಿಲ್ಲ. ಒಟ್ಟಿನಲ್ಲಿ ನೀರನ್ನು ಹೀರಿಕೊಳ್ಳುವ ವ್ಯವಸ್ಥೆಯೇ ಈ ಭೂಮಿಯಲ್ಲಿ ಇಲ್ಲದಂತಾಗಿದೆ ಎಂದು  ರಾಜ್ಯ ಹಿಂದುಳಿದ ವರ್ಗಗಳ ಆರೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ಹೇಳಿದರು.

ಅವರು ಕುಂದಾಪುರದ ನೆಹರೂ ಮೈದಾನದಲ್ಲಿ ನಡೆದ ʼಫೈನ್‌ ಪ್ಲಾಂಟ್‌ʼ ಮಾರುಕಟ್ಟೆ ಬಿಡುಗಡೆ, ವಿದ್ಯಾರ್ಥಿಗಳಿಗೆ ಪ್ಲಾಂಟ್‌ ವಿತರಣೆ ಹಾಗೂ ʼಹೊಸ ಪುಟʼ ಅಪ್ಲಿಕೇಶನ್ ಲೋಕಾರ್ಪಣೆಯ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಭೂಮಿಯಲ್ಲಿನ ಮಾನವ ಸೃಷ್ಟಿಯಿಂದ ಆದ ಸಮಸ್ಯೆಗಳ ನಿವಾರಣೆಗೆ ಈ ವಿನೂತನವಾದ ಸಂಶೋಧನೆ ನಾಂದಿ ಹಾಡಿದಂತಿದೆ. ಪ್ಲಾಸ್ಟಿಕ್‌ ನಿರ್ಮೂಲನೆ ಹಾಗೂ ಪರಿಸರ ರಕ್ಷಣೆ, ಹಸಿರು ಬೆಳೆಸುವಲ್ಲಿ ಮಹತ್ತರ ಪಾತ್ರವಹಿಸುವ ತುರ್ತು ಅಗತ್ಯವಿದೆ. ಜಲಮೂಲ ನಾಶವಾಗುತ್ತಿದೆ. ನೀರು ಕಡಿಮೆಯಾದಾಗ ನಾವು ಆತಂಕ ಪಡುತ್ತೇವೆ. ನೀರನ್ನು ಉಳಿಸಿಕೊಳ್ಳುವ ವ್ಯವಸ್ಥೆಯೇ ನಮ್ಮಲ್ಲಿ ಸರಿಯಾಗಿಲ್ಲ. ಮಣ್ಣು ನೀರು ಹೀರಿಕೊಳ್ಳುವುದಕ್ಕೆ ಬಿಡದೇ ಇರುವ ವ್ಯವಸ್ಥೆಯನ್ನು ನಾವು ನೆಲದುದ್ದಕ್ಕೂ ಕಾಂಕ್ರೀಟನ್ನು ಹಾಸಿ ಸೃಷ್ಟಿಸಿದ್ದೇವೆ. ಇಂತಹ ಅವೈಜ್ಞಾನಿಕ ವ್ಯವಸ್ಥೆಯಿಂದ ಪರಿಸರ ನಾಶವಾಗುತ್ತಿದೆ. ಈ ನಡುವೆ ಫೈನ್‌ ಪ್ಲಾಂಟ್‌ನಂತಹ ಸಂಶೋಧನೆ ನಡೆದಿರುವುದು ಶ್ಲಾಘನೀಯ. ಸರ್ಕಾರ ಮಟ್ಟದಲ್ಲಿಯೂ ಇಂತಹ ಸಂಶೋಧನೆಗಳಿಗೆ ಪ್ರೋತ್ಸಾಹ ದೊರಕುವಂತಾಗಬೇಕು ಎಂದರು.

ʼಹೊಸ ಪುಟʼ ಅಪ್ಲಿಕೇಶನ್‌ ಲೋಕಾರ್ಪಣೆ ಮಾಡಿ ಮಾತನಾಡಿದ ಬಿಬಿಎಂಪಿಯ ಅಪಾರ ಆಯುಕ್ತರಾದ ಅಜಿತ್‌ ಹೆಗ್ಡೆ ಶಾನಾಡಿ ಮಾತನಾಡಿ, ಇಂತಹ ಸಂಶೋಧನೆ ತಜ್ಞರಿಂದ ಎಲ್ಲರಿಗೂ ತಲುಪುವಂತಹದ್ದಾಗಬೇಕಿದೆ. ಸರ್ಕಾರವೂ, ಸಂಬಂಧಪಟ್ಟ ಇಲಾಖೆಗಳು ಕೂಡ ಈ ಸಂಶೋಧನೆಗಳನ್ನು ಬಳಸಿಕೊಂಡು ಹಸಿರನ್ನು ಉಳಿಸುವಂತಹ ಕಾರ್ಯ ನಡೆಯಬೇಕಿದೆ ಎಂದರು.  

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ. ಕಿರಣ್ ಕುಮಾರ್‌ ಕೊಡ್ಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಫೈನ್‌ ಪ್ಲಾಂಟ್‌ ರಿಸರ್ವ್ಯಯರ್‌ ಪ್ರೈವೇಟ್‌ ಲಿಮಿಟೆಡ್‌ ಬೆಂಗಳೂರಿನ ಸಿಇಓ ಮತ್ತು ಆಡಳಿತ ನಿರ್ದೇಶಕರಾದ ಹೆಚ್.‌ ಪ್ರಸನ್ನಚಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯಕ್ರಮದಲ್ಲಿ  ಮೊಳಹಳ್ಳಿ ದಿನೇಶ್‌ ಹೆಗ್ಡೆ ಜಯರತ್ನ ಹೆಗ್ಡೆ ಟ್ರಸ್ಟ್‌ (ರಿ.)ನ ಎಂ ದಿನೇಶ್‌ ಹೆಗ್ಡೆ, ವಡೇರಹೋಬಳಿ ಸರ್ಕಾರಿ ಹಿ. ಪ್ರಾ. ಶಾಲೆ ಕುಂದಾಪುರದ ನಿವೃತ್ತ ಮುಖ್ಯ ಶಿಕ್ಷಕರಾದ ಎ. ಚಂದ್ರಶೇಖರ್‌ ಶೆಟ್ಟಿ, ಕುಂದಾಪುರ ವಲಯ ಶಿಕ್ಷಣಾಧಿಕಾರಿ ಶೋಭಾ ಎಸ್.‌ ಶೆಟ್ಟಿ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರದ ಹಿರಿಯ ವಿಜ್ಞಾನಿ ಡಾ. ರವಿರಾಜ್‌ ಶೆಟ್ಟಿ ಜಿ., ಜಿಸಿಐ ಕುಂದಾಪುರ ಸಿಟಿಯ ಅಧ್ಯಕ್ಷರಾದ ರಾಘವೇಂದ್ರ ಕುಲಾಲ್‌, ವಡೇರಹೋಬಳಿ ಸರ್ಕಾರಿ. ಹಿ. ಪ್ರಾ. ಶಾಲೆ ಕುಂದಾಪುರದ ಮುಖ್ಯ ಶಿಕ್ಷಕ ಬಾಲಚಂದ್ರ ಹೆಬ್ಬಾರ್‌ ಮತ್ತಿತರರು ಉಪಸ್ಥಿತರಿದ್ದರು.

ಪತ್ರಕರ್ತ ಕೆ. ಸಿ ರಾಜೇಶ್‌ ಸ್ವಾಗತಿಸಿ, ಸಂದೇಶ್‌ ಶೆಟ್ಟಿ ಸಳ್ವಾಡಿ ಕಾರ್ಯಕ್ರಮ ನಿರ್ವಹಿಸಿದರು. ಜೆಸಿಐ ಸಿಟಿ ಕುಂದಾಪುರದ ಸ್ಥಾಪಕಾಧ್ಯಕ್ಷ ಹುಸೇನ್‌ ಹೈಕಾಡಿ ವಂದಿಸಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ  ಕಚೇರಿಗಳಿಗೆ, ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ, ಚರ್ಚ್‌, ಮಸೀದಿಗಳಿಗೆ, ಸ್ಥಳೀಯ ಶಾಲೆಗಳಿಗೆ, ಕಾಲೇಜುಗಳಿಗೆ, ಸ್ಥಳೀಯ ಪ್ರಮುಖ ಸಂಘ ಸಂಸ್ಥೆಗಳಿಗೆ ಫೈನ್‌ ಪ್ಲಾಂಟ್‌ ಗಳನ್ನು ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಆಡಳಿತ ನಿರ್ದೇಶಕರಾದ ಹೆಚ್.‌ ಪ್ರಸನ್ನಚಂದ್ರ ಶೆಟ್ಟಿ ವಿತರಿಸಿದರು. ಹಾಗೂ ವಿದ್ಯಾರ್ಥಿಗಳಿಗೆ ಪ್ಲಾಂಟ್‌ ವಿತರಿಸಿ ಅರಿವು ಮೂಡಿಸಲಾಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!