Sunday, September 8, 2024

ಗೋಳಿಗರಡಿ: ಗೆಂಡಸೇವೆ, ತುಲಾಭಾರ, ಪಂಜುರ್ಲಿ ಕೋಲ ಜಾತ್ರಾ ಮಹೋತ್ಸವ

ಸಾಸ್ತಾನ ಗೋಳಿಗರಡಿ ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ಫೆ. 22ರಂದು ಗೆಂಡ ಸೇವೆ ಹಾಗು ಫೆ. 23ರಂದು ತುಲಾಭಾರ ಸೇವೆ ಸಂಪನ್ನ ಗೊಂಡಿತು. ಈ ಸಂದರ್ಭ ಗರಡಿಯ ದೇವರುಗಳಿಗೆ ವಿಶೇಷ ಪೂಜೆ ನೆರವೇರಿತು. ಹರಿಕೆ ಹೊತ್ತ ಭಕ್ತರು ಗೆಂಡಸೇವೆಯಲ್ಲಿ ಹಾಗು ತುಲಾಭಾರ ಸೇವೆ ಹರಿಕೆ ಸಲ್ಲಿಸಿದ್ದರು. ದರ್ಶನ ಸೇವೆ, ಅನ್ನಸಂತರ್ಪಣೆ ನಡೆಯಿತು.

ಅರಂಭದಲ್ಲಿ ಅಮ್ಮನವರಿಗೆ ಹೂವಿನ ಪೂಜೆ, ರಾತ್ರಿ ಗೆಂಡಸೇವೆ, ಅನ್ನಸಂತರ್ಪಣೆ, ಪಂಜುರ್ಲಿ ಕೋಲ, ಗೋಳಿಗರಡಿ ಮೇಳದವರಿಂದ ಯಕ್ಷಗಾನ ನಡೆಯಿತು. ಈ ಸಂದರ್ಭ ದೇಗುಲ ವಿಶೇಷ ಹೂವಿನ ಅಲಂಕಾರದಲ್ಲಿ ಕಂಗೊಳಿಸಿತು. ಈ ಸಂದರ್ಭ ಗರಡಿಯ ದೇವರುಗಳಿಗೆ ವಿಶೇಷ ಪೂಜೆ ನೆರವೇರಿತು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶ್ರೀ ಗೋಳಿಗರಡಿ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಸಂಘದ ಅಧ್ಯಕ್ಷ ಡಾ| ಸತೀಶ್ ಪೂಜಾರಿ, ವಕೀಲೆ ಭಾರತಿ ಅವರ ನೇತೃತ್ವದಲ್ಲಿ ಕರಾವಳಿಯ ಖ್ಯಾತ ಗಾಯಕ, ಗಾಯಕಿಯರಿಂದ ಸಂಗೀತ ರಸಮಂಜರಿ ನಡೆಯಿತು. ಫೆ.೨೩ರಂದು ಹರಿಕೆ ಹೊತ್ತ ಭಕ್ತರು ತುಲಾಭಾರ ಸೇವೆ ಹರಿಕೆ ಸಲ್ಲಿಸಿದ್ದರು. ದರ್ಶನ ಸೇವೆ, ಅನ್ನಸಂತರ್ಪಣೆ ನಡೆಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!