Sunday, September 8, 2024

ಫೆ. 24 ರಂದು ಕುಂದಾಪುರದಲ್ಲಿ ಫೈನ್‌ ಪ್ಲಾಂಟ್‌ ಹಾಗೂ ಹೊಸ ಪುಟ ಅಪ್ಲಿಕೇಶನ್‌ನ ಬಿಡುಗಡೆ ಕಾರ್ಯಕ್ರಮ

ಜನಪ್ರತಿನಿಧಿ (ಕುಂದಾಪುರ) : ಪಾಕೃತಿಕ ಸಮತೋಲನದೊಂದಿಗೆ ಜೀವನವನ್ನು ಕಟ್ಟಿಕೊಂಡಿರುವ ನಮ್ಮ ದಿನನಿತ್ಯದ ಅವಶ್ಯಕತೆಗಳಲ್ಲಿ ನಮ್ಮ ಸುತ್ತಮುತ್ತಲಿನ ಹಸಿರು ಗಿಡಗಳು ಪ್ರಮುಖವಾಗಿದೆ. ಹಲವು ಕಾರಣಗಳಿಂದಾಗಿ ನಾವು ಸಾಕಿ-ಬೆಳಸಿದ ಗಿಡಗಳು ನೀರಿಲ್ಲದೆ ಸೋರಗಬಾರದಯ ಹಾಗೂ ಸಾಯಬಾರದು ಎನ್ನುವ ಉದ್ದೇಶಕ್ಕಾಗಿ ನಮ್ಮ ಫೈನ್‌ ಪ್ಲಾಂಟ್‌ ರಿಸರ್ವಾಯರ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿ ಗಿಡಗಳ ಉಳಿವು ಹಾಗೂ ತೋಟಗಾರಿಕೆಯ ಸಮಸ್ಯೆಗಳ ಪರಿಹಾರಗಳಿಗಾಗಿ ಪ್ರಯೋಜನವಾಗುವ ಫೈನ್‌ ಪ್ಲಾಂಟ್‌ ಪರಿಚಯಿಸುತ್ತಿದೆ ಎಂದು ಫೈನ್‌ ಪ್ಲಾಂಟ್‌ ರಿಸರ್ವಾಯರ್‌ ಪ್ರೈವೇಟ್‌ ಲಿಮಿಟೆಡ್‌ ಬೆಂಗಳೂರಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಹೆಚ್.‌ ಪ್ರಸನ್ನಚಂದ್ರ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಅನಿರೀಕ್ಷಿತ ವೇಳಾಪಟ್ಟಿಯೊಂದಿಗೆ ಕಾರ್ಯನಿರತವಾಗುವ ವ್ಯಕ್ತಿಗಳ ಆಶ್ರಯದಲ್ಲಿನ ಗಿಡಗಳ ಬೆಳವಣಿಗೆಗೆ ಸೂಕ್ತವಾಗಿದೆ. ಕಾರ್ಮಿಕ ಮತ್ತು ನಿರ್ವಹಣೆ ವೆಚ್ಚವನ್ನು ಕಡಿಮೆ ಮಾಡುತ್ತದೆ. ಸ್ಥಿರವಾದ ನೀರು ಸರಬರಾಜನ್ನು ನಿರ್ವಹಿಸುತ್ತದೆ ಹಾಗೂ ಪದೆ ಪದೆ ನೀರು ಹಾಕುವುದನ್ನು ತಡೆಯುತ್ತದೆ. ದೃಢವಾದ ಬೇರಿನ ಬೆಳವಣಿಗೆ ಮತ್ತು ಒಟ್ಟಾರೆ ಸಸ್ಯ ಆರೋಗ್ಯವನ್ನು ಉತ್ತೇಜಿಸುತ್ತದೆ. ಇದರಲ್ಲಿನ ಕಾಂಪ್ಯಾಕ್ಟ್‌ ವಾಸಿಸುವ ಸ್ಥಳಗಳು ಮತ್ತು ಬಾಲ್ಕನಿಗಳಿಗೆ ಸೂಕ್ತವಾಗಿದೆ. ಜನರ ಅನುಪಸ್ಥಿತಿಯಲ್ಲಿ ಸಸ್ಯ ಅವಶ್ಯಕತೆಗಳನ್ನು ನಿವಾರಿಸುತ್ತದೆ. ನೀರು ಉಕ್ಕಿ ಹರಿಯುವುದನ್ನು ತಡೆಯುತ್ತದೆ. ಉದ್ಯಾನ ಹಾಗೂ ತೋಟದ ಶುಚಿತ್ವವನ್ನು ಕಾಪಾಡುತ್ತದೆ. ಕನಿಷ್ಠ ಶ್ರಮದೊಂದಿಗೆ ತಾಜಾ ತರಕಾರಿಗಳನ್ನು ಬೆಳೆಯಲು ಸೂಕ್ತವಾಗಿದೆ. ವಿವಿಧ ಪರಿಸರದಲ್ಲಿ ಹಸಿರನ್ನು ಹೆಚ್ಚಿಸುತ್ತದೆ. ಸುಲಭ ನಿರ್ವಹಣೆಯೊಂದಿಗೆ ಆರೋಗ್ಯಕರ ಪರಿಸರವನ್ನು ಉತ್ತೇಜಿಸುತ್ತದೆ. ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪರಿಸರದ ಸೌಂದರ್ಯವನ್ನು ಆಕರ್ಷಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೈನ್‌ ಪ್ಲಾಂಟ್‌ :

ಸ್ವಯಂ ಆರೈಕೆ ಸಾಮರ್ಥ್ಯದ ಕಾರಣದಿಂದಾಗಿ ಕನಿಷ್ಠ ನಿರ್ವಹಣೆ ಅಗತ್ಯವಿರುವುದರಿಂದ ಸ್ವತಂತ್ರ ಬೆಳವಣಿಗಾಗಿ ಮಳೆನೀರಿನ ಸಂಗ್ರಹವನ್ನು ಅವಳವಡಿಸಲಾಗಿದೆ. ಮನೆಗಳು, ಒಳಾಂಗಣ ಮತ್ತು ಹೊರಾಂಗಣಕ್ಕೆ ಬಹುಮುಖಿ ಉಪಯೋಗಕ್ಕೆ ಅನುಕೂಲವಾಗಿ ಸಿದ್ಧಪಡಿಸಲಾಗಿದೆ. ನೀರಿನ ಸವಾಲುಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುತ್ತದೆ. ನಗರ ಜೀವನ ಮತ್ತು ಸೀಮಿತ ಸ್ಥಳಗಳಿಗೆ ಅನುಗುಣವಾಗುವಂತೆ ತಯಾರಿಸಲಾಗಿದೆ.

ʼಹೊಸ ಪುಟʼ ಶೈಕ್ಷಣಿಕ ಅಪ್ಲಿಕೇಶನ್‌ʼ

ದುಬಾರಿ ಶುಲ್ಕದೊಂದಿಗೆ ಆನ್‌ಲೈನ್‌ ಪಠ್ಯ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಂಪೆನಿಯ ಆಸಕ್ತಯಿಂದ ʼಹೊಸ ಪುಟʼ ಶೈಕ್ಷಣಿಕ ಅಪ್ಲಿಕೇಶನ್‌ ಪರಿಚಯಿಸುತ್ತದೆ. ಇದರಿಂದ ಶಿಕ್ಷಕರು, ಶಾಲೆಗಲು ಮತ್ತು ವಿದ್ಯಾರ್ಥಿಗಳಿಗೆ ಅಸಂಖ್ಯಾತ ಪ್ರಯೋಜನಗಳನ್ನು ವಿದ್ಯಾರ್ಥಿಗಳು ವಿವಿಧ ಬೊಧನಾ ಮಾದರಿಗಳೊಂದಿಗೆ ಉದ್ಯಮದ ಪ್ರವೃತ್ತಿಗಳ ಒಳನೋಟಗಳನ್ನು ಪಡೆಯುತ್ತಾರೆ. ಪ್ರಾಯೋಗಿಕ ಅನುಭವ ಹೊಂದಿರುವ ಶಿಕ್ಷಕರು ನೈಜ ಪ್ರಪಂಚದ ಒಳನೋಟಗಳೊಂದಿಗೆ ವಿದ್ಯಾರ್ಥಿಗಳ ಕಲಿಕೆಯನ್ನು ಹೆಚ್ಚಿಸುತ್ತಾರೆ. ವ್ಯಾಪಕವಾದ ಮೂಲ ಸೌಕರ್ಯ ಹೂಡಿಕೆಗಳಿಲ್ಲದೆ ಶಾಲೆಗಳು ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತೇವೆ. ಹೊಸದಾಗಿ ಶಿಕ್ಷಣ ಪಡೆದ ವೃತ್ತಿಪರರು ಹೊಸ ದೃಷ್ಟಿಕೋನಗಳೊಂದಿಗೆ ವಿದ್ಯಾರ್ಥಿಗಳ ಕಲಿಕೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಉತ್ತಮ ಅನುಭವ ಹಾಗೂ ಆಸಕ್ತಿ ಇರುವ ಶಿಕ್ಷಣ ತಜ್ಙರು ಹಾಗೂ ಬೋಧಕರ ಸಲಹೆಗಳನ್ನು ಅವಳವಡಿಸಿಕೊಳ್ಳಲಾಗಿದೆ.ಸಮುದಾಯದ ಭಾಗೀಧಾರಿಕೆಯಿಂದಾಗಿ ಶಿಕ್ಷಕರು ವೈಯಕ್ತಿಕ ತೃಪ್ತಿಯನ್ನು ಕಂಡುಕೊಳ್ಳುತ್ತಾರೆ. ಹೊಂದಿಕೊಳ್ಳುವ ವೇಳಾಪಟ್ಟಯೂ, ಬದ್ಧತೆಗಳನ್ನು ಸಮತೋಲನಗೊಳಿಸಲು ಶಿಕ್ಷಕರನ್ನು ಶಕ್ತಗೊಳಿಸುತ್ತದೆ ಎಂದು ಹೇಳಿದ್ದಾರೆ.

ಕಂಪೆನಿಯು ಪ್ರವರ್ತಕ ತೋಟಗಾರಿಕೆ ಪರಿಹಾರಗಳ ಮತ್ತು ಹೊಸ ಪುಟ ಅಪ್ಲಿಕೇಶನ್‌ ಅನ್ನು ಪರಿಚಯಿಸಲು ನಾವು ಹೆಮ್ಮೆ ಪಡುತ್ತೇವೆ. ಈ ಎರಡು ಉದ್ದೇಶಗಳು ಪರಿಸರ ಸಂರಕ್ಷಣೆ ಮತ್ತು ಶಿಕ್ಷಣವನ್ನು ಮುನ್ನಡೆಸುವ ಗುರಿಯನ್ನು ಹೊಂದಿವೆ. ಫೆ. ೨೪(ಶನಿವಾರ)ರಂದು ಸಂಜೆ ೪:೩೦ಕ್ಕೆ ಕುಂದಾಪುರದ ನೆಹರೂ ಮೈದಾನದಲ್ಲಿ ಫೈನ್‌ ಪ್ಲಾಂಟ್‌ ಹಾಗೂ ಹೊಸ ಪುಟ ಅಪ್ಲಿಕೇಶನ್‌ನ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ಕಾರ್ಯಕ್ರಮದಲ್ಲಿ ಆಯ್ದ ವಿದ್ಯಾರ್ಥಿಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ, ಧಾರ್ಮಿಕ ಸ್ಥಳಗಳಿಗೆ, ಸರ್ಕಾರಿ ಕಚೇರಿಗಳಿಗೆ ಉಚಿತವಾಗಿ ಫೈನ್‌ ಪ್ಲಾಂಟ್‌ ವಿತರಣೆಯ ಉದ್ದೇಶ ಇರಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ್‌ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಎ. ಕಿರಣ್‌ ಕುಮಾರ್‌ ಕೊಡ್ಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರು ಬಿಬಿಎಂಪಿಯ ಹೆಚ್ಚುವರಿ ಆಯುಕ್ತರಾದ ಶಾನಾಡಿ ಅಜಿತ್‌ ಹೆಗ್ಡೆ ಹೊಸ ಪುಟ ಅಪ್ಲಿಕೇಶನ್‌ ಅನಾವರಣ ಮಾಡಲಿದ್ದಾರೆ. ಕಾಂಗ್ರೆಸ್‌ ಮುಖಂಡ ದಿನೇಶ್‌ ಹೆಗ್ಡೆ ಮೊಳಹಳ್ಳಿ, ಎ.ಚಂದ್ರಶೇಖರ ಶೆಟ್ಟಿ, ಶೋಭಾ ಎಸ್.‌ ಶೆಟ್ಟಿ, ರಾಘೇಂದ್ರ, ಕುಲಾಲ್‌, ಡಾ. ರವಿರಾಜ್‌ ಶೆಟ್ಟಿ. ಜಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಉಡುಪಿಯ ತರಂಗ ಡ್ಯಾನ್ಸ್‌ ಕ್ರೀವ್ಸ್‌ ತಂಡದವರಿಂದ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!