Wednesday, September 11, 2024

ಕೇಂದ್ರದ ತೆರಿಗೆ ಹಂಚಿಕೆ ವಿರುದ್ಧ ಕರ್ನಾಟಕ ಸರ್ಕಾರ ನಿರ್ಣಯವನ್ನು ಅಂಗೀಕಾರ | ಒಂದು ದಿನದ ಬಳಿಕ ಸದನದಿಂದ ಹೊರನಡೆದು ಬಿಜೆಪಿ ಪ್ರತಿಭಟನೆ

ಜನಪ್ರತಿನಿಧಿ (ಬೆಂಗಳೂರು) : ಕೇಂದ್ರದ ತೆರಿಗೆ ಹಂಚಿಕೆ ವಿರುದ್ಧ ಕರ್ನಾಟಕ ಸರ್ಕಾರ ನಿರ್ಣಯವನ್ನು ಅಂಗೀಕರಿಸಿದ ಒಂದು ದಿನದ ನಂತರ, ಬಿಜೆಪಿ ಇಂದು(ಶುಕ್ರವಾರ) ಸದನದಿಂದ ಹೊರನಡೆದು ಪ್ರತಿಭಟನೆ ನಡೆಸಿತು. ಬಿಜೆಪಿ ಸಭಾತ್ಯಾಗ ಮಾಡಿದ ನಂತರ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಪಕ್ಷಗಳನ್ನು ಕಟುವಾಗಿ ಟೀಕಿಸಿದರು. ಸದನದಿಂದ ಹೊರನಡೆದಿರುವುದು ಪಕ್ಷಕ್ಕೆ ರಾಜ್ಯದ ಅಥವಾ ರೈತರ ಹಿತದ ಬಗ್ಗೆ ಕಾಳಜಿಯಿಲ್ಲ ಎಂದು ತೋರಿಸುತ್ತದೆ ಎಂದು ಆರೋಪಿಸಿದರು.

ತೆರಿಗೆ ಪಾಲಿನ ಸಮಾನ ಹಂಚಿಕೆ ಹಾಗೂ ರೈತರ ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಪಡಿಸುವ ಕಾನೂನು ಜಾರಿಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ನಿನ್ನೆ(ಗುರುವಾರ) ಎರಡು ನಿರ್ಣಯಗಳನ್ನು ಅಂಗೀಕರಿಸಲಾಗಿತ್ತು.

ಈ ಬಗ್ಗೆ ತಮ್ಮ ಅಧಿಕೃತ ʼಎಕ್ಸ್‌ʼ ಖಾತೆಯ ಮೂಲಕ  ಸಚಿವ ಪ್ರಿಯಾಂಕ್‌ ಖರ್ಗೆ, ‘ಕರ್ನಾಟಕ ಸರ್ಕಾರವು ಗುರುವಾರ ಎರಡು ನಿರ್ಣಯಗಳನ್ನು ಅಂಗೀಕರಿಸಿದೆ. ನಾಗರಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವು ಸಮಾನ ಮತ್ತು ತಾರತಮ್ಯರಹಿತ ಆರ್ಥಿಕ ಸಂಪನ್ಮೂಲಗಳ ಹಂಚಿಕೆಯಲ್ಲಿ ದೃಢವಾದ ನಿಲುವನ್ನು ಅಳವಡಿಸಿಕೊಳ್ಳಬೇಕು. ಎಲ್ಲಾ ಪ್ರದೇಶಗಳಿಗೂ ತಾರತಮ್ಯವಿಲ್ಲದೆ ಸಮಾನವಾದ ಆರ್ಥಿಕ ಸಂಪನ್ಮೂಲಗಳ ಹಂಚಿಕೆಯಾಗಬೇಕು. ವಿಶೇಷವಾಗಿ, ಕರ್ನಾಟಕದ ಜನರ ಅಭಿವೃದ್ಧಿ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದಂತೆ ಯಾವುದೇ ಅನ್ಯಾಯಕ್ಕೆ ಎಡೆಮಾಡಿಕೊಡಬಾರದು’ ಎಂದು ಕೇಂದ್ರವನ್ನು ಟೀಕಿಸಿದ್ದಾರೆ.

ರೈತರ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸುವ ಬಗ್ಗೆ ಕಾನೂನು ರೂಪಿಸಲು ಹಾಗೂ ರೈತರೊಂದಿಗೆ ಸಂಘರ್ಷಕ್ಕೆ ಆಸ್ಪದ ನೀಡದೆ ಅವರ ಸಮರ್ಥನೀಯ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ನಿರ್ಣಯ ಅಂಗೀಕರಿಸಲಾಯಿತು’ ಎಂದು ತಿಳಿಸಿದ್ದಾರೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಭಾವಿಸಿದ ಕಾರಣ ಆರ್ಥಿಕ ಸಂಪನ್ಮೂಲಗಳನ್ನು ಸಮಾನವಾಗಿ ಹಂಚಿಕೆ ಮಾಡುವಂತೆ ಸರ್ಕಾರವು ಮನವಿ ಸಲ್ಲಿಸಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಹಣಕಾಸು ಆಯೋಗದಿಂದ ನಾವು ಪಡೆಯಬೇಕಾದ ಮೊತ್ತವನ್ನು ನಮಗೆ ನೀಡಿಲ್ಲ. ಅನ್ಯಾಯ ಮಾಡಲಾಗಿದೆ. ಆದ್ದರಿಂದ ನಾವು ನಿರ್ಣಯವನ್ನು ಅಂಗೀಕರಿಸಿದ್ದೇವೆ. ಇದು ಸರ್ವಾನುಮತದ ನಿರ್ಣಯವಾಗಿದೆ. ಧ್ವನಿ ಮತದ ಮೇಲೆ ಅಂಗೀಕರಿಸಲಾಗಿದೆ. ನ್ಯಾಯಕ್ಕಾಗಿ ಮತ್ತು ರಾಜ್ಯಕ್ಕೆ ಸರಿಯಾದ ಹಣ ಮಂಜೂರು ಮಾಡುವಂತೆ ನಾವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ’ ಎಂದು ಹೇಳಿದರು.

ಆದರೆ, ಕಾಂಗ್ರೆಸ್ ದ್ವಂದ್ವ ನೀತಿಯನ್ನು ಅನುಸರಿಸುತ್ತಿದ್ದು, ಕೇವಲ ತಮ್ಮ ಅಜೆಂಡಾವನ್ನು ಪ್ರಚಾರ ಮಾಡಿಕೊಳ್ಳಲು ಯತ್ನಿಸುತ್ತಿದೆ ಎಂದು ಬಿಜೆಪಿ ಹೇಳಿದೆ.

ಕರ್ನಾಟಕದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಯುಪಿಎ ಅಧಿಕಾರದಲ್ಲಿದ್ದಾಗ ನಾವೆಲ್ಲರೂ ಅದನ್ನು ಶೇ 40 ಕ್ಕೆ ಏರಿಸಬೇಕೆಂದು ಒತ್ತಾಯಿಸಿದ್ದೆವು. ಆದರೆ, ಮನಮೋಹನ್ ಸಿಂಗ್ ಅದನ್ನು ಹೆಚ್ಚಿಸಲಿಲ್ಲ. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ 3-4 ತಿಂಗಳೊಳಗೆ ನರೇಂದ್ರ ಮೋದಿ ಅವರು ಫೆಡರಲ್ ಸಹಕಾರದ ಹೆಸರಿನಲ್ಲಿ ಅದನ್ನು ಶೇ 42ಕ್ಕೆ ಹೆಚ್ಚಿಸಿದರು. ಯುಪಿಎ ಸರ್ಕಾರದ ಅಡಿಯಲ್ಲಿ 15ನೇ ಹಣಕಾಸು ಆಯೋಗವು ಕೆಲಸ ಮಾಡಲು ಪ್ರಾರಂಭಿಸಿದಾಗ, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದರು. ಆಗ ಅವರು ರಾಜ್ಯವನ್ನು ಚೆನ್ನಾಗಿ ಯೋಜಿಸಲಿಲ್ಲ… 15ನೇ ಹಣಕಾಸು ಆಯೋಗದ ಅನುಷ್ಠಾನದ ಎರಡು ವರ್ಷಗಳ ನಂತರ, ಅವರು ಸಮಸ್ಯೆಯನ್ನು ಮತ್ತೆ ಎತ್ತಲು ಪ್ರಯತ್ನಿಸುತ್ತಿದ್ದಾರೆ. ಇದು ಸರ್ಕಾರದ ರಾಜಕೀಯ ಕಾರ್ಯಸೂಚಿಯನ್ನು ಪ್ರಚಾರ ಮಾಡಲು ಪ್ರಯತ್ನಿಸುತ್ತಿರುವುದನ್ನು ಸೂಚಿಸುತ್ತದೆ’ ಎಂದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!