spot_img
Wednesday, January 22, 2025
spot_img

ಭಾರತದ ಸಂಸ್ಕೃತಿಯ ಸಾರ ಗ್ರಾಮ ಪಂಚಾಯಿತಿ ವ್ಯವಸ್ಥೆಯಲ್ಲಿ ಕಾಣುವಂತಾಗಬೇಕು-ಹೊಳಪು ಉದ್ಘಾಟಿಸಿ ಯು.ಟಿ ಖಾದರ್

ಕೋಟ, ಫೆ.10: (ಜನಪ್ರತಿನಿಧಿ ವಾರ್ತೆ) ಭಾರತದ ಸಂಸ್ಕೃತಿ, ಸಾಮರಸ್ಯದ ಸಾರವನ್ನು ಕರ್ನಾಟಕದಲ್ಲಿ ಕಾಣಲು ಸಾಧ್ಯವಿದೆ. ಗ್ರಾಮ ಪಂಚಾಯಿತಿ ವ್ಯವಸ್ಥೆಯಲ್ಲಿ ಭಾರತದ ಸಂಸ್ಕೃತಿಯ ಸಾರವನ್ನು ಕಾಣಬೇಕು. ಎಷ್ಟೇ ಒತ್ತಡವಿದ್ದರೂ ಕೂಡಾ ಅವರು ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ, ಪರಿಹಾರಕ್ಕೆ ಶ್ರಮಿಸುತ್ತಾರೆ. ನಿತ್ಯವೂ ಕಾರ್ಯ ಒತ್ತಡ ಅನುಭವಿಸುವ ಪಂಚಾಯತ್ ಪ್ರತಿನಿಧಿಗಳು, ಸ್ಥಳೀಯಾಡಳಿತದ ಸಿಬ್ಬಂದಿಗಳು ತಮ್ಮ ಕ್ರೀಡೆ, ಸಾಂಸ್ಕೃತಿಕ ಪ್ರತಿಭೆಗಳನ್ನು ಪ್ರದರ್ಶಿಸಲು ಹೊಳಪು ಉತ್ತಮ ವೇದಿಕೆಯಾಗಿದೆ ಎಂದು ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಪರೀದ್ ಹೇಳಿದರು.

ಕೋಟತಟ್ಟು ಗ್ರಾಮ ಪಂಚಾಯತ್, ಡಾ.ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಡಾ.ಶಿವರಾಮ ಕಾರಂತ ಜನ್ಮದಿನೋತ್ಸವದ ಅಂಗವಾಗಿ ಕೋಟ ವಿವೇಕ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಡೆದ ಹೊಳಪು-2024 ಗ್ರಾಮ ಸರ್ಕಾರದ ದಿಬ್ಬಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆ ಮತ್ತು ಸಾಂಸ್ಕೃತಿಕತೆಯಲ್ಲಿ ಪಾಲ್ಗೊಳ್ಳುವುದರಿಂದ ಎಲ್ಲಾ ಒತ್ತಡಗಳಿಗೂ ಪರಿಹಾರ ಸಾಧ್ಯ. ಹಾಗೂ ಇನ್ನೂ ಉತ್ಸಾಹದಿಂದ ಕೆಲಸ ಮಾಡಲು ಹುರುಪು ನೀಡುತ್ತದೆ. ಸ್ಥಳೀಯಾಡಳಿತಗಳಿಗೆ ಹೆಚ್ಚಿನ ಹೊಣೆಗಾರಿಕೆಯಿದೆ. ಹಾಗೆಯೇ ಸ್ಥಳೀಯಾಡಳಿತ ಸದಸ್ಯರ ಹಲವು ಸಮಸ್ಯೆಗಳು, ಬೇಡಿಕೆಗಳು ಕೂಡಾ ಇದೆ. ಅದನ್ನು ಸರಕಾರದ ಗಮನಕ್ಕೆ ತರಲಾಗುವುದು. ಪಕ್ಷ, ಜಾತಿ, ಮತ, ಧರ್ಮ ಎಲ್ಲವನ್ನು ಮೀರಿ ಒಗ್ಗಟ್ಟಾಗಿ ಜನರ ಪರವಾಗಿ ಕೆಲಸ ಮಾಡೋಣ ಎಂದರು.

ಗ್ರಾಮ ಪಂಚಾಯತ್ ಸದಸ್ಯರು ಹೆಚ್ಚು ಅಧ್ಯಯನಶೀಲರಾಗಬೇಕು, ಮಾಹಿತಿಯನ್ನು ಹೊಂದಬೇಕು. ರಾಜ್ಯ ವಿಧಾನಸಭಾ ಅಧಿವೇಶನಕ್ಕೂ ಭೇಟಿ ನೀಡಿ, ಈ ಬಗ್ಗೆ ಮುಂಚಿತವಾಗಿ ನೊಂದಾಯಿಸಿಕೊಂಡು ಅಧಿವೇಶನ ವೀಕ್ಷಿಸಬಹುದು ಎಂದರು.

ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಕುಂದರ್ ಅಧ್ಯಕ್ಷತೆ ವಹಿಸಿದ್ದರು.

ಶಾಸಕ ಗುರ್ಮೆ ಸುರೇಶ ಶೆಟ್ಟಿ ಕ್ರೀಡಾ ಧ್ವಜಾರೋಹಣ ನೇರವೇರಿಸಿದರು. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಕ್ರೀಡಾ ಜ್ಯೋತಿ ಪ್ರಜ್ವಲನೆ ಮಾಡಿದರು. ಅದಾನಿ ಪವರ್ ಗ್ರೂಫ್‌ನ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಆಳ್ವ ಬೆಲೂನ್‌ಗಳನ್ನು ಹಾರಿ ಬಿಡುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಶಾಸಕ ಡಾ.ಭರತ್ ವೈ ಶೆಟ್ಟಿ ಪ್ರತಿಜ್ಞಾ ವಿಧಿ ಭೋದಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಶೆಟ್ಟಿ ಗಂಟಿಹೊಳೆ, ಜಯಪ್ರಕಾಶ್ ಹೆಗ್ಡೆ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ಡಾ.ಜಿ.ಶಂಕರ್, ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅಡಿಕೆಕೊಡ್ಲು, ಕೊಲ್ಲೂರು ದೇವಳದ ಮಾಜಿ ಆಡಳಿತ ಧರ್ಮದರ್ಶಿ ಕೆರಾಡಿ ಚಂದ್ರಶೇಖರ ಶೆಟ್ಟಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಎಚ್.ವಿ ಇಬ್ರಾಹಿಂಪುರ್, ಬೆಳ್ವೆ ಗಣೇಶ್ ಕ್ಯಾಶ್ಯೂ ಇಂಡಸ್ಟ್ರಿಸ್‌ನ ಗಣೇಶ್ ಕಿಣಿ, ಕೋಟ ವಿವೇಕ ವಿದ್ಯಾಸಂಸ್ಥೆಯ ಮಂಜುನಾಥ ಉಪಾದ್ಯಾಯ, ದೇವದಾಸ ನಾವಡ, ಕಿಶೋರ್ ಕುಮಾರ್ ಕುಂದಾಪುರ, ಬೆಳಪು ದೇವಿಪ್ರಸಾದ್ ಶೆಟ್ಟಿ, ಗೀತಾಂಜಲಿ ಸುವರ್ಣ, ಶ್ಯಾಮಲ ಕುಂದರ್, ನಯನ ಗಣೇಶ್, ಯು.ಎಸ್ ಶೆಣೈ, ಪೂಜಾ ಪೈ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪಥಸಂಚಲನದಲ್ಲಿ ಕಾಪು ಪುರಸಭೆ ಪ್ರಥಮ ಸ್ಥಾನದೊಂದಿಗೆ ಸಮಗ್ರ ಪ್ರಶಸ್ತಿ ಪಡೆಯಿತು. ಯಡ್ತಾಡಿ ಗ್ರಾಮ ಪಂಚಾಯತ್ ದ್ವಿತೀಯ ಸ್ಥಾನ ಪಡೆಯಿತು. ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಪ್ರಶಸ್ತಿ ಪ್ರದಾನ ಮಾಡಿದರು.

ಶಿವರಾಮ ಕಾರಂತರ ಪ್ರಶಸ್ತಿ ಪ್ರತಿಷ್ಠಾನದ ಗೌರವಾಧ್ಯಕ್ಷ ಆನಂದ್ ಸಿ ಕುಂದರ್ ಸ್ವಾಗತಿಸಿದರು. ಹೊಳಪು ಕಾರ್ಯಕ್ರಮದ ಸಂಚಾಲಕರು, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹರೀಶ್ ಶೆಟ್ಟಿ ಪಟ್ಟಿ ವಾಚಿಸಿದರು. ನರೇಂದ್ರ ಕುಮಾರ್ ಗಂಗೊಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಸತೀಶ್ ವಡ್ಡರ್ಸೆ ಕ್ರೀಡಾ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!