spot_img
Saturday, December 7, 2024
spot_img

ಆರೋಗ್ಯ ಕೇಂದ್ರಗಳ ಸಂಪೂರ್ಣ ಉನ್ನತೀಕರಣಕ್ಕೆ ಇಲಾಖೆ ಹಾಗೂ ಸರ್ಕಾರ ಕಟಿಬದ್ಧ : ದಿನೇಶ್‌ ಗುಂಡೂರಾವ್‌

AIISH ಮೈಸೂರಿನ ಔಟ್‌ರೀಚ್‌ ಸರ್ವೀಸ್‌ ಸೆಂಟರ್‌ನ ನೂತನ ಕಟ್ಟಡ ಹಾಗೂ ನೂತನ ಡಯಾಲಿಸಿಸ್‌ ಘಟಕದ ಉದ್ಘಾಟನೆ

ಜನಪ್ರತಿನಿಧಿ (ಕುಂದಾಪುರ) : ಸರ್ಕಾರ ಹಾಗೂ ಇಲಾಖೆಯಿಂದ ಜನರಿಗೆ ಸಿಗಬೇಕಾದ ಎಲ್ಲಾ ಉಚಿತ ಸೇವೆಗಳು ದೊರಕುವಂತಾಗಬೇಕು. ಮೆಡಿಕಲ್ ಸಪ್ಲೈ ಕಾರ್ಪೋರೇಷನ್ ನನ್ನು ಸಂಪೂರ್ಣವಾಗಿ ಸುಧಾರಣೆ ಮಾಡಿಸಿ, ಉನ್ನತೀಕರಣ ಮಾಡುವ  ಕೆಲಸವನ್ನು ಆಧ್ಯತೆಯಲ್ಲಿ ಮಾಡುತ್ತೇವೆ ಎಂದು ಆರೋಗ್ಯ ಮತ್ತು ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಅವರು, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕು. ಕ. ಇಲಾಖೆ, ಉಡುಪಿ ಜಿಲ್ಲೆ ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆ, ಕುಂದಾಪುರ ಇಲ್ಲಿನ ಅಖಿಲ ಭಾರತ್ ವಾಕ್ ಶ್ರವಣ ಸಂಸ್ಥೆ (AIISH) ಮೈಸೂರು ಇದರ ಔಟ್ ರೀಚ್ ಸರ್ವೀಸ್ ಸೆಂಟರ್ ನ ನೂತನ ಕಟ್ಟಡ ಹಾಗೂ ನೂತನ ಡಯಾಲಿಸಿಸ್ ಘಟಕ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ರಾಜ್ಯದಲ್ಲಿ ಒಟ್ಟಾರೆಯಾಗಿ 800 ಡಯಾಲಿಸಿಸ್ ಘಟಕವನ್ನು ಸ್ಥಾಪನೆ ಮಾಡ್ತಿದ್ದೇವೆ. 48 ಹೊಸ ಆರೋಗ್ಯ ಕೇಂದ್ರವನ್ನು ನಿರ್ಮಿಸುವುದಕ್ಕೆ ಇಲಾಖೆ ಮಟ್ಟದಲ್ಲಿ ಹಾಗೂ ಸರ್ಕಾರ ಮಟ್ಟದಲ್ಲಿ ಯೋಜಿಸಲಾಗಿದೆ. ಆರೋಗ್ಯ ಕೇಂದ್ರಗಳಲ್ಲಿರುವ ಇರುವ ಎಲ್ಲಾ ಲೋಪ ದೋಷಗಳನ್ನು ಸರಿ ಪಡಿಸುವುದಕ್ಕೆ ನಮ್ಮ ಸರ್ಕಾರ ಸಂಪೂರ್ಣ ಕಟಿಬದ್ಧವಾಗಿದೆ. ಜನರಿಗೆ ಗುಣಮಟ್ಟದ ಸೇವೆ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಆರೋಗ್ಯ ಕೇಂದ್ರಗಳ ಉನ್ನತೀಕರಣಕ್ಕೆ ಸುಮಾರು 500 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆದಿದ್ದೇವೆ. ತಾಲೂಕು ಕೆಂದ್ರಗಳಲ್ಲಿ ಕೊರತೆ ಇರುವ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಶೀಘ್ರ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದರು.

ಅವರು ವಾಕ್ ಶ್ರವಣ ಸಂಸ್ಥೆ ಮೈಸೂರು ಇದರ ಔಟ್ ರೀಚ್ ಸರ್ವೀಸ್ ಸೆಂಟರ್ ನ ನೂತನ ಕಟ್ಟಡ ಈ ಭಾಗಕ್ಕೆ ತುರ್ತಿತ್ತು. ಹೃದಯ ಶ್ರೀಮಂತಿಕೆಗೆ ಪ್ರೇರಣೆಯಾಗುವಂತಹ ಕೆಲಸವನ್ನು ಶಿವರಾಮ್ ಪುತ್ರನ್ ಮತ್ತು ಮಕ್ಕಳು ಮಾಡಿದ್ದಾರೆ. ಹಾಗೂ ಇವರೊಂದಿಗೆ ಕೈಜೋಡಿಸಿದ ರೋಟರಿ ಕ್ಲಬ್‌ ಕುಂದಾಪುರ ಹಾಗೂ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಗಳಿಗೆ ಸರ್ಕಾರದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಆರೋಗ್ಯ ಸಚಿವರು ಅವರನ್ನು ಅಭಿನಂದಿಸಿದ್ದಾರೆ.

ಸರ್ಕಾರ ಹಾಗೂ ಇಲಾಖೆಯಿಂದ ಸಿಗಬೇಕಾದ ಎಲ್ಲಾ ಉಚಿತ ಸೇವೆಗಳು ದೊರಕುವಂತಾಗಬೇಕು. ಮೆಡಿಕಲ್ ಸಪ್ಲೈ ಕಾರ್ಪೋರೇಷನ್ ನನ್ನಿ ಸಂಪೂರ್ಣವಾಗಿ ಸುಧಾರಣೆ ಮಾಡಿಸಿ, ಉನ್ನತೀಕರಣ ಮಾಡುವ  ಕೆಲಸವನ್ನು ಆಧ್ಯತೆಯಲ್ಲಿ ಮಾಡುತ್ತೇವೆ. ಸರ್ಕಾರದ ಸೇವೆಗಳು, ಯೋಜನೆಗಳು ಜನರಿಗೆ  ತಲುಪವಂತಹ ಕೆಲಸ ಮಾಡಬೇಕಾಗಿದೆ. ಸಿಬ್ಬಂದಿಗಳ ಕೊರತೆಯನ್ನು ನೀಗಿಸುವ ಎಲ್ಲಾ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ಹಾಸಿಗೆಯ ಕೊರತೆ ಇದೆ, ಆಸ್ಪತ್ರೆಯ ಕಟ್ಟಡ ದುರಸ್ತಿಯ ಬಗ್ಗೆ ಸರ್ಕಾರ ಮಟ್ಟದಲ್ಲಿ ಆದಷ್ಟು ಬೇಗ ಅನುದಾನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು‌. ಸಿಟಿ ಸ್ಕ್ಯಾನ್, ಡಯಾಲಿಸಿಸ್ ಹೆಚ್ಚುವರಿ ಘಟಕದ ಸ್ಥಾಪನೆ ಹಾಗೂ ಸಿಬ್ಬಂದಿ ಕೊರತೆಯನ್ನು ನೀಗಿಸುವಂತೆ ಸಚಿವರಲ್ಲಿ ವಿನಂತಿಸಿಕೊಂಡರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ್‌ ಹೆಗ್ಡೆ, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್‌ ಬಾಯಲ್‌, ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿ ಡಾ. ಐ. ಪಿ ಗಡಾದ ಹಾಗೂ ಅಖಿಲ ಭಾರತ ವಾಕ್‌ ಶ್ರವಣ ಸಂಸ್ಥೆ ಮೈಸೂರು ಇದರ ನಿರ್ದೇಶಕಿ ಪ್ರೊ.ಎಮ್.‌ ಪುಷ್ಪವತಿ, ಪುರಸಭಾ ಸದಸ್ಯೆ ದೇವಕಿ ಪಿ. ಸಣ್ಣಯ್ಯ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದಲ್ಲಿ ಶಿವರಾಮ ಪುತ್ರನ್‌ ಹಾಗೂ ರೋಟರಿ ಕ್ಲಬ್‌ ಕುಂದಾಪುರದ ಸತ್ಯನಾರಾಯಣ ಪುರಾಣಿಕ್‌, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಸಭಾಪತಿ ಜಯಕರ ಶೆಟ್ಟಿ ಹಾಗೂ ವಾಕ್‌ ಶ್ರವಣ ಕೇಂದ್ರಕ್ಕೆ ಕಾರಣೀಕರ್ತರಾದವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಡಾ. ರೋಬರ್ಟ್‌ ರೆಬೆಲ್ಲೋ ಶಸ್ತ್ರಶಿಕಿತ್ಸಕರು (ಆಡಳಿತ) ಉಪ ವಿಭಾಗೀಯ ಸಾರ್ವಜನಿಕ ಆಸ್ಪತ್ರೆ, ಕುಂದಾಪುರ ಇವರು ಪ್ರಸ್ತಾವಿಸಿ ಸ್ವಾಗತಿಸಿದರು. ಪತ್ರಕರ್ತ ಕೆ. ಸಿ ರಾಜೇಶ್‌ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನಾ ಸಚಿವರು ಆಸ್ಪತ್ರೆಯನ್ನು ಪರಿಶೀಲಿಸಿದರು. ಆಸ್ಪತ್ರೆಯ ಸಿಬ್ಬಂದಿಗಳೊಂದಿಗೆ ಕೆಲ ಕಾಲ ಚರ್ಚಿಸಿ, ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ವಿಚಾರಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!