spot_img
Monday, June 23, 2025
spot_img

ಉಪ್ಪಿನಕುದ್ರು ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ-2024 ಪ್ರದಾನ

 ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಒಂಭತ್ತನೇ ವಾರ್ಷಿಕೋತ್ಸವ ಹಾಗೂ ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ- 2024  ಪ್ರದಾನ ಸಮಾರಂಭ ಇತ್ತೀಚೆಗೆ ಗೊಂಬೆ ಮನೆಯಲ್ಲಿ ಜರುಗಿತು. 

ಮಲ್ಟಿಟೆಕ್ ಅಟೋ ಪಾರ್ಟ್ಸ್, ಡೊಡ್ಡಬಳ್ಳಾಪುರ ಇದರ ಆಡಳಿತ ಪಾಲುದಾರರಾದ ನಾಗಭೂಷಣ ರಮೇಶ್ ಐತಾಳ್ ಉಪ್ಪಿನಕುದ್ರು ಅಕಾಡೆಮಿ ಕಟ್ಟಡದ ಆವರಣದಲ್ಲಿ ಸೋಲಾರ್ ಸ್ಟ್ರೀಟ್ ಲೈಟ್ ಹಾಗೂ ಏಣಿಯನ್ನು ಕೊಡುಗೆಯಾಗಿ ನೀಡಿ ಉದ್ಘಾಟಿಸಿದರು.

ಅಕಾಡೆಮಿಯ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾಹೆ, ಮಣಿಪಾಲ ಇದರ ಡೆಪ್ಯೂಟಿ ರಿಜಿಸ್ಟ್ರಾರ್ ಟಿ. ರಂಗ ಪೈ ಉದ್ಘಾಟಿಸಿದರು. ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ -೨೦೨೪ ನ್ನು ಹಿರಿಯ ಯಕ್ಷಗಾನ ಚಂಡೆ ಕಲಾವಿದ ಏಳ್‌ಜಿತ್ ಸದಾನಂದ ಪ್ರಭು, ಇವರಿಗೆ ಪ್ರದಾನ ಮಾಡಲಾಯಿತು.

ಮುಖ್ಯ ಅತಿಥಿಗಳಾಗಿ ಡಾ ಬಿ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ಸಲಹೆಗಾರರು ಹಾಗೂ ಮನೋರೋಗತಜ್ಞರಾದ ಡಾ.ಪಿ.ವಿ.ಭಂಡಾರಿ, ಉಡುಪಿ ಶಿವಾನಂದ ಪೈ ( ಲೆಕ್ಕ ಪರಿಶೋಧಕರು, ಮಂಗಳೂರು) ಹಾಗೂ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರುರವರು ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಮದ್ದಲೆ ಕಲಾವಿದ ಸುರೇಶ್ ಉಪ್ಪೂರ, ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯ ಸೂತ್ರಧಾರಿ ಪ್ರಭಾಕರ್ ಆಚಾರ್, ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ನೆಂಪು, ರಾಜ್ಯ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಪಟು ಕುಮಾರಿ ಪ್ರಾರ್ಥನಾ ಪೈ, ಗಂಗೊಳ್ಳಿ ಇವರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು. ಸೋಲಾರ್ ಲೈಟ್ ಕೊಡುಗೆ ನೀಡಿದ ನಾಗಭೂಷಣ ರಮೇಶ್ ಐತಾಳ್, ಉಪ್ಪಿಮಕುದ್ರು ಹಾಗೂ ಯಕ್ಷಗಾನ ಗಾನ ವೈಭವ ಪ್ರಾಯೋಜಕರಾದ ಶಿವಾನಂದ ಪೈ ಯವರನ್ನೂ ಸಹ ಅಕಾಡೆಮಿಯ ವತಿಯಿಂದ ಗೌರವಿಸಲಾಯಿತು.
ಯಕ್ಷಗಾನ ಗೊಂಬೆ ಚಿತ್ರ ಬಿಡಿಸಿ ಬಹುಮಾನ ಗೆಲ್ಲಿ ಆನ್‌ಲೈನ್ ಚಿತ್ರ ಬಿಡಿಸುವ ಸ್ಪರ್ಧೆಯ ವಿಜೇತರಿಗೆ ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ,ಸ್ಥಳೀಯ ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.

ಮನೋರಂಜನಾ ಕಾರ್ಯಕ್ರಮವಾಗಿ ಶಿವಾನಂದ ಪೈ ( ಲೆಕ್ಕ ಪರಿಶೋಧಕರು, ಮಂಗಳೂರು)ಇವರ ಪ್ರಾಯೋಜಕತ್ವದಲ್ಲಿ ಮಯ್ಯ ಯಕ್ಷ ಬಳಗ, ಹಾಲಾಡಿ ಇವರಿಂದ ತೆಂಕು – ಬಡಗು ಯಕ್ಷಗಾನ ಗಾನ ವೈಭವ ಪ್ರಸ್ತುತಿಯಡಿ ಬಡಗಿನ ಖ್ಯಾತ ಭಾಗವತದ್ವಯರಾದ ರಾಘವೇಂದ್ರ ಮಯ್ಯ ಹಾಲಾಡಿ, ಪ್ರಸನ್ನ ಭಟ್ ಬಾಳ್ಕಲ್, ಮದ್ದಲೆಯಲ್ಲಿ ಶಶಾಂಕ್ ಆಚಾರ್, ಚಂಡೆಯಲ್ಲಿ ಸುಜನ ಹಾಲಾಡಿ, ತೆಂಕಿನ ಭಾಗವತರಾಗಿ ಶ್ರೀಮತಿ ಅಮೃತ ಅಡಿಗ ಮತ್ತು ಬಳಗದವರು ನೆರೆದ ಪ್ರೇಕ್ಷಕರ ಗಮನ ಸೆಳೆದರು.

ಬೇಳೂರು ವಿಷ್ಣುಮೂರ್ತಿ ನಾಯಕ್ ನಿರೂಪಿಸಿದರು. ಇಡೀ ಕಾರ್ಯಕ್ರಮವನ್ನು ನಾಗೇಶ್ ಶ್ಯಾನುಭಾಗ್, ಬಂಟ್ವಾಡಿ ಮತ್ತು ರಾಜೇಂದ್ರ ಪೈ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,400SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!