spot_img
Sunday, June 14, 2026
spot_img

ವಂಡ್ಸೆ: ಪತ್ರ ಬರೆದಿಟ್ಟು ಮಹಿಳೆ ನಾಪತ್ತೆ

ಕೊಲ್ಲೂರು: ಪತ್ರ ಬರೆದಿಟ್ಟು ಗೃಹಿಣಿ ಮನೆಯಿಂದ ನಾಪತ್ತೆಯಾಗಿರುವ ಘಟನೆ ವಂಡ್ಸೆಯಲ್ಲಿ ನಡೆದಿದೆ. ವಂಡ್ಸೆಯ ಅಬ್ದುಲ್ ರೆಹಮಾನ್ ಅವರ ಪತ್ನಿ ಆಪ್ಸಾನಾ (23) ಮನೆಯಿಂದ ನಾಪತ್ತೆಯಾಗಿದ್ದಾರೆ.

ಆಪ್ಸಾನಾ ಅವರು ಅಬ್ದಲ್ ರೆಹಮಾನ್ ರವರ ತಾಯಿ ಮತ್ತು ಅಕ್ಕನೊಂದಿಗೆ ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮದ ಮನೆಯಲ್ಲಿ ವಾಸಮಾಡಿಕೊಂಡಿದ್ದು ಜ.30 ರಂದು ರಾತ್ರಿ11 ಗಂಟೆಗೆ ಮಲಗಿಕೊಂಡಿದ್ದವರು ಜ.31 ರಂದು ಬೆಳಿಗ್ಗೆ 10 ಗಂಟೆಯಾದರೂ ರೂಮ್ ನಿಂದ ಹೊರಗೆ ಬಾರದ ಕಾರಣ ಆಪ್ಸಾನಾರವರ ಅತ್ತೆ ಜುನಿಯಾರವರು ರೂಮ್ ಗೆ ಹೋಗಿ ನೋಡಿದ್ದು ಅಪ್ಸಾನಾ ರವರು ಇರುವುದಿಲ್ಲ. ಸುತ್ತಮುತ್ತ ಹುಡುಕಾಡಿದ್ದು ಅವರ ಪತ್ತೆಯಾಗಿರುವುದಿಲ್ಲ. ಸಂಬಂಧಿಕರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದರೂ ಅಲ್ಲಿಗೆ ಬಂದಿಲ್ಲ ಎನ್ನುವ ಮಾಹಿತಿ ದೊರೆಯುತ್ತದೆ. ಅವರ ರೂಮ್‌ನಲ್ಲಿ ಹುಡುಕಾಡಿದಾಗ (ನಾನು ತುಂಬಾ ದೂರ ಹೋಗುತ್ತಿದ್ದು ನನ್ನನ್ನು ಹುಡುಕಬೇಡಿ) ಎಂದು ಆಂಗ್ಲ ಭಾಷೆಯಲ್ಲಿ ಬರೆದ ಚೀಟಿ ಪತ್ತೆಯಾಗಿದೆ ಎಂದು ಜುಲ್ಪಿಕಾರ್ ಆಲಿ ಕೊಲ್ಲೂರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!