Sunday, September 8, 2024

ವಿದ್ಯಾರ್ಥಿಗಳಲ್ಲಿ ಇಚ್ಛಾಶಕ್ತಿ ಇರಬೇಕಾದದ್ದು ಮುಖ್ಯ : ‘ಪರೀಕ್ಷಾ ಪೇ ಚರ್ಚಾ 2024’ರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರಧಾನಿ ಟಿಪ್ಸ್‌

ಜನಪ್ರತಿನಿಧಿ ವಾರ್ತೆ( ನವದೆಹಲಿ): ಪ್ರಧಾನ ಮಂತ್ರಿ ನರೇಂದ್ರ ಮೋದಿ ‘ಪರೀಕ್ಷಾ ಪೇ ಚರ್ಚಾ 2024’ರ ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ಇಂದು(ಸೋಮವಾರ) ನೇರ ಸಂವಾದದಲ್ಲಿ ಭಾಗವಹಿಸಿ ಚರ್ಚಿಸಿದರು.  ಕಾರ್ಯಕ್ರಮವು ಇಂದು ಬೆಳಗ್ಗೆ 11 ಗಂಟೆಗೆ ದೆಹಲಿಯ ಐಟಿಪಿಒದ ಭಾರತ ಮಂಟಪ ಸಭಾಂಗಣದಲ್ಲಿ ನೆರವೇರಿತು.  

ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಟಿಪ್ಟ್‌ ಕೊಟ್ಟ ಪ್ರಧಾನಿ : 


ಇಚ್ಛಾಶಕ್ತಿ ಬೇಕು: ಇಚ್ಛಾಶಕ್ತಿ ಪ್ರತಿಯೊಬ್ಬರಲ್ಲಿಯೂ ಇರಬೇಕಾಗಿರುವುದು ಮುಖ್ಯ. ಇಚ್ಛಾಶಕ್ತಿ, ಸಾಧಿಸುವ ಮನಸ್ಥಿತಿ ಇದ್ದರೆ ಒತ್ತಡದ ನಡುವೆಯೂ ನಾವು ಯಶಸ್ಸನ್ನು ಕಾಣಬಹುದಾಗಿದ. ಒತ್ತಡವನ್ನು ನಿಭಾಯಿಸುವ ಕಲೆಯನ್ನು ಕಲಿತುಕೊಳ್ಳಬೇಕು,  ಒತ್ತಡವನ್ನು ನಿಭಾಯಿಸುವುದು ಕೇವಲ ವಿದ್ಯಾರ್ಥಿಯ ಕೆಲಸವಲ್ಲ, ಪ್ರಕ್ರಿಯೆಯನ್ನು ಸುಲಭಗೊಳಿಸುವ ಜವಾಬ್ದಾರಿಯು ಮನೆಯಲ್ಲಿ ಪೋಷಕರು ಮತ್ತು ಶಾಲೆಯಲ್ಲಿ ಶಿಕ್ಷಕರ ಮೇಲೆ ಕೂಡ ಇದೆ.

ಸ್ನೇಹಿತರು ಮುಖ್ಯ: ಮಹತ್ವಾಕಾಂಕ್ಷೆಯ ಸಸ್ನೇಹ ಬಳಗ ಬಹಳ ಮುಖ್ಯ ಪಾತ್ರ ವಹಿಸುತ್ತದೆ.. ನಾವು ಅವರ ಸಾಧನೆಗಳ ಬಗ್ಗೆ ಚಿಂತಿಸದೆ ನಮ್ಮ ಪ್ರಗತಿಗೆ ಶ್ರಮಿಸಬೇಕು. ನಾವು ದುರ್ಬಲವಾಗಿರುವ ಕ್ಷೇತ್ರಗಳಲ್ಲಿ ಸುಧಾರಿಸಲು ಮತ್ತು ಯಶಸ್ಸಿನ ಹಾದಿಯಲ್ಲಿ ಕೈ ಜೋಡಿಸಲು ನಾವು ನಮ್ಮ ಸ್ನೇಹಿತರ ಸಹಾಯವನ್ನು ಬಳಸಬೇಕು. ಉತ್ತಮ ಹಾಗೂ ಮಹಾತ್ಮಾಕಾಂಕ್ಷೆಯ ಸ್ನೇಹ ಬಳಗವನ್ನು ಹೊಂದಿರುವುದು ನಮ್ಮ ಬದುಕಿಗೊಂದು ದೊಡ್ಡ ಆಶೀರ್ವಾದ ಇದ್ದ ಹಾಗೆ.

ಶಿಕ್ಷಕರು-ವಿದ್ಯಾರ್ಥಿ ಬಾಂಧವ್ಯದ ಮಹತ್ವದ್ದು: ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ನಿವಾರಿಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ವಿಶೇಷವಾಗಿ ಪರೀಕ್ಷೆಯ ಸಂದರ್ಭಗಳಲ್ಲಿ, ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಒಂದು ಉತ್ತಮ ಸಂಪರ್ಕ ಸಾಧಿಸಬೇಕು. ಅವರೊಂದಿಗೆ ಸಕಾರಾತ್ಮಕ ಬಾಂಧವ್ಯವನ್ನು ಸೃಷ್ಟಿಸಬೇಕು. ಶಿಕ್ಷಕರು ಪಠ್ಯಕ್ರಮವನ್ನು ಮೀರಿ ವಿದ್ಯಾರ್ಥಿಗಳೊಂದಿಗೆ ಒಂದು ಅವಿನಾಭಾವ ಬಾಂಧವ್ಯವನ್ನು ಹೊಂದಿರಬೇಕು. ಇದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಹೋಲಕೆ ಮಾಡಬೇಡಿ : ಪರೀಕ್ಷಾ ಪೆ ಚರ್ಚಾ 2024 ರ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪ್ರಧಾನಮಂತ್ರಿಯವರು, ಚಿಕ್ಕ ಮಕ್ಕಳಿಂದಲೂ ವಿದ್ಯಾರ್ಥಿಗಳ ಕುಟುಂಬಗಳಲ್ಲಿ ಮಕ್ಕಳನ್ನು ಬೇರೆಯವರ ಜೊತೆ ಹೋಲಿಕೆ ಮಾಡುವ ಪ್ರವೃತ್ತಿಯಿರುತ್ತದೆ. ನಿಮ್ಮ ಮಕ್ಕಳನ್ನು ಬೇರೆ ಮಕ್ಕಳ ಸಾಧನೆಗಳೊಂದಿಗೆ ಯಾವತ್ತಿಗೂ ಹೋಲಿಕೆ ಮಾಡಬೇಡಿ. ಅದು ಮಕ್ಕಳಲ್ಲಿ ನೈತ್ಯಾತ್ಮಕ ಪರಿಣಾಮ ಮಕ್ಕಳ ಮೇಲೆ ಬೀರುತ್ತದೆ.

ಇನ್ನು, ಕುಂದಾಪುರ‌ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ‌ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಗಾರ್ಗಿದೇವಿ ಪರೀಕ್ಷಾ ಪೆ ಚರ್ಚಾ 2024 ರ ಸಂವಾಧ ಕಾರ್ಕ್ರಮದಲ್ಲಿ ಭಾಗಿಯಾಗಿದ್ದಾರೆ. ಈಕೆ ದೇವಲ್ಕುಂದದ‌ ಅಶೋಕ್ ಸುವರ್ಣ ಮತ್ತು ನಾಟ್ಯ ವಿದುಷಿ ಪ್ರವಿತಾ‌ ಅಶೋಕ್‌ ದಂಪತಿಯ ಪುತ್ರಿ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!