spot_img
Wednesday, January 22, 2025
spot_img

ಅತ್ಯುನ್ನತ ಸ್ಥಾನದಲ್ಲಿ ದಲಿತ ಮಹಿಳೆ ಕೂತಿದ್ದಾರೆಂದು ಕಾಂಗ್ರೆಸಿಗರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ : ಬಿ. ವೈ. ವಿಜಯೇಂದ್ರ

ಜನಪ್ರತಿನಿಧಿ ವಾರ್ತೆ (ಕಲಬುರಗಿ) : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿ ಬಗ್ಗೆ ಅಗೌರವಾಗಿ ಮಾತನಾಡಿರುವುದು ಅಕ್ಷಮ್ಯ ಅಪರಾಧ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.

ಇಲ್ಲಿ ಮಾಧ್ಯಮ ವರದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ರಾಷ್ಟ್ರಪತಿಯವರ ಕುರಿತಾಗಿ ಅವಹೇಳನಕಾರಿ ಮಾತು ಸಿಎಂ ಬಾಯಿಯಲ್ಲಿ ಬಾಯಿತಪ್ಪಿ ಬಂದಿದೆ ಅಂತ ಅನ್ನಿಸುತ್ತಿಲ್ಲ. ಅದು ಅವರ ಅಂತರಾಳದ ಭಾವನೆಗಳನ್ನು ಮಾತಿನ ಮೂಲಕ ಹೊರ ಹಾಕಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಸಿದ್ದರಾಮಯ್ಯ ಒಬ್ಬ ಅನುಭವಿ ಮುಖ್ಯಮಂತ್ರಿಯಾಗಿದ್ದಾರೆ, ಅವರಿಂದ ರಾಷ್ಟ್ರಪತಿಗಳ ಬಗ್ಗೆ ಅಗೌರವದ ಮಾತು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಮುಖ್ಯಮಂತ್ರಿ ಬಾಯಿಯಿಂದ ಯಾಕೆ ಈ ಮಾತು ಹೊರಡಿತು ಎನ್ನುವುದು ನಿಜವಾಗಿಯೂ ಆಶ್ವರ್ಯ‌‌ ಮೂಡಿಸಿದೆ ಎಂದು ಅವರು ಹೇಳಿದ್ದಾರೆ.

ರಾಷ್ಟ್ರಪತಿ ಸ್ಥಾನಕ್ಕೆ ಅಗೌರವದ ರೀತಿ ಮಾತನಾಡಿರುವುದು. ಎಲ್ಲೋ ಒಂದು ಕಡೆ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ನೋವು ಕಾಡುತ್ತಿದೆ.‌ ಅತ್ಯುನ್ನತ ಸ್ಥಾನದಲ್ಲಿ ದಲಿತ ಮಹಿಳೆ ಕೂತಿದ್ದಾರೆಂದು ಕಾಂಗ್ರೆಸಿಗರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ.‌ ದಲಿತರನ್ನು ಗುತ್ತಿಗೆ ತೆಗೆದುಕೊಂಡಂತೆ ಮಾತನಾಡುವುದು ಕಾಂಗ್ರೆಸ್ ನವರ ಭಾವನೆಯಾಗಿದೆ.‌ ದಲಿತರ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡುತ್ತಾ ಗುತ್ತಿಗೆ ತಗೊಂಡಂತೆ ಮಾತನಾಡುತ್ತಾರೆ ಎಂದವರು ವಾಗ್ದಾಳಿ ಮಾಡಿದ್ದಾರೆ.

ಇನ್ನು, ಮೋದಿ ನಡವಳಿಕೆ ಗಮನಿಸಿ 27 ಕ್ಕೂ ಹೆಚ್ಚು ಹಿಂದುಳಿದ ಸಮಾಜಕ್ಕೆ ಸೇರಿದವರನ್ನು ಕೇಂದ್ರದ ಕ್ಯಾಬಿನೆಟ್ ನಲ್ಲಿ ತೆಗೆದುಕೊಂಡಿದ್ದಾರೆ.‌ ದೇಶದ ಅತ್ಯುನ್ನತ ಸ್ಥಾನಕ್ಕೆ ದಲಿತ ಮಹಿಳೆಯನ್ನು ಕೂಡಿಸಿದ್ದಾರೆ. ಇದ್ಯಾವುದನ್ನೂ ಸಹಿಸಿಕೊಳ್ಳಲು ಕಾಂಗ್ರೆಸ್ ನವರಿಗೆ ಆಗುತ್ತಿಲ್ಲ ಎಂದು ವಿಜಯೇಂದ್ರ ಟೀಕಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!