spot_img
Sunday, April 5, 2026
spot_img

ಧರ್ಮಸ್ಥಳ ಮೇಳದ ವೇದಿಕೆಯಲ್ಲಿ ವಿಷ್ಣುಮೂರ್ತಿ ಪುರಾಣಿಕರಿಗೆ ಸನ್ಮಾನ

ಕುಂದಾಪುರ: ಕೋಟೇಶ್ವರ ಕುದುರೆಕೆರೆಬೆಟ್ಟಿನ ನವಗ್ರಹ ವಾಸ್ತು ಶಾಸ್ತ್ರಾಲಯದ ಎದುರುಗಡೆಯಲ್ಲಿ ವಾಸ್ತುತಜ್ಞ ಡಾ.ಬಸವರಾಜ್ ಶೆಟ್ಟಿಗಾರ್ ಅವರ ಹರಕೆ ಬಯಲಾಟದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದವರ ವೇದಿಕೆಯಲ್ಲಿ ಮಾರ್ಕೋಡಿನ ಹಿರಿಯ ನಾಗರಿಕರಾದ ಕೋಟೇಶ್ವರ ಕೋದಂಡರಾಮ ದೇವಸ್ಥಾನದ ಮಾಜಿ ಧರ್ಮದರ್ಶಿಗಳಾದ ವಿಷ್ಣುಮೂರ್ತಿ ಪುರಾಣಿಕರವರನ್ನು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆಯವರು ಸನ್ಮಾನಿಸಿ ಗೌರವಿಸಿದರು.

ಮುಖ್ಯ ಅತಿಥಿಗಳಾಗಿ ಪದ್ಮಶಾಲಿ ಮಹಾಸಭಾದ ಅಧ್ಯಕ್ಷರಾದ ರಾಮದಾಸ್ ಪಣಿಯಾಡಿ, ಕೋಟೇಶ್ವರ ರೋಟರಿ ಅಧ್ಯಕ್ಷರಾದ ಜಗದೀಶ ಮೊಗವೀರ, ಹೈದರಾಬಾದಿನ ಉದ್ಯಮಿ ಚಂದ್ರಶೇಖರ್ ಶೆಟ್ಟಿ, ಹಂಗಳೂರು ಶನೀಶ್ವರ ದೇವಸ್ಥಾನದ ಧರ್ಮದರ್ಶಿ ಅಣ್ಣಯ್ಯ ಪೂಜಾರಿ, ಕೋಟ ಶನೇಶ್ವರ ದೇವಸ್ಥಾನದ ಧರ್ಮದರ್ಶಿ ಭಾಸ್ಕರ್ ಸ್ವಾಮಿ, ಸಾಲಿಕೇರಿ ಬ್ರಹ್ಮಲಿಂಗ ವೀರಭದ್ರ ದುರ್ಗಪರಮೇಶ್ವರಿ ದೇವಸ್ಥಾನದ ಸುರೇಶ್ ಶೆಟ್ಟಿಗಾರ್, ಮೇಳದ ಮೆನೇಜರ್ ಗಿರೀಶ್ ಹೆಗ್ಡೆ, ಕೋಟೇಶ್ವರ ಪದ್ಮಶಾಲಿ ಸಂಘದ ಜನಾರ್ಧನ್ ಶೆಟ್ಟಿಗಾರ್, ಸಿ‌ಎ ರಾಜಗೋಪಾಲ್ ಪುರಾಣಿಕ ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಅಪ್ಪಣ್ಣ ಹೆಗ್ಗಡೆಯವರು ಮಾತನಾಡುತ್ತಾ ಯಕ್ಷಗಾನ ಮೇಳವೆಂದರೆ ಸಂಚಾರಿ ದೇವಸ್ಥಾನ ಇದ್ದಂತೆ. ಇಂತಹ ಬೆಳಕಿನ ಸೇವೆಯನ್ನು ಹರಕೆ ರೂಪದಲ್ಲಿ ಮಾಡಿಸಿದಂತ ಶ್ರೀಮತಿ ಕಾವ್ಯಶ್ರೀ ಮತ್ತು ಪ್ರಸಂಗ ಕರ್ತ ಬಸವರಾಜ್ ಶೆಟ್ಟಿಗಾರ್ ರವರು ಪುಣ್ಯಕ್ಕೆ ಭಾಜನರಾಗಿದ್ದಾರೆ ಈ ಸಂದರ್ಭದಲ್ಲಿ ವಿಷ್ಣುಮೂರ್ತಿ ಪುರಾಣಿಕರವರ ಸನ್ಮಾನಿಸಿ ಗೌರವಿಸಿರುವುದು ಈ ನಾಡಿಗೆ ಹೆಮ್ಮೆ ಎನಿಸಿದೆ ಎಂದು ಶುಭ ಹಾರೈಸಿದರು.

ಕಾರ್ಯಕ್ರಮವನ್ನು ಸಂಯೋಜಿಸಿದ ಬಸವರಾಜ್ ಶೆಟ್ಟಿಗಾರ್ ಅವರು ಮೇಳದ ಸರ್ವ ಕಲಾವಿದರಿಗೂ ಮತ್ತು ಸಿಬ್ಬಂದಿ ವರ್ಗದವರಿಗೂ ಸ್ಮರಣಕ್ಕೆ ನೀಡಿ ಗೌರವಿಸಿದರು ಲೋಕೇಶ್ ಕುಮಾರ್ ಸ್ವಾಗತಿಸಿ, ಗುರುರಾಜ್ ಶೆಟ್ಟಿಗಾರ್ ವಂದಿಸಿದರು
ಸಭಾ ಕಾರ್ಯಕ್ರಮದ ನಂತರ ಧರ್ಮಸ್ಥಳ ಮೇಳದವರಿಂದ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಅದ್ದೂರಿಯಾಗಿ ಜರಗಿತು. ನಂತರ ತೆಂಕುತಿಟ್ಟಿನ ಪ್ರಸಿದ್ಧ ಹಿಮ್ಮೇಳ ಮುಮ್ಮೆಳದವರಿಂದ ಶನೀಶ್ವರ ಮಹಾತ್ಮೆ ಯಕ್ಷಗಾನ ತಾಳಮದ್ದಳೆ, ಬ್ರಾಹ್ಮಿ ಮುಹೂರ್ತದ ತನಕ ಜರಗಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!