spot_img
Monday, April 6, 2026
spot_img

ಬೀಜಾಡಿ: ಅಮೇರಿಕಾದ ಪ್ರಜೆಗಳಿಗಾಗಿ ಯಕ್ಷಗಾನದ ಬಡಗುತಿಟ್ಟಿನ ಪ್ರಾತ್ಯಕ್ಷಿಕೆ

ಕುಂದಾಪುರ: ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ಹಿರಿಯ ಕಲಾವಿದರಿಂದ ಜನವರಿ 20 ರಂದು ಕೋಟೇಶ್ವರ ಬೀಜಾಡಿ ಸಮೀಪದ ಯುವ ಸ್ಯಾಂಡ್ಸ್ ಬೀಚ್ ರೆಸಾರ್ಟ್‌ನಲ್ಲಿ ಪಂಚಕರ್ಮ ಚಿಕಿತ್ಸೆಗಾಗಿ ಬಂದ ಅಮೇರಿಕಾದ ಪ್ರಜೆಗಳಿಗಾಗಿ ಕಲಾವಿದರೂ, ಉಪನ್ಯಾಸಕರೂ ಆದ ಸುಜಯೀಂದ್ರ ಹಂದೆ ಎಚ್ ನಿರ್ದೇಶನದಲ್ಲಿ ಇಂಗ್ಲಿಷ್ ಭಾಷಾ ಸಂವಹನದೊಂದಿಗೆ ಕರ್ನಾಟಕದ ಶ್ರೀಮಂತ ಕಲೆ ಯಕ್ಷಗಾನದ ಬಡಗುತಿಟ್ಟಿನ ಪ್ರಾತ್ಯಕ್ಷಿಕೆ ನಡೆಯಿತು.

ತೆರೆಯ ಮರೆಯ ಚೌಕಿಯಲ್ಲಿ ನಡೆಯುವ ಸಾಂಪ್ರಾಯಿಕ ಮುಖವರ್ಣಿಕೆ, ವೇಷಕಟ್ಟುವ ಕ್ರಮ, ಕೇದಗೆಮುಂದಲೆ ಮತ್ತು ಕಿರೀಟ ವೇಷಗಳ ಸಿದ್ಧತೆಯನ್ನು ರಂಗದಲ್ಲೇ ತೋರಿಸುವುದರೊಂದಿಗೆ ವಿವಿಧ ತಾಳ, ಹಸ್ತಾಭಿನಯ ಮುದ್ರೆ, ರಸ ಭಾವಗಳ ಕುಣಿತ, ಯುದ್ಧ ಕುಣಿತಗಳ ಆಂಗಿಕಾಭಿನಯ, ಆಹಾರ್ಯಾಭಿನಯ, ವಾಚಿಕಾಭಿನಯ, ಸಾತ್ವಿಕಾಭಿನಯಗಳನ್ನು ಪ್ರದರ್ಶಿಸಲಾಯಿತು.

ಕುಮಾರಿ ಕಾವ್ಯ ಹಂದೆ ಎಚ್. ನಿರೂಪಣೆಯಲ್ಲಿ ನವೀನ್ ಕೋಟ, ಮನೋಜ್ ಆಚಾರ್, ಆದಿತ್ಯ ಹೊಳ್ಳ, ಭಾಗವತ ದೇವರಾಜ ದಾಸ್, ಮದ್ದಳೆವಾದಕರಾದ ರಾಘವೇಂದ್ರ ಹೆಗಡೆ ಯಲ್ಲಾಪುರ, ಚಂಡೆವಾದಕರಾದ ಸುದೀಪ ಉರಾಳ ಮುಮ್ಮೇಳ ಹಿಮ್ಮೇಳ ಕಲಾವಿದರಾಗಿ ಭಾಗವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!