spot_img
Monday, April 6, 2026
spot_img

ಸಾಮಾಜಿಕ ನ್ಯಾಯದ ಪ್ರತಿಮೆ : ದೇಶದ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆ ಅನಾವರಣಕ್ಕೆ ಕ್ಷಣಗಣನೆ ! : ಏನೇನಿದೆ ಗೊತ್ತಾ ?

ಜನಪ್ರತಿನಿಧಿ ವಾರ್ತೆ (ತೆಲಂಗಾಣ) : ಇಂದು ಸಂಜೆ (ಜನವರಿ 19 ರಂದು) ವಿಜಯವಾಡದಲ್ಲಿ ಉದ್ಘಾಟನೆಗೊಳ್ಳಲಿರುವ ವಿಶ್ವದ ಅತ್ಯಂತ ಎತ್ತರದ ಸಂವಿಧಾ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 125 ಅಡಿ ಎತ್ತರದ ಪ್ರತಿಮೆಯನ್ನು  ಆಂಧ್ರಪ್ರದೇಶದ ಸ ವೈಎಸ್ ಜಗನ್ ಅನಾವರಣ ಮಾಡಲಿದ್ದಾರೆ.

ʼಸಾಮಾಜಿಕ ನ್ಯಾಯದ ಪ್ರತಿಮೆʼ ಎಂಬ ಹೆಸರಿನಲ್ಲಿ ವಿಜಯವಾಡದ ಬಂದರ್ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಅದ್ಧೂರಿ ಅನಾವರಣವನ್ನು ಸಿಎಂ ಜಗನ್ ಮಾಡಲಿದ್ದು, ಅದ್ಧೂರಿ ಕಾರ್ಯಕ್ರಮಕ್ಕೆ ವಿಜಯವಾಡದಲ್ಲಿ ಕ್ಷಣಗಣನೆ ಆರಂಭವಾಗಿದೆ.

81 ಅಡಿ ಎತ್ತರದ ಪೀಠದ ಮೇಲೆ 125 ಅಡಿಗಳ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಇದರ ಒಟ್ಟು ಎತ್ತರ 206 ಅಡಿ. ಇದು ದೇಶದಲ್ಲೇ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆ ಎಂದು ಹೇಳಲಾಗುತ್ತದೆ. 18.81 ಎಕರೆಯಲ್ಲಿ ಸ್ಮಾರಕ ವನ ಸ್ಥಾಪಿಸಲಾಗಿದೆ. 9 ಎಕರೆ ಸಂಪೂರ್ಣ ಹಸಿರಿನಿಂದ ತುಂಬಿದೆ.

ಗ್ರಂಥಾಲಯದ ಜತೆಗೆ ಅನುಭವ ಕೇಂದ್ರವನ್ನೂ ಇಲ್ಲಿ ಸ್ಥಾಪಿಸಲಾಗಿದೆ. ಕಂಚಿನ ಪ್ರತಿಮೆಯನ್ನು ದೆಹಲಿಯಲ್ಲಿ ಮಾಡಲಾಗಿತ್ತು. ಅದನ್ನು ಭಾಗಗಳಾಗಿ ವಿಂಗಡಿಸಿ ವಿಜಯವಾಡಕ್ಕೆ ಸ್ಥಳಾಂತರಿಸಿ ನಿಯಮಿತ ರೀತಿಯಲ್ಲಿ ಸ್ಮೃತಿವನದಲ್ಲಿ ಸ್ಥಾಪಿಸಲಾಗಿದೆ.

ನೆಲ ಮಹಡಿಯಲ್ಲಿ ನಾಲ್ಕು ಸಭಾಂಗಣಗಳಿದ್ದು, ಪ್ರತಿಯೊಂದೂ ನಾಲ್ಕು ಸಾವಿರ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಅವುಗಳಲ್ಲಿ ಒಂದು ಸಿನಿಮಾ ಹಾಲ್ ಮತ್ತು ಉಳಿದ ಮೂರು ಹಾಲ್‌ಗಳಲ್ಲಿ ಅಂಬೇಡ್ಕರ್ ಅವರ ಇತಿಹಾಸವನ್ನು ಹೇಳುವ ಡಿಜಿಟಲ್ ಮ್ಯೂಸಿಯಂ ಇರಲಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!