spot_img
Monday, April 6, 2026
spot_img

ಯಕ್ಷಗಾನ ಪಾತ್ರದಾರಿ ಜನಸಾಮಾನ್ಯರನ್ನು ತಲುಪಲು ಪ್ರಯತ್ನಿಸಬೇಕು-ನಿತ್ಯಾನಂದ ಹೆಗಡೆ ಮೂರೂರು

kota: ಯಕ್ಷಗಾನ ಕಲಾವಿದರ ಜವಾಬ್ದಾರಿ ಎಲ್ಲಾ ಕಾಲಕ್ಕೂ ಒಂದೇ ಆಗಿರುವುದಿಲ್ಲ. ಕಾಲಕಾಲಕ್ಕೆ ಜವಾಬ್ಬಾರಿಯ ವಿಚಾರ ಬದಲಾವಣೆಯಾಗುತ್ತದೆ. ಪಾತ್ರದಾರಿಯಾದವ ಜನಸಾಮಾನ್ಯರನ್ನು ತಲುಪಲು ಪ್ರಯತ್ನಿಸಬೇಕು. ಯಕ್ಷಗಾನ ಯಕ್ಷಗಾನೀಯವಾಗಿ ಉಳಿಸಲು ಕಲಾವಿದ ಪ್ರಯತ್ನಿಸಬೇಕು. ಆಹಾರ್ಯದ ಚೌಕಟ್ಟನ್ನು ಮೀರುವುದು ಸಮಂಜಸವಲ್ಲ. ಆಂಗಿಕ ಅಂದರೆ ನೃತ್ಯ, ಅಭಿನಯಗಳು ಪಾತ್ರದ ಹಿನ್ನಲೆಗೆ ಪೂರಕವಾಗಿರಬೇಕು. ಪಾತ್ರದ ಕಲ್ಪನೆ ಕಲಾವಿದನಿಗೆ ಅತೀ ಅಗತ್ಯ. ಆತ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇನ್ನು ಸ್ತ್ರೀಯರು, ಯಕ್ಷಗಾನದಲ್ಲಿ ತಮ್ಮನ್ನು ತೊಡಗಿಸಿಕೊಂಡ ಮೇಲೆ ಅಧ್ಯಯನಶೀಲರಾಗಬೇಕು ಎಂದು ಯಕ್ಷಗಾನ ವಿಮರ್ಶಕರೂ, ನಿವೃತ್ತ ಉಪನ್ಯಾಸಕರೂ ಆದ ನಿತ್ಯಾನಂದ ಹೆಗಡೆ ಮೂರುರು ತಮ್ಮ ಯಕ್ಷಗಾನದಲ್ಲಿ ಪಾತ್ರದಾರಿಗಳ ಜವಾಬ್ದಾರಿ ಎಂಬ ಉಪನ್ಯಾಸದಲ್ಲಿ ಅಭಿಪ್ರಾಯಪಟ್ಟರು.

ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ -ಐರೋಡಿ ಐವತ್ತರ ಸಂಭ್ರಮಕ್ಕಾಗಿ ಹಮ್ಮಿಕೊಂಡ ಯಕ್ಷಗಾನ ಸಪ್ತಾಹದ ಎರಡನೆ ದಿನದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರದ ಅಧ್ಯಕ್ಷ ಆನಂದ.ಸಿ.ಕುಂದರ್ ವಹಿಸಿದ್ದರು.

ಲಾವಣ್ಯ ಬೈಂದೂರು ಇದರ ಅಧ್ಯಕ್ಷರಾದ ನರಸಿಂಹ ನಾಯಕ್, ಭಾಗವತ ಉಪ್ಪೂರರ ಸುಪುತ್ರ ದಿನೇಶ ಉಪ್ಪೂರ, ಸಾಂಸ್ಕೃತಿಕ ಸಮಿತಿಯ ಅನಂತ ಪದ್ಮನಾಭ ಐತಾಳ ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ಏರ್ಪಡಿಸಲಾದ ಹಿರಿಯರ ಸ್ಮರಣೆಯ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರನ್ನು ಸ್ಮರಿಸುತ್ತಾ ಶ್ರೇಷ್ಠ ಯಕ್ಷಗಾನ ಭಾಗವತ, ಉಪ್ಪೂರರ ಒಡನಾಡಿ ಸುಬ್ರಾಯ ಈಶ್ವರ ಹೆಗಡೆ ಕೆಪ್ಪೆಕೆರೆ ಯವರನ್ನು ಗೌರವಿಸಲಾಯಿತು.

ಕಾರ್ಯದರ್ಶಿ ರಾಜಶೇಖರ ಹೆಬ್ಬಾರ ಪ್ರಾಸ್ತಾವನಾ ಮಾತುಗಳೊಂದಿಗೆ ಗಣ್ಯರನ್ನು ಸ್ವಾಗತಿಸಿದರು. ಸೀತಾರಾಮ ಸೋಮಯಾಜಿ ಕಾರ್ಯಕ್ರಮ ನಿರ್ವಹಿಸಿ, ಶ್ರೀಮತಿ ಸುಮನಾ ಹೇರ್ಳೆ ವಂದನಾರ್ಪಣೆಗೈದರು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಶ್ರೀಮತಿ ವನಿತಾ ಉಪಾಧ್ಯ ಇವರಿಂದ ಸಾಂಸ್ಕೃತಿಕ ನಾಟ್ಯ ವೈಭವ, ಕೇಂದ್ರದ ವಿದ್ಯಾರ್ಥಿಗಳಿಂದ ಪೂರ್ವರಂಗ ಪ್ರದರ್ಶನ ಕಾರ್ಯಕ್ರಮದ ನಂತರ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ನಿರ್ದೇಶನದಲ್ಲಿ ಸೀತಾಕಲ್ಯಾಣ – ಪರಶುರಾಮ ಗರ್ವಭಂಗ ಯಕ್ಷಗಾನ ಪ್ರದರ್ಶಿಸಲ್ಪಟಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!