spot_img
Monday, April 6, 2026
spot_img

ಮತ್ತೆ 2 ಬಾರಿ ಗಡಿ ಪ್ರದೇಶದಲ್ಲಿ ಭಾರತದ ಪೋಸ್ಟ್ ಗಳನ್ನು ಆಕ್ರಮಿಸಿಕೊಂಡ ಚೀನಾ : ವರದಿ

ಜನಪ್ರತಿನಿಧಿ ವಾರ್ತೆ ( ನವ ದೆಹಲಿ) : ಗಲ್ವಾನ್ ಸಂಘರ್ಷದ ಬಳಿಕ ಚೀನಾ ಮತ್ತೆ 2 ಬಾರಿ ಗಡಿ ಪ್ರದೇಶದಲ್ಲಿ ಭಾರತದ ಪೋಸ್ಟ್ ಗಳನ್ನು ಆಕ್ರಮಿಸಿಕೊಂಡಿದೆ ಎಂಬ ಆತಂಕಕಾರಿ ವರದಿ ಈಗ ಬಾರಿ ಚರ್ಚೆಗೆ ಕಾರಣವಾಗಿದೆ.

ಭಾರತ ಮತ್ತು ಚೀನಾ ನಡುವಿನ ಗಡಿ ನಿಯಂತ್ರಣ ರೇಖೆ (LAC) ಹತ್ತಿರ 2020ರಿಂದಲೂ ಹೆಚ್ಚುವರಿಯಾಗಿ ಸೈನಿಕರನ್ನು ನಿಯೋಜಿಸುವ ಮೂಲಕ ಉದ್ಧಟತನ ತೋರುತ್ತಿರುವ ಚೀನಾ ಸೈನಿಕರ ಉಪಟಳ ಇನ್ನಷ್ಟು ಹೆಚ್ಚಳಗೊಂಡಿದ್ದು, 2020ರಲ್ಲಿ ಗಲ್ವಾನ್‌ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ದೊಡ್ಡ ಮಟ್ಟದ ಸಂಘರ್ಷ ಉಂಟಾದ ಬಳಿಕವೂ ಎರಡು ಬಾರಿ ಉಭಯ ಸೈನಿಕರ ನಡುವೆ ಭಾರಿ ಗಲಾಟೆ ನಡೆದಿತ್ತು ಎಂದು ವರದಿಯೊಂದು ಮಾಹಿತಿ ನೀಡಿದೆ.

ಗಲ್ವಾನ್‌ ಗಡಿ ಸಂಘರ್ಷದ ನಂತರ ಭಾರತ ಮತ್ತು ಚೀನಾ ನಡುವೆ ಹಲವು ಬಾರಿ ಮಾತುಕತೆ, ಶಾಂತಿ ಒಪ್ಪಂದಕ್ಕೆ ತಐಆರಿದ್ದೇವೆ ಎಂದು ಹೇಳುವ ಚೀನಾ ಗಡಿ ಪ್ರದೇಶದಲ್ಲಿ ಮಾತ್ರ ಉಪಟಳ ಮಾಡುವುದನ್ನು ಚೀನಾ ನಿಲ್ಲಿಸಿಲ್ಲ. ಇದರಿಂದಾಗಿ ಲಡಾಕ್‌ ಗಡಿ ಪ್ರದೇಶದಲ್ಲಿ ಎಂದಿಗೂ ಬಿಗುವಿನ ವಾತಾವರಣ ಇರುತ್ತದೆ. ಭಾರತವು ಗಡಿಯಲ್ಲಿರುವ 3,488 ಕಿಲೋಮೀಟರ್‌ ವಾಸ್ತವ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಹೆಚ್ಚುವರಿ ಸೈನಿಕರನ್ನು ನಿಯೋಜನೆ ಮಾಡಿದೆ. ಹಾಗೆಯೇ, ಯುದ್ಧವಿಮಾನ ಸೇರಿ ಹಲವು ಮೂಲ ಸೌಕರ್ಯಗಳನ್ನು ಗಡಿಯಲ್ಲಿ ಒದಗಿಸಿದೆ.

2 ಬಾರಿ ಉಭಯ ದೇಶಗಳ ಸೈನಿಕರ ನಡುವೆ ಭಾರಿ ಸಂಘರ್ಷ
ಭಾರತ ಮತ್ತು ಚೀನಾದ ಪಿಎಲ್‌ಎ ಸೈನಿಕರ ನಡುವೆ 2021ರ ಸೆಪ್ಟೆಂಬರ್‌ ಮತ್ತು 2022ರ ನವೆಂಬರ್‌ನಲ್ಲಿ ಭಾರಿ ಗಲಾಟೆ ನಡೆದಿದೆ. ಆದರೆ, ಸಂಘರ್ಷದಲ್ಲಿ ಭಾರತದ ಸೈನಿಕರಿಗೆ ಯಾವ ರೀತಿ ಹಾನಿಯಾಗಿದೆ, ಭಾರತೀಯ ಸೈನಿಕರ ತಿರುಗೇಟಿಗೆ ಚೀನಾ ಸೈನಿಕರಿಗೆ ಯಾವ ರಿತಿಯ ಪರಿಣಾಮ ಉಂಟಾಗಿದೆ ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅದರೇ, ಉಭಯ ದೇಶಗಳ ಸೈನಿಕರ ನಡುವೆ ಎರಡು ಬಾರಿ ಸೈನಿಕರ ನಡುವೆ ಬಾರಿ ದೊಡ್ಡ ಮಟ್ಟದ ಸಂಘರ್ಷ ಉಂಟಾಗಿದೆ ಎಂದು ಅಂತರಾಷ್ಟ್ರೀಯ ವರದಿಗಳು ತಿಳಿಸಿವೆ.  

2020ರ ಮೇ 5ರಂದು ಚೀನಾ ಲಡಾಕ್‌ ಗಡಿಯಲ್ಲಿ ಹೆಚ್ಚುವರಿ ಸೈನಿಕರನ್ನು ನಿಯೋಜಿಸುವ ಮೂಲಕ ಉದ್ಧಟತನ ಆರಂಭಿಸಿದೆ. ಇದೇ ವರ್ಷದ ಜೂನ್‌ನಲ್ಲಿ ಗಲ್ವಾನ್‌ನಲ್ಲಿ ಉಭಯ ರಾಷ್ಟ್ರಗಳ ಸೈನಿಕರ ಮಧ್ಯೆ ಸಂಘರ್ಷ ನಡೆದಿತ್ತು. ಪೂರ್ವ ಲಡಾಕ್‌ನ ಗಲ್ವಾನ್‌ ಕಣಿವೆಯಲ್ಲಿ ಚೀನಾದ ಪಿಎಲ್‌ಎ ಸೈನಿಕರೊಂದಿಗೆ ನಡೆದ ಸಂಘರ್ಷದಲ್ಲಿ 20 ಯೋಧರು ಹುತಾತ್ಮರಾಗಿದ್ದರು. ಹಾಗೆಯೇ, ಭಾರತೀಯ ಸೈನಿಕರು ನೀಡಿದ ತಿರುಗೇಟಿಗೆ ಚೀನಾದ ಹಲವು ಯೋಧರು ಕೂಡ ಬಲಿಯಾಗಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!