spot_img
Tuesday, April 14, 2026
spot_img

ಮುದ್ದುಗುಡ್ಡೆ ಮೂಲದ ಅಯ್ಯಪ್ಪ ವೃತಧಾರಿ ಶಬರಿಮಲೆಯಲ್ಲೇ ಹೃದಯಾಘಾತದಿಂದ ವಿಧಿವಶ !

ಜನಪ್ರತಿನಿಧಿ ವಾರ್ತೆ (ಕುಂದಾಪುರ) : ಶಬರಿಮಲೆಯಲ್ಲಿ ದಿವ್ಯ ಮಕರ ಜ್ಯೋತಿ ದರ್ಶನಕ್ಕೆಂದು ತೆರಳಿದ್ದ ಅಯ್ಯಪ್ಪ ವೃತಧಾರಿ ಶಬರಿಮಲೆಯಲ್ಲಿಯೇ ಆಕಸ್ಮಿತ್‌ ಆಗಿ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ ಘಟನೆ ಭಾನುವಾರ ತಡರಾತ್ರಿ ನಡೆದಿದೆ ಎಂದು ತಡವಾಗಿ ಮಾಹಿತಿ ಲಭ್ಯವಾಗಿದೆ.

ಶಬರಿಮಲೆಯಲ್ಲಿ ಹೃದಯಾಘಾತಕ್ಕೊಳಗಾದ ವ್ಯಕ್ತಿಯನ್ನು ಕುಂದಾಪುರ ತಾಲೂಕಿನ ಮದ್ದುಗುಡ್ಡೆ ನಾಗರಾಜ್ ಖಾರ್ವಿ (38 ವ) ಎಂದು ಮಾಹಿತಿ ತಿಳಿದು ಬಂದಿದೆ.

ನಾಗರಾಜ್ ಹಾಗೂ ತಂಡ ಜನವರಿ 15 ರಂದು ಶಬರಿಮಲೆಯಲ್ಲಿ ದಿವ್ಯ ಮಕರ ಜ್ಯೋತಿ ವೀಕ್ಷಿಸಲೆಂದು ವೃತಧಾರಿಗಳಾಗಿ ತೆರಳಿದ್ದರು ಎನ್ನಲಾಗಿದೆ. ಆದರೆ ಶಬರಿ ಮಲೆಯಲ್ಲಿ ಇದ್ದಕ್ಕಿದ್ದಂತೆ ನಾಗರಾಜ್ ಅವರಿಗೆ ಎದೆನೋವು ಆರಂಭವಾಗಿದೆ. ಅತೀ ಹೆಚ್ಚು ಸಂಖ್ಯೆಯಲ್ಲಿ ಅಯ್ಯಪ್ಪ ವೃತಧಾರಿಗಳು ಇದ್ದಿದ್ದರಿಂದ ತಕ್ಷಣ ಚಿಕಿತ್ಸೆ ನೀಡಲು ಅಥವಾ ವೈದ್ಯರನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನಾಗರಾಜ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ  ತಿಳಿದು ಬಂದಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!