Sunday, September 8, 2024

ಮಥುರಾ ಕೃಷ್ಣ ಜನ್ಮಭೂಮಿ ಪ್ರಕರಣ : ಅಡ್ವಕೇಟ್‌ ಕಮಿಷನರ್‌ ನೇಮಕಾತಿ ಕುರಿತ ಅಲಹಾಬಾದ್‌ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ

ಜನಪ್ರತಿನಿಧಿ ವಾರ್ತೆ (ನವ ದೆಹಲಿ) : ಶ್ರೀ ಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿ ಮಥುರಾದ ಶಾಹಿ ಈದ್ಗಾ ಮಸೀದಿಯಲ್ಲಿ ಸಮೀಕ್ಷೆ ಕೈಗೊಳ್ಳಲು ಅಡ್ವಕೇಟ್ ಕಮಿಷನರ್‌ ನೇಮಕಾತಿಗಾಗಿ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ಆದೇಶದ ಜಾರಿಗೆ ಸುಪ್ರೀಂ ಕೋರ್ಟ್‌ ಇಂದು(ಮಂಗಳವಾರ) ತಡೆಯಾಜ್ಞೆ ನೀಡಿ ಆದೇಶಿಸಿದೆ.

ನ್ಯಾ. ಸಂಜೀವ್‌ ಖನ್ನಾ ಹಾಗೂ ದೀಪಾಂಕರ್‌ ದತ್ತಾ ಅವರಿದ್ದ ನ್ಯಾಯಪೀಠ ಮೇಲೆ ಉಲ್ಲೇಖಿಸಿರುವಂತೆ ಮಧ್ಯಂತರ ಆದೇಶ ಹೊರಡಿಸಿದೆ. ಮತ್ತು ಅಲಹಾಬಾದದ್‌ ಹೈಕೋರ್ಟ್‌ನ ಡಿಸೆಂಬರ್‌ 14ರ ಆದೇಶವನ್ನು ಪ್ರಶ್ನಿಸಿ ಮಸೀದಿಯ ಸಮಿತಿ ಸಲ್ಲಿಸಿದ್ದ ಮೇಲ್ಮನವಿಗೆ  ಸಂಬಂಧಿಸಿದಂತೆ ಈ ನೋಟಿಸ್‌ ಜಾರಿ ಮಾಡಿದೆ.

ಆರಾಧನಾ ಸ್ಥಳಗಳ ಕಾಯ್ದೆ 1991ರ ಅಡಿಯಲ್ಲಿ ಮೂಲ ಅರ್ಜಿಗಳನ್ನು ರದ್ದು ಮಾಡಬೇಕೆಂದು ಕೋಡಿ  ಅಲ್ಲಿಸಿದ್ದ ಅಪೀಲು  ಬಾಕಿ ಇರುವಾಗ ಹೈಕೋರ್ಟ್‌ ಅಡ್ವಕೇಟ್‌ ಕಮಿಷನರ್‌ ಅವರ ನೇಮಕಾತಿಗೆ ಆದೇಶ ಹೊರಡಿಸಬಾರದಾಗಿತ್ತು ಎಂದು ಮಸೀದಿ ಸಮಿತಿಯ ಪರ ವಕೀಲ ತಸ್ನೀಂ ಅಹ್ಮದಿ ವಾದಿಸಿದ್ದರು.

ಇನ್ನು, ಅರ್ಜಿದಾರರು ಸಲ್ಲಿಸಿದ್ದ ಮೂಲ ಅರ್ಜಿಯ ಆಧಾರದ ಮೇಲೆ ಅಲಹಾಬಾದ್‌ ಹೈಕೋರ್ಟ್‌ ಆದೇಶ ಹೊರಡಿಸಿತ್ತು. ಮಸೀದಿಯ ಅಡಿಯಲ್ಲಿ ಕೃಷ್ಣ ದೇವರ ಮೂಲ ಜನ್ಮಸ್ಥಳವಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು ಮತ್ತು ಈಗ ಶಾಹಿ ಈದ್ಗಾ ಮಸೀದಿ ಇರುವ ಸ್ಥಳವನ್ನು ಒಳಗೊಂಡು ವಿವಾದಿತ ಶ್ರೀ ಕೃಷ್ಣ ಜನ್ಮಭೂಮಿ ಸ್ಥಳವು ಶ್ರೀ ಕೃಷ್ಣ ವಿರಾಜಮಾನ್‌ ಗೆ ಒಳಪಟ್ಟಿದ್ದು ಎಂದು ಘೋಷಣೆ ಮಾಡಬೇಕೆಂದು  ಅರ್ಜಿಯಲ್ಲಿ ಕೋರಲಾಗಿತ್ತು.

ಈ ಅರ್ಜಿಯನ್ನು ತಿರಸ್ಕರಿಸಬೇಕೆಂದು ಕೋರಿ ತಾನು ಸಲ್ಲಿಸಿದ್ದ ಅರ್ಜಿಯ ಕುರಿತು ತೀರ್ಪು ನೀಡುವ ಮೊದಲೇ ಅಡ್ವಕೇಟ್‌ ಕಮಿಷನರ್‌ ನೇಮಕಾತಿ ಆದೇಶ ಹೊರಡಿಸಬಾರದಾಗಿತ್ತು ಎಂದು ಮಸೀದಿ ಸಮಿತಿ ವಾದಿಸಿತ್ತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!