spot_img
Saturday, May 23, 2026
spot_img

ʼಪೂಜಿಸಲೆಂದೇ ಹೂಗಳ ತಂದೆ…ʼ ಹಾಡಿಗೆ ಪ್ರಧಾನಿ ಮೋದಿ ಶ್ಲಾಘನೆ | ಗಾಯಕಿ ಶಿವಶ್ರೀ ಹಾಡಿದ ಯೂಟ್ಯೂಬ್‌ ಲಿಂಕ್ ಶೇರ್‌ ಮಾಡಿ ನಮೋ ಪ್ರಶಂಸೆ

ಜನಪ್ರತಿನಿಧಿ ವಾರ್ತೆ (ನವ ದೆಹಲಿ ) : ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್‌ ಅವರು ಹಾಡಿರುವ ʼಪೂಜಿಸಲೇಂದೇ ಹೂಗಳ ತಂದೆ…” ಹಾಡಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ತಮ್ಮ ಮೈಕ್ರೋಬ್ಲಾಗಿಂಗ್‌ ʼಎಕ್ಸ್‌ʼ ಖಾತೆಯ ಮೂಲಕ ಈ ಹಾಡಿನ ಯೂಟ್ಯೂಬ್ ಲಿಂಕ್‌ ಹಾಡನ್ನು ಶೇರ್ ಮಾಡಿಕೊಂಡಿರುವ ಪ್ರಧಾನಿ ಶ್ಲಾಘಿಸಿದ್ದಾರೆ. ಕನ್ನಡದಲ್ಲಿ ಶಿವಶ್ರೀ ಸ್ಕಂದ ಪ್ರಸಾದ್‌ ಅವರ ಈ ನಿರೂಪಣೆಯೂ ಪ್ರಭುಯ ಶ್ರೀರಾಮನ ಭಕ್ತಿ ಭಾವವನ್ನು ಅತ್ಯದ್ಭುತವಾಗಿ ಎತ್ತಿ ತೋರಿಸುತ್ತದೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ಬಹಿಸುತ್ತದೆ ಎಂದು ಮೋದಿ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚಿಗೆಗೆ ಪ್ರತಿಕ್ರಿಯಿಸಿದ ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್‌, ಇದೊಂದು ತುಂಬಾ ಸಂತೋಷದ ಕ್ಷಣ. ಪ್ರಧಾನಿ ಮೋದಿಯವರು ನಾನು ಹಾಡಿರುವ ಈ ಹಾಡನ್ನು ಮೆಚ್ಚಿಕೊಂಡಿರುವುದು ಅತೀವ ಸಂತೋಷವನ್ನು ಉಂಟು ಮಾಡಿದೆ. ಈಗ ನಾನು ಅನುಭವಿಸುತ್ತಿರುವ ಅನುಭವವವನ್ನು ವಿವರಿಸುವುದಕ್ಕೆ ಮುಂದಾದರೇ ಪದಗಳು ಸೋಲುತ್ತವೆ. ಇದು ಸ್ವತಃ ಶ್ರೀರಾಮನ ಆಶೀರ್ವಾದ ಎಂದು ಅವರು ಹೇಳಿದ್ದಾರೆ.

ಡಾ. ರಾಜ್‌ ಅಭಿನಯದ ‘ಎರಡು ಕನಸು’ ಚಿತ್ರದ ಹಾಡು :

ನಟ ಸಾರ್ವಭೌಮ ಡಾ. ರಾಜ್‌ ಕುಮಾರ್‌ ಅಭಿನಯದ 1974ರಲ್ಲಿ ತೆರೆಕಂಡ ಎರಡು ಕನಸು ಸಿನೆಮಾದದಲ್ಲಿ ಬರುವ ಜನಪ್ರಿಯ ಹಾಡು ಇದಾಗಿದೆ. ʼಪೂಜಿಸಲೆಂದೇ ಹೂಗಳ ತಂದೆ..ʼ ಹಾಡಿಗಾಗಿ ಗಾನ ಕೋಗಿಲೆ ಎಸ್‌ ಜಾನಕಿ ಚಿತ್ರಕ್ಕಾಗಿ ಧ್ವನಿ ನೀಡಿದ್ದರು. ಚಿ. ಉದಯಶಂಕರ್‌ ಈ ಹಾಡಿಗೆ ಸಾಹಿತ್ಯ ಬರೆದಿದ್ದರು. ದೊರೆ ಭಗವಾನ್‌ ನಿರ್ದೇಶನದಲ್ಲಿ ಸಿನೆಮಾ ತೆರೆಕಂಡಿತ್ತು.

(ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್‌ ಹಾಡಿದ ʼಪೂಜಿಸಲೆಂದೇ ಹೂಗಳ ತಂದೇ…ʼ ಹಾಡಿನ ಯೂಟ್ಯೂಬ್‌ ಲಿಂಕ್‌ : https://youtu.be/UHbdk16PZ6k?si=nMxRs5Zj0btvnGM-)

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!