Sunday, April 28, 2024

2024 ರ ಲೋಕಸಭಾ ಚುನಾವಣೆ : ವಾರಣಾಸಿ ಕ್ಷೇತ್ರದಿಂದ ಮೋದಿ ವರ್ಸಸ್‌ ಪ್ರಿಯಾಂಕಾ ಗಾಂಧಿ ? : ಮಮತಾ ಬ್ಯಾನರ್ಜಿ ಏನಂದ್ರು ?

ಜನಪ್ರತಿನಿಧಿ ವಾರ್ತೆ (ನವ ದೆಹಲಿ) : ಮುಂಬರುವ 2024 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ವಾರಣಾಸಿ ಕ್ಷೇತ್ರದಿಂದ ʼಇಂಡಿಯಾʼ  ಅಭ್ಯರ್ಥಿಯಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಹೆಸರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಸ್ತಾಪಿಸಿದ್ದಾರೆ ಎಂದು ಟಿಎಂಸಿ ಮೂಲಗಳು ಹೇಳಿವೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ಇಂಡಿಯಾ ಟುಡೇ ವರದಿ ಮಾಡಿದೆ.

ʼಇಂಡಿಯಾʼ ಮೈತ್ರಿಕೂಟದ ನಾಲ್ಕನೇ ಸಭೆಯಲ್ಲಿ ಈ ಪ್ರಸ್ತಾಪವನ್ನು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

2019ರಲ್ಲಿ, ಪಿಎಂ ಮೋದಿ ವಿರುದ್ಧ ವಾರಣಾಸಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿಯವರ ಉಮೇದುವಾರಿಕೆಯ ಭಾರಿ ಸದ್ದು ಮಾಡಿತ್ತು, ಆದರೆ ಕಾಂಗ್ರೆಸ್ ಅಜಯ್ ರೈ ಅವರನ್ನು ಕಣಕ್ಕಿಳಿಸಿತ್ತು.

ಇನ್ನು, ʼಇಂಡಿಯಾʼ ಮೈತ್ರಿಕೂಟದ ಸಭೆಯ ನಂತರ, ವಾರಣಾಸಿಯಿಂದ ಪ್ರಿಯಾಂಕಾ ಗಾಂಧಿಯವರ ಉಮೇದುವಾರಿಕೆ ಬಗ್ಗೆ ಕೇಳಿದಾಗ, ಅವರು, “ಹಮ್ ಲೋಗ್ ಸಬ್ ಕುಚ್ ನಹೀ ಬತಾ ಸಕ್ತೇ ಜೋ ಬಾತ್ ಹುಯಿ ಹೈ” (ನಾವು ಸಭೆಯಲ್ಲಿ ಚರ್ಚಿಸಿದ ಎಲ್ಲವನ್ನೂ ಹಂಚಿಕೊಳ್ಳಲು ಸಾಧ್ಯವಿಲ್ಲ). ಎಂದು ಹೇಳಿದರು.

ಮೈತ್ರಿಕೂಟದ ನಾಲ್ಕನೇ ಸಭೆಯಲ್ಲಿ, ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ಡಿಸೆಂಬರ್ 31, 2023 ರೊಳಗೆ ‘ಸೀಟು ಹಂಚಿಕೆ’ಯನ್ನು ಅಂತಿಮಗೊಳಿಸುವಂತೆ ʼಇಂಡಿಯಾʼ ಮೈತ್ರಿ ಸದಸ್ಯರನ್ನು ಒತ್ತಾಯಿಸಿದರು.

ರಾಜ್ಯ ಮಟ್ಟದಲ್ಲಿ ಸೀಟು ಹಂಚಿಕೆಯನ್ನು ಡಿಸೆಂಬರ್ ಅಂತ್ಯದ ವೇಳೆಗೆ ಅಂತಿಮಗೊಳಿಸಲಾಗುವುದು ಮತ್ತು ಅಂತಿಮವಾಗಿ ಜನವರಿ ಎರಡನೇ ವಾರದ ವೇಳೆಗೆ ಉನ್ನತ ನಾಯಕತ್ವದ ಮಟ್ಟದಲ್ಲಿ ಸ್ಥಾನ ಹಂಚಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!