spot_img
Thursday, April 23, 2026
spot_img

ಕೋವಿಡ್‌  JN.1 ರೂಪಾಂತರಿ ತಳಿ ಆತಂಕ : ದೇಶದಾದ್ಯಂತ ಒಟ್ಟು 21 ಪ್ರಕರಣಗಳು ದಾಖಲು : ಆತಂಕ ಪಟುವ ಅಗತ್ಯವಿಲ್ಲ : ವಿಶ್ವ ಆರೋಗ್ಯ ಸಂಸ್ಥೆ

ಜನಪ್ರತಿನಿಧಿ ವಾರ್ತೆ (ನವ ದೆಹಲಿ) : ಕೋವಿಡ್-19 ರೂಪಾಂತರಿ ತಳಿ JN.1ರ 21 ಪ್ರಕರಣಗಳು ಇದುವರೆಗೆ ದೇಶಾದ್ಯಂತ ದಾಖಲಾಗಿದೆ. ಗೋವಾ, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೊವಿಡ್‌ ರೂಪಾಂತರಿ ಪ್ರಕರಣಗಳು ದಾಖಲಾಗಿವೆ.

ಪಕ್ಕದ ರಾಜ್ಯ ಗೋವಾದಲ್ಲಿ ಇದುವರೆಗೆ ಕೋವಿಡ್ ರೂಪಾಂತರಿ JN.1 ತಳಿಯ 19 ಪ್ರಕರಣಗಳು ದಾಖಲಾದರೇ, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಂದು ಪತ್ತೆಯಾಗಿದೆ.

ಒಮೀಕ್ರಾನ್ ರೂಪಾಂತರಿ ಸೋಂಕು, JN.1 ಕಳೆದ ಕೆಲವು ವಾರಗಳಲ್ಲಿ ವೇಗವಾಗಿ ಹರಡುವ ವೈರಸ್‌ಗಳಲ್ಲಿ ಒಂದಾಗಿದೆ. ಆದರೇ, ಯಾವುದೇ ದೊಡ್ಡ ಮಟ್ಟದ ಸಮಸ್ಯೆಗಳು ಇದರಿಂದ ಉಂಟಾಗುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.

ಇನ್ನು, ದೇಶಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆ ಯಾವುದೇ ರೀತಿಯಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಭಯಪಡುವ ಅಗತ್ಯವಿಲ್ಲ ಎಂದು NITI ಆಯೋಗ್ ಸದಸ್ಯ ಡಾ. ವಿ. ಕೆ. ಪಾಲ್ ಇಂದು(ಬುಧವಾರ) ಹೇಳಿದ್ದಾರೆ.

ಆದಾಗ್ಯೂ, ರಾಜ್ಯಗಳು ಕೋವಿಡ್ ಸೋಂಕನ್ನು ತಡೆಗಟ್ಟುವುದಕ್ಕೆ ಬೇಕಾಗಿ ಅಗತ್ಯ ಕಟ್ಟೆಚ್ಚರವಹಿಸುವುದು ಮುಖ್ಯ ಎಂಧೂ ಒತ್ತಿ ಹೇಳಿದರು, ಕೋವಿಡ್‌ ಟೆಸ್ಟಿಂಗ್‌ಗಳನ್ನು ಹೆಚ್ಚಿಸಲು ಮತ್ತು ಗಡಿ ಭಾಗಗಳಲ್ಲಿ ಚೆಕ್‌ ಪೋಸ್ಟ್‌ ವ್ಯವಸ್ಥೆಯನ್ನು ಬಲಪಡಿಸುವಂತೆ ಅವರು ಸೂಚಿಸಿದ್ದಾರೆ.

ಏತನ್ಮಧ್ಯೆ, ದೇಶಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಕಟ್ಟೆಚ್ಚರ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!