spot_img
Thursday, April 23, 2026
spot_img

ಗುಲ್ವಾಡಿಯಲ್ಲಿ ಸೋಜಿಗ ಮೂಡಿಸಿದ ಪುಟಾಣಿ ಗ್ರಂಥಾಲಯ!

ಪುಟಾಣಿ ಗ್ರಂಥಾಲಯವನ್ನು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಉದ್ಘಾಟಿಸುತ್ತಿರುವುದು.


ಕುಂದಾಪುರ (ಜನಪ್ರತಿನಿಧಿ ವಾರ್ತೆ): ಕುಂದಾಪುರ ತಾಲೂಕಿನ ಗುಲ್ವಾಡಿಯಲ್ಲೊಂದು ಪುಟಾಣಿ ಗ್ರಂಥಾಲಯ ಆರಂಭಗೊಂಡಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಗುಲ್ವಾಡಿ ಟಾಕೀಸ್‌ನ ಯಾಕೂಬ್ ಅವರ ಪರಿಕಲ್ಪನೆಯಡಿ ಈ ಉಚಿತ ಪುಟಾಣಿ ಗ್ರಂಥಾಲಯ ನಿರ್ಮಾಣಗೊಂಡು ಸಾಹಿತ್ಯಾಸಕ್ತರ ಮನ ಸಳೆಯುತ್ತಿದೆ.

ಮರದ ಪೆಟ್ಟಿಗೆಯ ಪುಟ್ಟ ಗೂಡಿನಂಥಹ ಈ ಗ್ರಂಥಾಲಯ ಈಗ ಸೋಜಿಗದ ವಿಷಯವಾಗಿದೆ. ಗುಜರಿ ವ್ಯಾಪಾರಿಯಾಗಿದ್ದ ಯಾಕುಬ್ ಖಾದರ್ ಗುಜರಿಗೆ ಬಂದ ಪುಸ್ತಕಗಳನ್ನೇ ಓದುತ್ತಾ ಓದುತ್ತಾ ಸಿನೆಮಾ ಕ್ಷೇತ್ರದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆಯುವ ತನ ಕದ ಸಾಧನೆ ಮಾಡಿದ್ದರು. ತನ್ನ ಈ ಎಲ್ಲಾ ಸಾಧನೆಗಳಿಗೆ ಮೂಲ ಕಾರಣ ಓದು, ಸಾಹಿತ್ಯ ಎನ್ನುವ ಯಾಕುಬ್ ಖಾದರ್ ಬೇರೆ ಬೇರೆ ದೇಶಗಳಲ್ಲಿ ಸಿನೆಮಾ ದ ಸಲುವಾಗಿ ತಿರುಗಾಟ ಮಾಡಿದವರು. ಅಲ್ಲೆಲ್ಲಾ ಅವರು ಕಂಡಿದ್ದು ಓದು, ಸಾಹಿತ್ಯ ಪರಿಕರ. ವಿದೇಶಗಳ ಉದ್ಯಾನವನಗಳಲ್ಲಿ ಪುಟಾಣಿ ಗ್ರಂಥಾಲಯ ಇರುವುದನ್ನು ಗಮನಿಸಿದ ಯಾಕುಬ್ ತನ್ನೂರಿನಲ್ಲೂ ಅಂಥಹದ್ದೊಂದು ಪರಿಕಲ್ಪನೆ ಅನಾವರಣಗೊಳಿಸಬೇಕು ಎನ್ನುವ ಕನಸು ಕಂಡವರು. ಆಗ ಕಾರ್ಯಬಾಹುಳ್ಯದಿಂದ ಸಾಧ್ಯವಾಗಲಿಲ್ಲ. ಈಗ ಆ ಕನಸನ್ನು ನನಸು ಮಾಡಿದ್ದಾರೆ. ಈ ಪುಟಾಣಿ ಗ್ರಂಥಾಲಯವನ್ನು ಡಿ.೧೦ರಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಉದ್ಘಾಟನೆ ಮಾಡಿದ್ದಾರೆ.

ಇಲ್ಲಿ ಒಂದಿಷ್ಟು ಅಪರೂಪದ ಪುಸ್ತಕಗಳಿವೆ. ಓದುವ ಆಸಕ್ತಿಯನ್ನು ಪ್ರೋತ್ಸಾಹಿಸುವ ಸಾಹಿತ್ಯಗಳಿವೆ. ಧಾವಂತದ ಈ ದಿನಗಳಲ್ಲಿ ಮಾರ್ಗದ ಸನಿಹದಲ್ಲಿಯೇ ಇರುವ ಗ್ರಂಥಾಲಯ ಸಾಹಿತ್ಯಾಸಕ್ತರ ಚಿತ್ತ ಸಳೆಯುತ್ತಿದೆ.

ಇಂಥಹ ಪುಟ್ಟ ಮರದ ಪೆಟ್ಟಿಗೆಯ ಗ್ರಂಥಾಲಯಗಳು ವಿದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಓದುವ ಆಸಕ್ತಿಯನ್ನು ಪೂರೈಸುವ ಸಲುವಾಗಿ ವಿಶೇಷವಾಗಿ ಉದ್ಯಾನವನಗಳಲ್ಲಿ ಇಂಥಹ ಗ್ರಂಥಾಲಯಗಳು ಇರುತ್ತದೆ. ಓದುವ ಹವ್ಯಾಸ ದೂರವಾಗುತ್ತಿರುವ ಈ ದಿನಗಳಲ್ಲಿ ನಮ್ಮಲ್ಲೂ ಕೂಡಾ ಇಂಥಹ ಪ್ರಯೋಗಗಳನ್ನು ಮಾಡಲು ಅವಕಾಶ ಹಾಗೂ ಸಾಧ್ಯತೆಗಳಿವೆ. ಆ ಹಿನ್ನೆಲೆಯಲ್ಲಿ ಇದೊಂದು ಪ್ರಯೋಗ ಅಷ್ಟೇ ಎನ್ನುತ್ತಾರೆ ಉಚಿತ ಪುಟಾಣಿ ಗ್ರಂಥಾಲಯದ ರೂವಾರಿ ಯಾಕುಬ್ ಖಾದರ್ ಗುಲ್ವಾಡಿ ಅವರು.

https://fb.watch/p1lcL8A1Rf/

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!