Sunday, September 8, 2024

ಸಂಸತ್‌ ಭದ್ರತಾ ಲೋಪ : ಪ್ರತಾಪ್‌ ಸಿಂಹರನ್ನು ಯಾಕೆ ಇನ್ನೂ ಪ್ರಶ್ನಿಸಿಲ್ಲ : ಜೈರಾಮ ರಮೇಶ್‌

ಜನಪ್ರತಿನಿಧಿ ವಾರ್ತೆ (ನವ ದೆಹಲಿ ) : ಸಂಸತ್‌ ಕಲಾಪದ ವೇಳೆ ಪಬ್ಲಿಕ್‌ ಗ್ಯಾಲರಿಯಿಂದ ನುಗ್ಗಿದವರಿಗೆ ಪಾಸ್‌ ವ್ಯವಸ್ಥೆ ಮಾಡಿಕೊಂಡ ಸಂಸದ ಪ್ರತಾಪ್‌ ಸಿಂಹ ಅವರನ್ನು ಯಾಕೆ ಇನ್ನೂ ವಿಚಾರಣೆ ಮಾಡಿಲ್ಲ ಎಂದು ಕಾಂಗ್ರೆಸ್‌ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದೆ.

ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಂಸತ್‌ ಭವನಕ್ಕೆ ನುಗ್ಗಿದ ಇಬ್ಬರಿಗೆ ಪಾಸ್‌ ನೀಡಿದ್ದರು. ಘಟನೆ ನಡೆಸು ವಾರ ಕಳೆದರೂ ಅವರು ಈವರೆಗೆ ವಿಚಾರಣೆಗೆ ಒಳಗಾಗಿಲ್ಲ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ತಮ್ಮ ಅಧಿಕೃತ ʼಎಕ್ಸ್‌ʼ ಖಾತೆಯ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ಲೋಕಸಭೆಯಲ್ಲಿ ನಡೆದ ಗಂಭೀರವಾದ ಭದ್ರತಾ ಲೋಪ ರಾಷ್ಟ್ರವನ್ನು ಬೆಚ್ಚಿಬೀಳಿಸಿ ಒಂದು ವಾರ ಕಳೆದಿದೆ. ಈ ಬಗ್ಗೆ ತನಿಖೆ ಆರಂಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಹಾಗೂ ಲೋಕಸಭಾ ಸ್ಪೀಕರ್‌ ಹೇಳಿದ್ದಾರೆ. ಆದರೇ, ಇಬ್ಬರು ಅತಿಕ್ರಮಣಕೋರರಿಗೆ ಸಂಸತ್‌ ಭವನ ಪ್ರವೇಶಿಸಲು ಅನುವು ಮಾಡಿಕೊಟ್ಟ ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಅವರನ್ನು ಏಳು ದಿನ ಕಳೆದರೂ ಯಾಕೆ ಇನ್ನೂ ಪ್ರಶ್ನಿಸಿಲ್ಲ ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಒಳನುಗ್ಗಿದವರ ಮೇಲೆಯೇ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಆರೋಪ ಹೊರಿಸಲಾಗಿರುವುದಿರಿಂದ ಇದೊಂದು ವಿಚಿತ್ರ ಸನ್ನಿವೇಶವಾಗಿದೆ ಎಂದು ರಮೇಶ್‌ ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!