spot_img
Wednesday, January 22, 2025
spot_img

ಅಮಾಸೆಬೈಲು ಸರಕಾರಿ ಪ್ರೌಢಶಾಲೆಯಲ್ಲಿ ಶ್ರಮದಾನ, ಸ್ವಚ್ಚತಾ ಕಾರ್ಯಕ್ರಮ

ಕುಂದಾಪುರ: ಸರಕಾರಿ ಶಾಲೆಯ ಅಭಿವೃದ್ಧಿ ಹಾಗೂ ಉಳಿವಿಕೆಗಾಗಿ, ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉಡುಪಿ ಜಿಲ್ಲೆ ಹಾಗೂ ನವಜೀವನ ಸಮಿತಿ, ಅಮಾಸೆಬೈಲು ವಲಯ-ಹಾಲಾಡಿ ವಲಯ, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಅಮಾಸೆಬೈಲು ವಲಯ-ಹಾಲಾಡಿ ವಲಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಅಮಾಸೆಬೈಲು ವಲಯ, ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ಪೋಷಕರು ಇವರ ಸಹಭಾಗಿತ್ವದೊಂದಿಗೆ ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘ, ಗ್ರಾಮ ಪಂಚಾಯತ್ ಅಮಾಸೆಬೈಲು, ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ, ಅಮಾಸೆಬೈಲು ಇವರ ಆರ್ಥಿಕ ಸಹಕಾರದೊಂದಿಗೆ ಡಾ|| ಡಿ.ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಸರಕಾರಿ ಪ್ರೌಢಶಾಲೆ, ಅಮಾಸೆಬೈಲು ಡಿ.17ರಂದು ಶ್ರಮದಾನ ಹಾಗೂ ಯಂತ್ರದ ಮೂಲಕ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಯೋಜನಾಧಿಕಾರಿ ನಾರಾಯಣ ಪಾಲನ್ ಶ್ರಮದಾನ ಪ್ರಕ್ರಿಯೆ ಉದ್ಘಾಟಿಸಿ ಸರಕಾರಿ ಶಾಲೆಗಳ ಅಭಿವೃದ್ಧಿಗಾಗಿ ಡಾ|| ವೀರೇಂದ್ರ ಹೆಗ್ಗಡೆಯವರು ಶಾಲೆಗಳಿಗೆ ಗೌರವ ಶಿಕ್ಷಕರ ನೇಮಕ, ಆಟದ ಮೈದಾನ ಸಮತಟ್ಟು, ಆವರಣ ಗೋಡೆ ರಚನೆ, ಪೀಠೋಪಕರಣಗಳ ಖರೀದಿ, ಹಾಗೂ ಹತ್ತು ಹಲವು ಶಾಲೆಯ ಕೆಲಸಕ್ಕಾಗಿ ಸಹಾಯಧನ ನೀಡಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ರಟ್ಟಾಡಿ ಮಲ್ಲಿಕಾ ಕುಲಾಲ್ ವಹಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ರಟ್ಟಾಡಿ ನವೀನಚಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, ಸರಕಾರಿ ಶಾಲೆಗಳನ್ನು ಉಳಿಸುವುದು, ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದ ಅವರು ಉತ್ತಮ ರೀತಿಯಲ್ಲಿ ಶಾಲೆಯ ಸ್ವಚ್ಚತೆ ಮಾಡಿದ ವಿದ್ಯಾಭಿಮಾನಿಗಳಿಗೆ ಮನಃಪೂರ್ವಕ ಕೃತಜ್ಞತೆ ಸಲ್ಲಿಸಿ ಈ ಪುಣ್ಯಕಾರ್ಯದಲ್ಲಿ ಭಾಗವಹಿಸಿ, 42 ತೆಂಗಿನ ಮರಕ್ಕೆ ಬುಡ ಮಾಡಿ ಶಾಲೆಯ ಸ್ವಚ್ಚತೆ ಕೆಲಸವನ್ನು ಮಾಡಿದ ವಿಧ್ಯಾಭಿಮಾನಿಗಳಿಗೆ ಸರಕಾರಿ ಶಾಲೆಯ ಉಳಿವಿಕೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಅಭಿನಂದನೆ ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಅಶೋಕ ಕುಮಾರ ಕೊಡ್ಗಿ, ಅಮಾಸೆಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಅಧ್ಯಕ್ಷರಾದ ಎ. ಶಂಕರ್ ಐತಾಳ್, ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸದಾನಂದ ಶೆಟ್ಟಿ, ಸಾರ್ವಜನಿಕ ಶಾರದೋತ್ಸವ ಸಮಿತಿ ಅಮಾಸೆಬೈಲು ಕಾರ್ಯದರ್ಶಿ ರವಿ ಪೂಜಾರಿ, ಹಾಗೂ ಗ್ರಾಮಪಂಚಾಯತ್ ಸದಸ್ಯರಾದ ಜಯಪ್ರಕಾಶ್ ಶೆಟ್ಟಿ ರಟ್ಟಾಡಿ, ಕೃಷ್ಣ ಪೂಜಾರಿ ಅಮಾಸೆಬೈಲು, ಪುಷ್ಪ ಕಾಮತ್, ಗಣೇಶ್ ಶೆಟ್ಟಿ ಮಠದಜೆಡ್ಡು ಭಾಗವಹಿಸಿದ್ದರು.

ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ರಟ್ಟಾಡಿ ಸತ್ಯನಾರಾಯಣ ರಾವ್, ಬೋಜು ರಾಜ್ ಪೂಜಾರಿ ವಲಯ ಅಧ್ಯಕ್ಷರು ಅಮಾಸೆಬೈಲು ವಲಯ, ಸದಾಶಿವ ಶೆಟ್ಟಿ ಜಡ್ಡಿನಗದ್ದೆ ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ ಸರಕಾರಿ ಪ್ರೌಢಶಾಲೆ ಅಮಾಸೆಬೈಲು, ಹಾಗೂ ಗೋಪಾಲ ಕಾಂಚನ್, ಜನಜಾಗ್ರತಿ ವೇದಿಕೆ ಸದಸ್ಯರು ಸಿದ್ದಾಪುರ, ಹಾಗೂ ಶೌರ್ಯ ವಿಪತ್ತು ನಿರ್ವಹಣಾ ತಂಡದ ರತ್ನ ಹೆಂಗವಳ್ಳಿ ಗೀತಾ ಆಚಾರ್ಯ, ಸೇವಾಪ್ರತಿನಿಧಿ ಗ್ರಾಮಾಬಿವೃದ್ದಿ ಯೋಜನೆ ಅಮಾಸೆಬೈಲು ವಲಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಶ್ರಮದಾನ ಸ್ಥಳಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ವಲಯ ಮೇಲ್ವಿಚಾರಕ ಪ್ರವೀಣ್ ಸ್ವಾಗತಿಸಿದರು. ಶಾಲೆಯ ಮುಖ್ಯ ಶಿಕ್ಷಕರಾದ ತಿಮ್ಮಪ್ಪ ವಂದಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!