spot_img
Friday, April 24, 2026
spot_img

ಸದನದಲ್ಲಿ ಅಶ್ರುವಾಯು ಸಿಡಿಸಿದ ಪ್ರಕರಣ : ಪ್ರತಾಪ್‌ ಸಿಂಹ ಹೆಸರಿನಲ್ಲಿ ಪಾಸ್‌ ಪಡೆದು ಸದನವನ್ನು ನುಗ್ಗಿದ ಸಾಗರ್‌ ಶರ್ಮಾ : ತನಿಖೆ ಮುಂದುವರಿಸಿದ ಪೊಲೀಸರು

ಜನಪ್ರತಿನಿಧಿ ವಾರ್ತೆ (ನವ ದೆಹಲಿ ) : ಸಂಸತ್‌ ಕಲಾಪದ ಸಂದರ್ಭದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಸಂದರ್ಶಕರ ಗ್ಯಾಲರಿಯಿಂದ ಸದನಕ್ಕೆ ಜಿಗಿದು ಹಳದಿ ಬಣ್ಣದ ಗ್ಯಾಸ್‌ ಪಸರಿಸಿದ ಘಟನೆಗೆ ಸಂಬಂಧಿಸಿದಂತೆ ಕುತೂಹಲಕಾರಿಯಾದ ಒಂದು ವಿಷಯ ಈಗ ಬಹಿರಂಗವಾಗಿದೆ. 

ಸದನಕ್ಕೆ ನುಗ್ಗಿದ ಬಂಧಿತ ಇಬ್ಬರಲ್ಲಿ ಒಬ್ಬನ  ಪಾಸ್‌ನಲ್ಲಿ ಸಾಗರ್ ಶರ್ಮಾ ಎಂಬ ಹೆಸರಿದ್ದು, ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಹೆಸರನಲ್ಲಿ ಪಾಸ್‌ ನೀಡಲಾಗಿದೆ ಎಂದು ತಿಳಿದು ಬಂದಿದೆ.  ಸದನಕ್ಕೆ ನುಗ್ಗಿದ ಮತ್ತೊಬ್ಬ ವ್ಯಕ್ತಿಯನ್ನು ವೃತ್ತಿಯಲ್ಲಿ ಎಂಜಿನಿಯರ್ ಎಂದು ತಿಳಿದುಬಂದಿದ್ದು, ಮೈಸೂರು ಮೂಲದ ಮನೋರಂಜನ್ ಡಿ ಎಂದು ಗುರುತಿಸಲಾಗಿದೆ.

ದೇಶದ ಶಕ್ತಿ ಕೇಂದ್ರ ಸಂಸತ್ ಭವನದ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರು ಭಯಾನಕ ದಾಳಿ ನಡೆಸಿದ ಇಂದಿಗೆ 22 ವರ್ಷಗಳು ಕಳೆದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಭದ್ರತಾ ಲೋಪದ ಕಾರಣದಿಂದ ಲೋಕಸಭೆಯನ್ನು ಕಲಾಪವನ್ನ ಮುಂದೂಡಲಾಯಿತು ಮತ್ತು ಸಂಸದರು ಹೊರ ನಡೆದ ಘಟನೆ ನಡೆಯಿತು.

ಪ್ರತಾಪ್‌ ಸಿಂಹ ಹೆಸರಿನಲ್ಲಿ ಸಂಸತ್ತಿನ ವಿಸಿಟರ್ ಪಾಸ್‌ :

ಸಂಸತ್ತಿಗೆ ಭೇಟಿ ನೀಡಲು ಬಯಸುವ ಯಾರಾದರೂ ಮೊದಲು ತಮ್ಮ ಕ್ಷೇತ್ರದ ಸಂಸದರ ಹೆಸರಿನಲ್ಲಿ ಮನವಿ ಪತ್ರವನ್ನು ಸಲ್ಲಿಸಬೇಕು. ಸಾಮಾನ್ಯವಾಗಿ, ಸಂಸದರ ಹೆಸರಿನಲ್ಲಿ ಪಾಸ್‌ಗಳನ್ನು ನೀಡಲಾಗುತ್ತದೆ, ಸಂದರ್ಶಕರ ಪ್ರವೇಶಕ್ಕಾಗಿ ಭದ್ರತಾ ಪರಿಶೀಲನೆಯನ್ನು ಮಾಡುತ್ತಾರೆ ಮತ್ತು ಸಂದರ್ಶಕರು ಸಲ್ಲಿಸಿದ ಗುರುತಿನ ಚೀಟಿಗಳನ್ನು ಪರಿಶೀಲಿಸುತ್ತಾರೆ.

ಸಂಸತ್ತಿನ ಪ್ರವೇಶದ್ವಾರದಲ್ಲಿ ನಿಯೋಜಿಸಲಾದ ಕಾವಲುಗಾರರು ಮತ್ತು ಎಲೆಕ್ಟ್ರಾನಿಕ್ ಯಂತ್ರಗಳ ಮೂಲಕ ಸಂದರ್ಶಕರನ್ನು ಕಟ್ಟುನಿಟ್ಟಾದ ಭದ್ರತಾ ತಪಾಸಣೆಯ ಮೂಲಕ ಪರಿಶೀಲಿಸಿ ಸಂಸತ್‌ ಪ್ರವೇಶಕ್ಕೆ ಬಿಡಲಾಗುತ್ತದೆ.

ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಹೆಸರಿನಲ್ಲಿ ಸದನವನ್ನು ನುಗ್ಗಿದ ಒಬ್ಬ ಸಾಗರ್ ಶರ್ಮಾ ಸಂದರ್ಶಕರ ಪಾಸ್ ಅನ್ನು ಪಡೆದಿದ್ದಾನೆ ಎಂಬ ಮಾಹಿತಿ ಈಗ ಬೆಳಕಿಗೆ ಬಂದಿದೆ. ಆದರೇ, ಇಷ್ಟೆಲ್ಲಾ ತಪಾಸಣಾ ಭದ್ರತೆಯಿದ್ದರೂ ಸದನವನ್ನು ನುಗ್ಗಿದ ಇಬ್ಬರು ಹಳದಿ ಬಣ್ಣದ ಅಶ್ರುವಾಯುವಿರುವ ಸಣ್ಣ ಡಬ್ಬಿಗಳನ್ನು ಹೇಗೆ ಒಳಗೆ ತೆಗೆದುಕೊಂಡು ಪ್ರವೇಶಿಸಿದರು ಎನ್ನುವುದು ಈಗ ನಿಗೂಢ.  ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!