Sunday, September 8, 2024

ಗಂಗೊಳ್ಳಿಯಲ್ಲಿ ಮನ ಸೆಳೆದ ‘ಮೃಡ’

ಗಂಗೊಳ್ಳಿಯ  ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ವಿದ್ಯಾರ್ಥಿಗಳು ಅಭಿನಯಿಸಿದ “ಮೃಡ” – ಒಂದು ಸತ್ಯದ ಕಥೆ  ನಾಟಕ ತನ್ನ ಭಿನ್ನವೆನಿಸುವ ಕಥಾ ವಸ್ತು ಮತ್ತು ವಿಶೇಷ ಪ್ರಸ್ತುತಿಯಿಂದ ಗಮನ ಸೆಳೆಯಿತು. 

ಮರಣ ಹೊಂದುವ ಮೊದಲು  ಶಿವನನ್ನು ನೋಡಬೇಕು ಆ ಮೂಲಕ ಜನರ ಕಣ್ಣಲ್ಲಿ ಆರಾಧಿಸಲ್ಪಡಬೇಕು ಎನ್ನುವ ಬಯಕೆಯೊಂದಿಗೆ  ಶಿವನನ್ನು ನೋಡ ಹೊರಟ ಚಾರುಕೀರ್ತಿ ಎನ್ನುವ ಧನಿಕ ಅಂತಿಮವಾಗಿ ತನ್ನ ತಪ್ಪುಗಳಿಗೆ  ಅಹಂಕಾರಕ್ಕೆ ಬಲಿಯಾಗುವ ಕಥೆಯನ್ನು ಹೊಂದಿರುವ ಈ ನಾಟಕದಲ್ಲಿ ಕ್ಷಮಾ ಆಚಾರ್ಯ, ವೆಲಿಟಾ ಲೋಬೊ, ಸನ್ನಿಧಿ ಕರ್ಣಿಕ್, ಭೂಮಿಕಾ ಪೂಜಾರಿ,   ದಾಕ್ಷಾಯಿಣಿ ಖಾರ್ವಿ, ಶ್ರೀಲಕ್ಷ್ಮಿ, ಖುಷಿ ಸೇರಿದಂತೆ ಒಟ್ಟು 36 ವಿದ್ಯಾರ್ಥಿಗಳು ಅಭಿನಯಿಸಿದ್ದರು. ಹಿಮ್ಮೇಳದಲ್ಲಿ ವಿದ್ಯಾರ್ಥಿಗಳಾದ  ವೀರೇಶ್,  ಸುಜನ್ ಮತ್ತು ಕಾರ್ತಿಕ್ ಸಹಕರಿಸಿದರು.

  ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ನರೇಂದ್ರ ಎಸ್ ಗಂಗೊಳ್ಳಿ ಈ ನಾಟಕವನ್ನು ರಚಿಸಿ ನಿರ್ದೇಶಿಸಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!