spot_img
Friday, April 24, 2026
spot_img

ಯಾರು ಶತ್ರುಗಳು, ಯಾರು ಮಿತ್ರರು ಎಂದು ಸ್ವತಃ ಬಿಜೆಪಿಯವರಿಗೇ ಗೊಂದಲವಾಗುತ್ತಿದೆ : ಕಾಂಗ್ರೆಸ್‌ ವ್ಯಂಗ್ಯ

ಜನಪ್ರತಿನಿಧಿ ವಾರ್ತೆ(ಬೆಂಗಳೂರು) : ವಿಧಾನಸಭೆಯ ವಿಪಕ್ಷ ನಾಯಕ ಆರ್.‌ ಅಶೋಕ್‌ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವ ಬಿಜೆಪಿ ಶಾಸಕ ಎಸ್.‌ ಆರ್‌ ವಿಶ್ವನಾಥ್‌, ಅವರ ಕಚೇರಿಗೆ ಹೋಗುವುದಕ್ಕೆ ನಿರಾಕರಿಸಿದ್ದಾರೆ ಎಂಬ ಪತ್ರಿಕೆಯೊಂದರ ವರದಿಯನ್ನು ಉಲ್ಲೇಖಿಸಿ ವಿಪಕ್ಷ ನಾಯಕ, ಪದ್ಮನಾಭ ನಗರದ ಶಾಸಕ ಹಾಗೂ ಬಿಜೆಪಿಯನ್ನು ಆಡಳಿತಾರೂಢ ಕಾಂಗ್ರೆಸ್‌ ತಿವಿದಿದೆ.

ತನ್ನ ಅಧಿಕೃತ ʼಎಕ್ಸ್‌ʼ ಖಾತೆಯ ಮೂಲಕ ಬಿಜೆಪಿಯನ್ನು ಟೀಕಿಸಿದ ಕಾಂಗ್ರೆಸ್‌, ವಿರೋಧ ಪಕ್ಷದ ನಾಯಕನ ಕಚೇರಿಯಿಂದ ಅಶೋಕ್ ಹೆಸರನ್ನು ತೆಗೆದರಷ್ಟೇ ಕಚೇರಿಗೆ ಹೋಗುವೆ ಎಂದು ಬಿಜೆಪಿ ಶಾಸಕ ಪಟ್ಟು ಹಿಡಿದಿದ್ದಾರೆ ಎಂದು ಹೇಳಿದೆ.

ಮಾತ್ರವಲ್ಲದೇ, ವಿರೋಧ ಪಕ್ಷದ ನಾಯಕನಿಗೆ ಈ ಪರಿ ವಿರೋಧ ಸೃಷ್ಟಿಯಾಗಿದೆ ಎಂದರೆ ಅಶೋಕ್ ಅವರ ಸಂತೋಷದ ವ್ಯಾಲಿಡಿಟಿ ಶೀಘ್ರದಲ್ಲೇ ಮುಗಿಯುವ ಸೂಚನೆ ಅಲ್ಲವೇ ಎಂದು ರಾಜ್ಯ ಬಿಜೆಪಿಯನ್ನು ಪ್ರಶ್ನಿಸಿದ್ದಲ್ಲದೆ, ಯಾರು ಶತ್ರುಗಳು, ಯಾರು ಮಿತ್ರರು ಎಂದು ಸ್ವತಃ ಬಿಜೆಪಿಯವರಿಗೇ ಗೊಂದಲವಾಗುತ್ತಿದೆ ಎಂದು ವ್ಯಂಗ್ಯವಾಡಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!