Sunday, September 8, 2024

ಲೋಕಸಭಾ ವಿಸಿಟರ್ಸ್ ಗ್ಯಾಲರಿಯಿಂದ ಇಬ್ಬರು ಯುವಕರು ಸದನಕ್ಕೆ ಜಿಗಿದು ಹಳದಿ ಬಣ್ಣದ ಗ್ಯಾಸ್‌ ಸಿಂಪಡನೆ : ಭದ್ರತಾ ಲೋಪ ಆರೋಪ  

ಜನಪ್ರತಿನಿಧಿ ವಾರ್ತೆ (ನವ ದೆಹಲಿ) :  ಇಂದು(ಬುಧವಾರ) ಸಂಸತ್‌ ಕಲಾಪದ ಸಂದರ್ಭದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಸಂದರ್ಶಕರ ಗ್ಯಾಲರಿಯಿಂದ ಸದನಕ್ಕೆ ಜಿಗಿದು ಹಳದಿ ಬಣ್ಣದ ಗ್ಯಾಸ್‌ ಪಸರಿಸಿದ ಘಟನೆ ನಡೆಯಿತು.

ಭದ್ರತಾ ಉಲ್ಲಂಘನೆಯ ಕ್ಷಣವನ್ನು ವಿವರಿಸಿದ ಸಂಸದರೊಬ್ಬರು, ಇಬ್ಬರು ಸದನಕ್ಕೆ ಜಿಗಿದು ಬಂದರು ಮತ್ತು ಗಾಳಿಯಲ್ಲಿ ಹಳದಿ ಹೊಗೆಯನ್ನು ಅವರ ಕೈಗಳಲ್ಲಿದ್ದ ಸಣ್ಣ ಡಬ್ಬಿಗಳಿಂದ ಕಾರಿದರು ಎಂದು ಹೇಳಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ದೇಶದ ಶಕ್ತಿ ಕೇಂದ್ರ ಸಂಸತ್ ಭವನದ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರು ಭಯಾನಕ ದಾಳಿ ನಡೆಸಿದ ಇಂದಿಗೆ 22 ವರ್ಷಗಳು ಕಳೆದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಭದ್ರತಾ ಲೋಪದ ಕಾರಣದಿಂದ ಲೋಕಸಭೆಯನ್ನು ಕಲಾಪವನ್ನ ಮುಂದೂಡಲಾಯಿತು ಮತ್ತು ಸಂಸದರು ಹೊರ ನಡೆದ ಘಟನೆ ನಡೆಯಿತು.

ರಾಷ್ಟ್ರೀಯ ಸುದ್ದಿ ಸಂಸ್ಥೆಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ,  ಇಬ್ಬರು ವ್ಯಕ್ತಿಗಳು ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಜಿಗಿದಿದ್ದಾರೆ. “ಗ್ಯಾಸ್” ಅನ್ನು ಸಿಂಪಡಿಸಿದನು ಅದು ಅದು ವಿಷಕಾರಿ ಅಂತನ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್ ನಾಯಕ ಕಾಕೋಲಿ ದಸ್ತಿದಾರ್, “ನನಗೆ ಗೊತ್ತಿಲ್ಲ, ಅಪರಿಚಿತರು ಗ್ಯಾಲರಿಯಿಂದ ಜಿಗಿದರು. ಅವರು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು, ಮತ್ತು ಸ್ವಲ್ಪ ಗ್ಯಾಸ್ ಸಿಂಪಡಿಸಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನು, ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ, “ಇಬ್ಬರು ಯುವಕರು ಇದ್ದಕ್ಕಿದ್ದಂತೆ ಸಂದರ್ಶಕರ ಗ್ಯಾಲರಿಯಿಂದ ಸದನಕ್ಕೆ ಜಿಗಿದಿದ್ದಾರೆ. ಸುಮಾರು 20 ವರ್ಷದ ಆಸುಪಾಸಿನ ಯುವಕರು ಎಂಬಂತೆ ಕಾಣಿಸುತ್ತದೆ ಮತ್ತು ಕೈಯಲ್ಲಿ ಸಣ್ಣ ಡಬ್ಬಿಗಳನ್ನು ಹೊಂದಿದ್ದರು. ಈ ಡಬ್ಬಿಗಳಿಂದ ಹಳದಿ ಹೊಗೆಯನ್ನು ಸದನದಲ್ಲಿ ಕಾರಿಸಿದ್ದಾರೆ. ಅವರಲ್ಲಿ ಒಬ್ಬರು ಸ್ಪೀಕರ್ ಕುರ್ಚಿಯತ್ತ ಓಡಲು ಪ್ರಯತ್ನಿಸುತ್ತಿದ್ದರು. ಕೆಲವು ಘೋಷಣೆಗಳನ್ನು ಕೂಗಿದರು. ಹೊಗೆಯು ವಿಷಕಾರಿಯಾಗಿರಬಹುದು. 2001, ಡಿಸೆಂಬರ್ 13ರಂದು ಸಂಸತ್ತಿನ ಎರಡೂ ಕಲಾಪ ಮುಕ್ತಾಯವಾಗಿ 40 ನಿಮಿಷಗಳ ಬಳಿಕ ಸಂಸತ್ ಭವನದ ಮೇಲೆ ಪಾಕ್ ಬೆಂಬಲಿತ ಲಷ್ಕರ್-ಎ-ತೋಯ್ಬಾ ಹಾಗೂ ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಉಗ್ರರು ದಾಳಿ ನಡೆಸಿದ ದಿನದಂದೇ ಗಂಭೀರವಾದ ಭದ್ರತಾ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!