spot_img
Sunday, April 26, 2026
spot_img

ಜೈಪುರದ ರಾಜಮನೆತನದ ರಾಜಕುಮಾರಿ ದಿಯಾ ಈಗ ರಾಜಸ್ಥಾನದ ಉಪಮುಖ್ಯಮಂತ್ರಿ : ಯಾರೀ ರಾಜಕುಮಾರಿ ದಿಯಾ ಕುಮಾರಿ ?

ಜನಪ್ರತಿನಿಧಿ ವಾರ್ತೆ (ನವ ದೆಹಲಿ) : ಹಲವು ಊಹಾಪೋಹಗಳು ನಂತರ, ಭಾರತೀಯ ಜನತಾ ಪಕ್ಷವು (ಬಿಜೆಪಿ) ಮಂಗಳವಾರ (ಡಿಸೆಂಬರ್ 13) ರಾಜಸ್ಥಾನದ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಶಾಸಕರಾದ ಭಜನ್ ಲಾಲ್ ಶರ್ಮಾ ಅವರನ್ನು ಘೋಷಿಸಿದೆ. ದಿಯಾ ಕುಮಾರಿ ಮತ್ತು ಪ್ರೇಮಚಂದ್ ಬೈರ್ವಾ ಅವರನ್ನು ಉಪಮುಖ್ಯಮಂತ್ರಿಗಳೆಂದು ಎಂದು ಪಕ್ಷವು ಘೋಷಿಸಿದೆ. ಇದು ರಾಜಸ್ಥಾನ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಹುಬ್ಬೇರುವಂತೆ ಮಾಡಿತ್ತು.

ಎಲ್ಲಾ ಊಹಾಪೂಹಗಳ ನಡುವೆ, ಬಹುಶಃ, ದಿಯಾ ಕುಮಾರಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಹೈಕಮಾಂಡ್‌ ಆಯ್ಕೆ ಮಾಡಿದ್ದು ಹೆಚ್ಚೇನೂ ವಿಶೇಷತೆಯನ್ನು ಪಡೆದುಕೊಂಡಿಲ್ಲ. ಯಾಕೆಂದರೇ, ರಾಜಸ್ಥಾನ ರಾಜಕೀಯದಲ್ಲಿ ದಿಯಾ ಕುಮಾರಿ ಸ್ಟಾರ್‌ ಉದಯೋನ್ಮುಖ ರಾಜಕೀಯ ನಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಇದಲ್ಲದೆ, ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್‌ನನ್ನು ಸೋಲಿಸಿ  ಅಧಿಕಾರವನ್ನು ಹಿಡಿದ ಕೆಲವೇ ದಿನಗಳಲ್ಲಿ ದಿಯಾ ಕುಮಾರಿ ಅವರ ಹೆಸರು ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಯ ಸಾಲಿನಲ್ಲಿ ಕೇಳಿ ಬಂದಿತ್ತು. ಆದರೇ, ಹೈಕಮಾಂಡ್‌ ಅವರನ್ನು ಉಪ ಮುಖ್ಯಮಂತಯ್ರಿಯಾಗಿ ಆಯ್ಕೆ ಮಾಡಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಿ, ರಾಜಸ್ಥಾನವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡಲು ಬಿಜೆಪಿ ಸರ್ಕಾರ ಶ್ರಮಿಸಲಿದೆ ಎಂದು ತಿಳಿಸಿದರು ಮತ್ತು ಉಪಮುಖ್ಯಮಂತ್ರಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಹೈಕಮಾಂಡ್‌ಗೆ ಧನ್ಯವಾದ ತಿಳಿಸಿದರು.

ಯಾರೀ ರಾಜಕುಮಾರಿ ದಿಯಾ ಕುಮಾರಿ ?

ರಾಜಕುಮಾರಿ ದಿಯಾ ಕುಮಾರಿ, 52 ವರ್ಷದವರಾಗಿದ್ದು, ಜೈಪುರದ ರಾಜಮನೆತಕ್ಕೆ ಸೇರಿದವರಾಗಿದ್ದಾರೆ ಎನ್ನುವುದು ವಿಶೇಷ. ಅವರು ಜೈಪುರದ ರಾಜವಂಶದ ಕೊನೆಯ ಆಡಳಿತ ಮಹಾರಾಜರಾದ ಮಾನ್ ಸಿಂಗ್ II ರ ಮೊಮ್ಮಗಳು ಮತ್ತು 1971 ರ ಇಂಡೋ-ಪಾಕಿಸ್ತಾನ ಯುದ್ಧದಲ್ಲಿ ಲೆಫ್ಟಿನೆಂಟ್ ಕರ್ನಲ್ ಮತ್ತು ಪ್ಯಾರಾ ಕಮಾಂಡೋಗಳ ಕಮಾಂಡಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸಿದ ಸವಾಯಿ ಭವಾನಿ ಸಿಂಗ್ ಅವರ ಮಗಳು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ದಿಯಾ ಕುಮಾರಿ ಲಲಿತಕಲೆ ಮತ್ತು ವಿನ್ಯಾಸ ಕೌಶಲ್ಯಗಳಲ್ಲಿ ಪದವೀಧರರಾಗಿದ್ದು, ಲಂಡನ್‌ ವಿಶ್ವವಿದ್ಯಾಲಯದಿಂದ ಈ ವಿಷಯಗಳಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದಿದ್ದಾರೆ.

ರಾಜಸ್ಥಾನದ ಐ ಬ್ಯಾಂಕ್ ಸೊಸೈಟಿ, ಮತ್ತು HIV+ ಮಕ್ಕಳಿಗಾಗಿ ಕಾರ್ಯನಿರ್ವಹಿಸುತ್ತಿರುವ ರೇಸ್ ಎಂಬ ಎನ್‌ಜಿಒ ಸೇರಿದಂತೆ ಹಲವಾರು ಸರ್ಕಾರೇತರ ಸಂಸ್ಥೆಗಳೊಂದಿಗೆ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ, ಅವುಗಳಲ್ಲಿ ಅವರು ಪೋಷಕರು ಕೂಡ ಆಗಿದ್ದಾರೆ. ಅವರು 2019 ರಲ್ಲಿ ಸರ್ಕಾರದ ರಾಷ್ಟ್ರೀಯ ಹುಲಿ ಸಂರಕ್ಷಣಾ ಸದಸ್ಯರಾಗಿ ಸೇವೆ ಸಲ್ಲಿಸಲು ಆಯ್ಕೆಯಾಗಿದ್ದರು.

ದಿಯಾ ಕುಮಾರಿ ತನ್ನ ಸಾಮಾಜಿಕ ಸೇವೆ ಹಾಗೂ ನಾಯಕತ್ವದ ಕಾರಣಕ್ಕಾಗಿ “ಜೈಪುರದ ಮಗಳು” (daughter of Jaipur) ಮತ್ತು “ಬೀದಿಗಳಲ್ಲಿ ನಡೆಯುವ ರಾಜಕುಮಾರಿ”( princess who walks on the streets) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ವಾಸ್ತವವಾಗಿ, ಈ ಜನಪ್ರಿಯತೆಯೇ ಅವರನ್ನು ರಾಜ್ಯದಲ್ಲಿ ಈ ಎತ್ತರಕ್ಕೆ ಏರಲು ಕಾರಣವಾಗಿದೆ ಎನ್ನುವುದರಲ್ಲಿ ತಪ್ಪಿಲ್ಲ.

ರಾಜಕುಮಾರಿ ದಿಯಾ ಕುಮಾರಿಯವರ ರಾಜಕೀಯ ಹಿನ್ನೆಲೆ :

ಕುಮಾರಿ 2013 ರಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳುವುದರ ಮೂಲಕ ರಾಜಕೀಯಕ್ಕೆ ಪ್ರವೇಶ ನೀಡಿದರು. ಕುತೂಹಲಕಾರಿಯಾಗಿ, ಕುಮಾರಿ ರಾಜಕೀಯ ಪ್ರವೇಶಕ್ಕೆ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಪ್ರಮುಖ ಪಾತ್ರ ವಹಿಸಿದ್ದರು. ಅಂದಿನ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತು ಆ ಸಮಯದಲ್ಲಿ ಗುಜರಾತ್ ಸಿಎಂ ಆಗಿದ್ದ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ನಡೆದ ರ್ಯಾಲಿಯಲ್ಲಿ ಕುಮಾರಿ ಬಿಜೆಪಿ ಸೇರ್ಪಡೆಗೊಂಡಿದ್ದರು.

ಅದೇ ವರ್ಷದಲ್ಲಿ, ಅವರು ಸವಾಯಿ ಮಾಧೋಪುರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನ ಡ್ಯಾನಿಶ್ ಅಬ್ರಾರ್ ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಹಿರಿಯ ಬುಡಕಟ್ಟು ನಾಯಕ ಕಿರೋಡಿ ಲಾಲ್ ಮೀನಾ ಅವರ ವಿರುದ್ಧ ಸ್ಪರ್ಧಿಸಿ ಗೆದ್ದು ಸವಾಯಿ ಮಾಧೋಪುರದ ಶಾಸಕಿಯಾಗಿ ಆಯ್ಕೆಯಾದರು.

ನಂತರ 2019 ರ ಲೋಕಸಭಾ ಚುನಾವಣೆಯಲ್ಲಿ, ಅವರು ರಾಜ್‌ಸಮಂದ್‌ನಿಂದ ಸ್ಪರ್ಧಿಸಿದರು ಮತ್ತು 5.51 ಲಕ್ಷ ಮತಗಳ ದೊಡ್ಡ ಗೆಲುವಿನ ಅಂತರದಲ್ಲಿ ಸಂಸದರಾಗಿ ಆಯ್ಕೆಯಾದರು.

2023 ರ ವಿಧಾನಸಭಾ ಚುನಾವಣೆಯಲ್ಲಿ, ಅವರು ಕಾಂಗ್ರೆಸ್ ಅಭ್ಯರ್ಥಿ ಸೀತಾರಾಮ್ ಅಗರ್ವಾಲ್ ಅವರನ್ನು ಸೋಲಿಸಿ ವಿದ್ಯಾಧರ್ ನಗರ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದರು. ಈಗ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!