spot_img
Sunday, April 26, 2026
spot_img

ಕುಂದಾಪುರದ ಪ್ರಸಿದ್ಧ ರಂಗನಟ ಅಶೋಕ್ ಶ್ಯಾನುಭಾಗ್ ನಿಧನ

ಕುಂದಾಪುರ: ಹಿರಿಯ ರಂಗಭೂಮಿ ಕಲಾವಿದ, ಮೂರು ಮುತ್ತು ನಾಟಕದ ಕೀ ಕೀ ರಮಾನಂದ ಖ್ಯಾತಿಯ ನಟ ಅಶೋಕ್ ಶ್ಯಾನುಭಾಗ್ (54 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಡಿ.8ರಂದು ನಿಧನರಾಗಿದ್ದಾರೆ.

ರಂಗಭೂಮಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಅವರು ಹಾಸ್ಯಪಾತ್ರಗಳ ಮೂಲಕವೇ ದೊಡ್ಡ ಅಭಿಮಾನಿಗಳ ಬಳಗವನ್ನೇ ಸೃಷ್ಟಿಸಿದ್ದರು. ನಗಿಸುವ ವಿಶೇಷ ಕೌಶಲ್ಯವನ್ನು ಹೊಂದಿದ್ದ ಅವರು ತನ್ನ ವಿಶಿಷ್ಠವಾದ ಸ್ವರದ ಮೂಲಕ ಜನಮನ ರಂಜಿಸಿದ್ದರು.

ಕುಂದಾಪುರದ ಪಟ್ಟಣ್ ಶೇಟ್ ಹುಲಿಮನೆ ದಿ.ನಾರಾಯಣ ಶ್ಯಾನುಭೋಗ್ ಹಾಗೂ ದಿ. ಕಸ್ತೂರಿ ಶ್ಯಾನುಭಾಗ್ ಅವರ ಪುತ್ರ ಅಶೋಕ್ ಶ್ಯಾನುಭೋಗ್ ಅವರು 1979ರಲ್ಲಿ ರೂಪಕಲಾ ಸಂಸ್ಥೆಯಲ್ಲಿ ಬಾಲ ಕಲಾವಿದರಾಗಿ ಸತ್ಯ ಹರಿಶ್ಚಂದ್ರ, ಟಿಪ್ಪು ಸುಲ್ತಾನ್ ನಾಟಕದ ಮೂಲಕ ರಂಗಭೂಮಿ ಪ್ರವೇಶಿಸಿದವರು. ಶಿಕ್ಷಣದ ಬಳಿಕ ರಂಗಭೂಮಿ ಹಾಗೂ ಸಿನಿಮಾಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕಿರುತೆರೆಗಳಲ್ಲಿಯೂ ಮಿಂಚಿದ್ದರು. ಮೂರುಮುತ್ತು ನಾಟಕ ಅವರಿಗೆ ಹೊಸ ತಿರುವು ನೀಡಿತ್ತು. ರೂಪಕಲಾ ತಂಡದಲ್ಲಿ ಅವರ ಪ್ರತಿಭೆ ಪ್ರಕಾಶಮಾನವಾಗಿ ಬೆಳಗಿತ್ತು. ದಿ.ಬಾಲಕೃಷ್ಣ ಪೈ ಅವರ ಕಲ್ಪನೆಯಂತೆ ಅಶೋಕ ಶ್ಯಾನುಭಾಗ್ ಅವರು ರಮಾನಂದನ ಪಾತ್ರವನ್ನು ಕಟ್ಟಿಕೊಟ್ಟಿದ್ದರು. ಆ ಕಾರಣದಿಂದಾಗಿ ಕುಳ್ಳಪ್ಪು ಅವರ ನೆಚ್ಚಿನ ಶಿಷ್ಯರಾಗಿ ಅಶೋಕ್ ಶ್ಯಾನುಭಾಗ್ ಗುರುತಿಸಿಕೊಂಡಿದ್ದರು. ಮಜಾ ಟಾಕೀಸ್‌ನಲ್ಲಿಯೂ ಕೂಡಾ ಮೋಡಿ ಮಾಡಿದ್ದರು.

ಅಶೋಕ ಶ್ಯಾನುಭಾಗ, ಸತೀಶ ಪೈ, ಸಂತೋಷ ಪೈ ಸಹೋದರರೊಂದಿಗೆ ಮೂರು ಮುತ್ತು, ಅವನಲ್ಲ ಇವನು, ಪಾಪ ಪಾಂಡು, ಅಳುವುದೋ ನಗುವುದೋ, ರಾಮ ಕೃಷ್ಣ ಗೋವಿಂದ ಸಹಿತಯ ಹಲವಾರು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಮೂರು ಮುತ್ತುವಿನಲ್ಲಿ ಒಂದು ಮುತ್ತು ಆಗಿ ಬಹಳ ಜನಪ್ರಿಯರಾಗಿದ್ದರು. ಮೂರು ಮುತ್ತು ಮೂರು ದಶಕಗಳಿಂದ ಪ್ರದರ್ಶನಗೊಳ್ಳುತ್ತಿದ್ದು, ಇವರ ಕೀಂ ಕೀಂ ರಾಮನಾಥ ಪಾತ್ರ ಪ್ರೇಕ್ಷಕರನ್ನು ಹುಚ್ಚೆಬ್ಬಿಸುತ್ತಿತ್ತು.

ಉಡುಪಿ ಜಿಲ್ಲೆಯಲ್ಲದೇ ಉತ್ತರ ಕನ್ನಡ ಭಾಗದಲ್ಲಿ ಇವರು ತಮ್ಮ ಪ್ರತಿಭೆಯಿಂದ ಬಹಳ ಜನಮನ್ನಣೆ ಪಡೆದಿದ್ದರು. ವಿದೇಶದಲ್ಲಿಯೂ ಹತ್ತಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಪಾಲ್ಗೊಂಡು ಅಭಿನಂದಿಸಲ್ಪಟ್ಟಿದ್ದರು. ಕಲರ್‍ಸ್ ಕನ್ನಡ, ಮಜಾ ಟಾಕೀಸ್ ಟಿವಿ ಶೋಗಳಲ್ಲೂ ಅಶೋಕ ಶ್ಯಾನುಭಾಗ ಅವರು ಮೂರು ಸಲ ಸತೀಶ ಪೈ, ಸಂತೋಷ ಪೈ ಅವರೊಂದಿಗೆ ರೂಪಕದಲ್ಲಿ ಅಭಿನಯಿಸಿ ನಗಿಸಿದ್ದಾರೆ.

ಇವರು ಪತ್ನಿ ಪ್ರಾಧ್ಯಾಪಕಿ, ಲೇಖಕಿ ಸುಮತಿ ಶೆಣೈ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!