spot_img
Sunday, April 26, 2026
spot_img

ಜೀವನದಲ್ಲಿ ಆಧ್ಯತೆ, ಉದ್ದೇಶ ಅತ್ಯಮುಖ್ಯ : ಡಾ. ಹೆಚ್.ಎಸ್. ಶೆಟ್ಟಿ

ಡಾ. ಹೆಚ್.ಎಸ್‌ ಶೆಟ್ಟಿಯವರಿಗೆ ಸನ್ಮಾನ ಸಮಾರಂಭ  | 200 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಾ ವಿತರಣೆ

ಜನಪ್ರತಿನಿಧಿ ವಾರ್ತೆ (ಕುಂದಾಪುರ) : ಹಣವಿದ್ದವರೆಲ್ಲರೂ ದಾನ ಧರ್ಮ ಮಾಡುವುದಿಲ್ಲ. ದಾನ ಮಾಡುವುದಕ್ಕೆ ಮನಸ್ಸು ಬೇಕು. ದಾನ ತೃಪ್ತಿಯಿಂದ ಮಾಡಬೇಕು. ನಮ್ಮ ಟ್ರಸ್ಟ್‌ನಿಂದ ಕೆಲವು ವರ್ಷಗಳಿಂದ ತೃಪ್ತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿರುವುದರ ಬಗ್ಗೆ ಬಹಳ ಹೆಮ್ಮೆ ಇದೆ. ನಾನು ಕಾಸು ಮತ್ತು ಕ್ಯಾಶ್‌ ವ್ಯವಹಾರ ಮಾಡಿಲ್ಲ. ಕಾಸಿನ ವ್ಯವಹಾರ ಮಾಡಿದ್ದೇನೆ. ಎಳವೆಯಿಂದಲೂ ಎಲ್ಲಾ ತರದ ಜೀವನವನ್ನು ಅನುಭವಿಸಿರುವುದರಿಂದ ಎಲ್ಲಾ ತರದ ಜೀವನದ ಬಗ್ಗೆ ಅರಿವಿದೆ. ನಮ್ಮ ಬಾಲ್ಯದಲ್ಲಿ ಶಿಕ್ಷಣ ಪಡೆಯುವುದಕ್ಕೆ ಕಷ್ಟವಾಗಿತ್ತು. ಜೀವನದಲ್ಲಿ ಶಿಕ್ಷಣ ಪಡೆಯುವುದಕ್ಕೆ ಯಾರಿಗೂ ಕಷ್ಟವಾಗಬಾರದು. ಕನಿಷ್ಠ ಒಂದು ಪದವಿ ಈಗಿನ ಕಾಲಕ್ಕೆ ಬೇಕೆ ಬೇಕು. ಶಿಕ್ಷಣಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ನಮ್ಮ ಟ್ರಸ್ಟ್‌ನಿಂದ ಕಳೆದ ಹಲವು ವರ್ಷಗಳಿಂದ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದ್ದೇವೆ ಎಂದು ಉದ್ಯಮಿ, ಮೈಸೂರು ಮರ್ಕಂಟೈಲ್‌ ಕಂಪೆನಿ ಲಿಮಿಟೆಡ್‌ ಇದರ ಅಧ್ಯಕ್ಷ ಹಾಗೂ ಕಾರ್ಯ ನಿರ್ವಹಣಾ ಅಧಿಕಾರಿ ಡಾ. ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.

ಅವರು ಇಲ್ಲಿನ ಭಂಡಾರ್‌ಕಾರ್ಸ್‌ ಕಾಲೇಜಿನ ಆರ್.‌ ಎನ್‌. ಶೆಟ್ಟಿ ಸಭಾಂಗಣದಲ್ಲಿ ಇಂದು(ಶುಕ್ರವಾರ), ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 23ನೇ ಘಟಿಕೋತ್ಸವದಲ್ಲಿ ಡಾಕ್ಟರ್‌ ಆಫ್‌ ಸೈನ್ಸ್‌ (Doctor of Science) ಗೌರವ ಪಡೆದ ಹಿನ್ನೆಲೆಯಲ್ಲಿ ನಡೆದ ಸನ್ಮಾನ ಸಮಾರಂಭ ಹಾಗೂ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌, ಬೆಂಗಳೂರು ವತಿಯಿಂದ 2023-24ನೇ ಸಾಲಿನ ಆಯ್ದ 200 ವಿದ್ಯಾರ್ಥಿಗಳಿಗೆ ೬ನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಕಾಲೇಜಿನ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನಮ್ಮ ಜೀವನದಲ್ಲಿ ಆಧ್ಯತೆ, ಉದ್ದೇಶ ಅತ್ಯಮುಖ್ಯ. ಆದ್ಯತೆ ಮರೆತು ನಡೆದುಕೊಳ್ಳುವ ಯಾವುದೇ ಆಗಲಿ ಅಥವಾ ಯಾರೇ ಆಗಲಿ ಸೋಲನುಭವಿಸುವುದು ಖಚಿತ. ಬೆಳೆಯುವುದಕ್ಕೆ ದಿಕ್ಕಿನ ಆಯ್ಕೆ ಮುಖ್ಯ. ನಮ್ಮ ಉದ್ದೇಶ ಮತ್ತು ಆದ್ಯತೆ ಸ್ಪಷ್ಟವಾಗಿದ್ದರೇ ಬೆಳವಣಿಗೆ ಕಾಣುವುದಕ್ಕೆ ಸಾಧ್ಯವಿದೆ. ದೇಶದ ಆರ್ಥಿಕ ಸ್ಥಿತಿ ಬೆಳೆಯುತ್ತಿದೆ. ದೇಶದ ಆರ್ಥಿಕ ಪ್ರಗತಿ ಸುಗಮ ದಾರಿಯಲ್ಲಿ ಸಾಗುತ್ತಿದೆ. ಭಾರತದ ಶೇ.60ರಷ್ಟು ಭಾಗ ಭೂಮಿ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿದೆ.  ಉದ್ಯೋಗಶೀಲತೆಗೆ ಆಧ್ಯತೆ ನೀಡಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿಯೂ ಆಗಿರುವ ಅವರು, ಕಾಲೇಜು ದಿನಗಳನ್ನು ಸ್ಮರಿಸಿಕೊಂಡಿದ್ದಲ್ಲದೇ, ತಮ್ಮ ವೃತ್ತಿ ಬದುಕಿಗೆ ಮಹತ್ತರ ತಿರುವು ನೀಡಿದ ಹಾಗೂ ತಮ್ಮ ಯೋಚನಾ ಲಹರಿಯನ್ನೇ ಬದಲಾಯಿಸಿದ ಕಾಲೇಜಿನಿಂದ ಗೌರವ ಪಡೆಯುತ್ತಿರುವುದು ಅತೀವ ಸಂತಸ ತಂದಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌, ಮಣಿಪಾಲ ಇದರ ಅದ್ಯಕ್ಷ, ಡಾ. ಎಚ್.‌ ಎಸ್. ಬಲ್ಲಾಳ್, ಬಡತನದಿಂದ ಯಾರ ಶಿಕ್ಷಣವೂ ನಿಲ್ಲಬಾರದು ಎಂಬ ಉದ್ದೇಶದಿಂದ ವಿದ್ಯಾರ್ಥಿ ವೇತನವನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಶ್ಲಾಘನೀಯ. ನೀವು ಕೊಡಬಹುದಾದ ಉತ್ತಮ ಕೊಡುಗೆಗಳಲ್ಲಿ ಶಿಕ್ಷಣ ಶ್ರೇಷ್ಟವಾದದ್ದು.  ಸ್ವಾಭಿಮಾನ ಹಾಗೂ ಪ್ರಾಮಾಣಿಕತೆ ಇದ್ದಲ್ಲಿ ಯಾವ ಎತ್ತರವನ್ನೂ ತಲುಪಬಹುದು ಎನ್ನುವುದಕ್ಕೆ ಡಾ. ಹಾಲಾಡಿ ಶ್ರೀನಿವಾಸ ಶೆಟ್ಟಿಯವರೇ ನಮ್ಮ ಮುಂದಿರುವ ಉತ್ತಮ ಉದಾಹರಣೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿದ್ದ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ತನಗೆ ಊಟವಿಲ್ಲದ ಕಾಲದಿಂದ, ತಾನು ಒಂದಿಷ್ಟು ಮಂದಿಗೆ ಊಟ ಹಾಕುವವರೆಗೆ, ತನಗೆ ಗಾಡ್‌ ಇಲ್ಲದ ಕಾಲದಿಂದ, ತಾನೊಂದಿಷ್ಟು ಮಂದಿಗೆ ಗಾಡ್‌ ಫಾದರ್‌ ಆಗುವಲ್ಲಿಯವರಗೆ ಎಚ್.‌ ಎಸ್‌ ಶೆಟ್ಟಿಯವರು ಬೆಳೆದು ನಿಂತಿರುವುದೇ  ಒಂದು ಮಾಡೆಲ್‌ ಎಂದರು.

ಸಮಾರಂಭದಲ್ಲಿ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರುಗಳಾದ ಕೆ. ದೇವದಾಸ್‌ ಕಾಮತ್, ರಾಜೇಂದ್ರ ತೋಳಾರ್‌, ಶಾಂತಾರಾಮ್‌ ಪ್ರಭು, ಯು.ಎಸ್‌ ಶೆಣೈ, ಪ್ರಕಾಶ್‌ ಟಿ. ಸೋನ್ಸ್‌, ಸದಾನಂದ ಚಾತ್ರ ಹಾಗೂ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌, ಬೆಂಗಳೂರು ಇದರ ಉಪಾಧ್ಯಕ್ಷ ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.

ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಶುಭಕರಾಚಾರಿ ಸ್ವಾಗತಿಸಿ ಪ್ರಸ್ತಾವಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಎಚ್ಸ್‌ ಬಲ್ಲಾಳ್‌ ಅವರನ್ನು ಪರಿಚಯಿಸಿದರು, ಉಪನ್ಯಾಸಕ ಸತ್ಯನಾರಾಯಣ ಅಈನಂದನಾ ಪತ್ರ ವಾಚಿಸಿದರು, ಉಪನ್ಯಾಸಕ ಮಂಜುನಾಥ್‌ ಕೆ.ಎಸ್‌ ವಂದಿಸಿ, ಉಪನ್ಯಾಸಕಿ ಸ್ನೇಹಾ ಎಸ್‌ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದಲ್ಲಿ ಹೆಗ್ಗುಂಜೆ ರಾಜೀವ್‌ ಶೆಟ್ಟಿ ಚಾರಿಟೇವಲ್‌ ಟ್ರಸ್ಟ್‌, ಬೆಂಗಳೂರು ವತಿಯಿಂದ 2023-24ನೇ ಸಾಲಿನ ಆಯ್ದ 200 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!