Thursday, November 21, 2024

ರೈತ ಮಹಿಳೆ ಯಶೋಧ ಭಂಡಾರಿ ಅವರಿಗೆ ಪಂಚವರ್ಣದ ‘ರೈತರೆಡೆಗೆ ನಮ್ಮ ನಡಿಗೆ’ ಗೌರವ

ಕೋಟ: ದೇಶದ ಬೆನ್ನೆಲುಬು ರೈತ, ಸೈನಿಕ, ಶಿಕ್ಷಕ ಆದರೆ ಅಂತಹ ರೈತ ಸಮುದಾಯಕ್ಕೆ ಪುಷ್ಟಿ ನೀಡುವ ಪಂಚವರ್ಣದ ಕಾರ್ಯ ನಿಜಕ್ಕೂ ಅಭಿನಂದಾರ್ಹ ಎಂದು ನಿವೃತ್ತ ಮುಖ್ಯ ಶಿಕ್ಷಕ ಗಣೇಶ್ ಜಿ ಹೇಳಿದರು.

ಮಂಗಳವಾರ ಗುಂಡ್ಮಿ ಪರಿಸರದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಅದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ರೈತ ಧ್ವನಿ ಸಂಘ ಕೋಟ, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ, ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಗೀತಾನಂದ ಫೌಂಡೇಶನ್ ಮಣೂರು, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರುಗಳ ಸಹಯೋಗದೊಂದಿಗೆ 30ನೇ ಸರಣಿ ಮಾಲಿಕೆ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರಸ್ತುವ ವಿದ್ಯಾಮಾನದಲ್ಲಿ ನಶಿಸಿಹೋಗುತ್ತಿರುವ ಕೃಷಿ ಕಾಯಕಕ್ಕೆ ವೇಗ ನೀಡುವ ಅಗತ್ಯತೆಯನ್ನು ಒತ್ತಿ ಹೇಳಿದರಲ್ಲದೆ, ಮನೆ ಮನೆಗೆ ತೆರಳಿ ಸಾಧಕ ರೈತರ ಗುರುತಿಸುವ ಮಹಾತ್ಕಾರ್ಯ ನಿಜಕ್ಕೂ ಶ್ಲಾಘನೀಯ, ಯಶೋಧ ಭಂಢಾರಿ ಒರ್ವ ಮಹಿಳೆ ಎನ್ನದೆ ಪುರುಷನಂತೆ ಸಮಾನವಾಗಿ ರೈತಕಾಯಕ ನಡೆಸುವ ಜತೆಗೆ ಇತರರಿಗೆ ಪ್ರೇರೇಪಿಸುವ ಕಾರ್ಯ ಕೃಷಿ ಉಳಿವಿಗೆ ಮುನ್ನಡಿ ಬರೆಯುವುದರಲ್ಲಿ ಅನುಮಾನವೇವಿಲ್ಲ ಎಂದರಲ್ಲದೆ ಕೃಷಿಗೆ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡಬೇಕು ತನ್ಮೂಲಕ ಕೃಷಿ ಕ್ಷೇತ್ರದಲ್ಲಿ ಮತ್ತಷ್ಟು ಯುವ ಸಮುದಾಯ ತೊಡಗಿಕೊಳ್ಳುವಂತೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ 30ನೇ ರೈತ ಸಾಧಕಿ ಗುಂಡ್ಮಿ ಯಶೋಧ ಭಂಡಾರಿ ಇವರನ್ನು ಕೃಷಿ ಪರಿಕರವನ್ನಿತ್ತು, ಗಿಡ ನೀಡಿ ಗೌರವಿಸಲಾಯಿತು.

ಅಧ್ಯಕ್ಷತೆಯನ್ನು ಪಂಚವರ್ಣದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಸಾಲಿಗ್ರಾಮ ಪ.ಪಂ ಸದಸ್ಯ ರವೀಂದ್ರ ಕಾಮತ್, ಮಾಜಿ ಅಧ್ಯಕ್ಷ ರಫೀಕ್,ನಿವೃತ್ತ ಬ್ಯಾಂಕ್ ಅಧಿಕಾರಿ ಗಣಪಯ್ಯ ನಾವಡ, ಕೋಟದ ಜನತಾ ಸಂಸ್ಥೆಯ ಮ್ಯಾನೇಜರ್ ಶ್ರೀನಿವಾಸ ಕುಂದರ್, ರೈತಧ್ವನಿ ಸಂಘ ಅಧ್ಯಕ್ಷ ಎಂ ಜಯರಾಮ್ ಶೆಟ್ಟಿ, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷ ಅರವಿಂದ ಶರ್ಮ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ದೇವಪ್ಪ ಪಟೆಗಾರ್,ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಪಂಚವರ್ಣದ ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಘಟಕದ ಅಧ್ಯಕ್ಷೆ ಕಲಾವತಿ ಅಶೋಕ್ ಉಪಸ್ಥಿತರಿದ್ದರು.

ಪಂಚವರ್ಣ ಮಹಿಳಾ ಮಂಡದ ಉಪಾಧ್ಯಕ್ಷೆ ವಸಂತಿ ಹಂದಟ್ಟು ಸ್ವಾಗತಿಸಿದರು.ಮಹಿಳಾ ಘಟಕದ ಕಾರ್ಯದರ್ಶಿ ಲಲಿತಾ ಪೂಜಾರಿ ಸನ್ಮಾನಪತ್ರ ವಾಚಿಸಿದರು. ಕಾರ್ಯಕ್ರವನ್ನು ಸದಸ್ಯೆ ಸುಜಾತ ಬಾಯರಿ ನಿರೂಪಿಸಿದರು. ಸದಸ್ಯ ಕೇಶವ ಆಚಾರ್ ವಂದಿಸಿದರು. ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!