spot_img
Sunday, April 26, 2026
spot_img

ದಲಿತರಿಗೆ RSS ಕಛೇರಿಯೊಳಗೆ ಪ್ರವೇಶವಿಲ್ಲ : ʼಮನುವಾದ ವಿಧಿಸಿದ ಎಚ್ಚರಿಕೆʼ : ಬಿಜೆಪಿಯನ್ನು ತಿವಿದ ಕಾಂಗ್ರೆಸ್‌

ಜನಪ್ರತಿನಿಧಿ ವಾರ್ತೆ (ಬೆಂಗಳೂರು) :  ವಿರೋಧ ಪಕ್ಷದ ನಾಯಕನ ಆಯ್ಕೆಗೆ ಬಿಜೆಪಿಗೆ ದಲಿತರು ಕಾಣಲಿಲ್ಲ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ದಲಿತರು ಕಾಣಲಿಲ್ಲ. ಬಿಜೆಪಿಯಲ್ಲಿ ದಲಿತರು ಸಿಎಂ ಹುದ್ದೆಯ ಬಗ್ಗೆ ಕನಸನ್ನೂ ಕಾಣುವ ಹಾಗಿಲ್ಲ ಎಂದು ಆಡಳಿತಾರೂಢ ಕಾಂಗ್ರೆಸ್‌ ಬಿಜೆಪಿಯನ್ನು ಹಿಗ್ಗಾಮುಗ್ಗಾ ತರಾಟಗೆ ತೆಗೆದುಕೊಂಡಿದೆ.

ಮಾಜಿ ಸಚಿವ, ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಗೆ ಮಹಾರಾಷ್ಟ್ರದಲ್ಲಿನ ನಾಗ್ಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಹೆಡಗೇವಾರ್‌ ವಸ್ತುಸಂಗ್ರಹಾಲಯದ ಪ್ರವೇಶ ನಿರಾಕರಿಸಲಾಗಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಸ್ಪಷ್ಟಪಡಿಸಬಲ್ಲಿರಾ ಎಂದು ಪ್ರಶ್ನಿಸಿರುವ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಬಿಜೆಪಿಯನ್ನು ಟೀಕೆ ಮಾಡಿದೆ.

ಬಿಜೆಪಿ ಹಾಗೂ RSS ಹೇಳುವ ಹಿಂದುತ್ವದಲ್ಲಿ ಸಮಾನತೆ, ಸಹಬಾಳ್ವೆ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. RSS ಸಂವಿಧಾನ ವಿರೋಧಿ ಸಂಘಟನೆ ಎಂಬುದಕ್ಕೆ ಅವರು ಆಚರಿಸುವ ಅಸ್ಪೃಶ್ಯತೆಯೇ ಸಾಕ್ಷಿ ನುಡಿಯುತ್ತದೆ ಎಂದಿದೆ.

ಮಾತ್ರವಲ್ಲದೇ, ದಲಿತರಿಗೆ RSS ಕಛೇರಿಯೊಳಗೆ ಪ್ರವೇಶವಿಲ್ಲ. ಬಿಜೆಪಿ ಕಛೇರಿಯಲ್ಲಿ ಸ್ವಾತಂತ್ರವಿಲ್ಲ, ಸಮಾನತೆಯನ್ನು ಬಿಜೆಪಿ ಸಹಿಸುವುದಿಲ್ಲ! ಎಂದು ಇದು ʼಮನುವಾದ ವಿಧಿಸಿದ ಎಚ್ಚರಿಕೆʼ ಎಂದು ಹೇಳಿದೆ. 

RSS ಹಾಗೂ ಬಿಜೆಪಿಯ ದಲಿತ ವಿರೋಧಿ ನೀತಿಯನ್ನು ಸ್ವತಃ ಬಿಜೆಪಿಗರೇ ತಿಳಿಸಿದ್ದಾರೆ. ದಲಿತರು RSS, ಬಿಜೆಪಿಯಲ್ಲಿ ಉನ್ನತ ಸ್ಥಾನಮಾನ ಪಡೆಯುವುದಿರಲಿ ಕನಿಷ್ಠ ಗೌರವವನ್ನೂ ನಿರೀಕ್ಷಿಸಲು ಅಸಾಧ್ಯ. ಬಿಜೆಪಿಯ ಹಿಂದುತ್ವದಲ್ಲಿ ದಲಿತರು ಹಿಂದುಳಿದವರಿಗೆ ಜಾಗವಿಲ್ಲ ಎಂದು ಬಿಜೆಪಿಯನ್ನು ಕಾಂಗ್ರೆಸ್‌ ತಿವಿದಿದ್ದಲ್ಲದೇ, ಬಿಜೆಪಿಯಲ್ಲಿನ ದಲಿತರು, ಹಿಂದುಳಿದವರು ಬಹುತ್ವ ಸಿದ್ಧಾಂತದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಆತ್ಮಗೌರವವನ್ನು ಉಳಿಸಿಕೊಳ್ಳಲಿ ಎಂದು ಜರೆಯುವುದರ ಜೊತೆಗೆ ವಿಜಯಪುರ ಸಂಸದ ರಮೇಶ್‌ ಜಿಗಜಿಣಗಿ ʼಬಿಜೆಪಿಯಲ್ಲಿ ದಲಿತ ನಾಯಕರು ಉನ್ನತ ಸ್ಥಾನಕ್ಕೇರುವುದು ಕಷ್ಟʼ ಎಂದು ಹೇಳಿರುವುದನ್ನು ಉಲ್ಲೇಖಿಸಿದೆ.

ಬಿಜೆಪಿ ಹಾಗೂ RSSನವರು ನೈಜ ಹಿಂದೂ ಧರ್ಮ ಪರಿಪಾಲಕರೇ ಆಗಿದ್ದರೆ ಉತ್ತರಿಸಲಿ..

◆ಇದುವರೆಗೂ ದಲಿತ, ಹಿಂದುಳಿದವರು RSSನ ಸರಸಂಘಚಾಲಕರಾಗಿಲ್ಲವೇಕೆ?

◆RSSನ ಪ್ರಮುಖ ಹುದ್ದೆಗಳಿಗೆ ದಲಿತರು ನೇಮಕವಾಗಿಲ್ಲವೇಕೆ?

◆ಇದುವರೆಗೂ RSS ಕಚೇರಿಗಳಲ್ಲಿ ಅಂಬೇಡ್ಕರ್ ಫೋಟೋ ಇಡುವುದಿಲ್ಲವೇಕೆ?

◆ಅಂಬೇಡ್ಕರ್ ಜಯಂತಿ ಆಚರಿಸುವುದಿಲ್ಲವೇಕೆ?

◆RSS ಸಂವಿಧಾನ ಪ್ರತಿಯನ್ನು ಸುಟ್ಟಿದ್ದೇಕೆ?

◆ದಲಿತರಿಗೆ ನೀಡಿದ್ದ ಮತದಾನದ ಹಕ್ಕನ್ನು ವಿರೋಧಿಸಿದ್ದೇಕೆ?

◆ಮಹಿಳೆಯರಿಗೆ ಸಂಘದಲ್ಲಿ ಪ್ರವೇಶವಿಲ್ಲವೇಕೆ?

◆ದಲಿತರಿಗೆ ಸಂಘದ ಕಚೇರಿಗಳಿಗೆ ಪ್ರವೇಶವಿಲ್ಲವೇಕೆ?

◆ ಬಿಜೆಪಿಯಲ್ಲಿ ಯಾವೊಬ್ಬ ದಲಿತರೂ ರಾಜ್ಯಾಧ್ಯಕ್ಷ ಆಗಿಲ್ಲವೇಕೆ? ಎಂದು ಪ್ರಶ್ನೆಗಳ ಸುರಿಮಳೆಗೆರದಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!