spot_img
Wednesday, January 22, 2025
spot_img

ಡಿಯರ್‌ ಕಾಂಗ್ರೆಸ್‌ ದಲಿತರ ಮೇಲಿನ ನಿಮ್ಮ ಹುಸಿ ಪ್ರೀತಿ ಏನೆಂಬುದು.. ಜಗಜ್ಜಾಹೀರಾಗಿದೆ : ಬಿಜೆಪಿ ಆಕ್ರೋಶ

ಜನಪ್ರತಿನಿಧಿ ವಾರ್ತೆ(ಬೆಂಗಳೂರು) : ಡಿಯರ್‌ ಕಾಂಗ್ರೆಸ್‌ ದಲಿತರ ಮೇಲಿನ ನಿಮ್ಮ ಹುಸಿ ಪ್ರೀತಿ ಏನೆಂಬುದು‌, ಬಾಬಾ ಸಾಹೇಬ್‌ ಅಂಬೇಡ್ಕರ್ ರವರನ್ನು ನೀವು ಚುನಾವಣೆಯಲ್ಲಿ ಸೋಲಿಸಿದ್ದಾಗಲೆ ಜಗಜ್ಜಾಹೀರಾಗಿದೆ ಎಂದು ಕಾಂಗ್ರೆಸ್‌ ವಿರುದ್ಧ ವಿರೋಧ ಪಕ್ಷ ಬಿಜೆಪಿ ಹರಿಹಾಯ್ದಿದೆ.

ತನ್ನಅಧಿಕೃತ ʼಎಕ್ಸ್‌ʼ ಖಾತೆಯ ಮೂಲಕ, ʼಗೂಳಿಹಟ್ಟಿ ಶೇಖರ್, ಬಿಜೆಪಿಯ ಮಾಜಿ ಸಚಿವ, ಮಾಜಿ ಶಾಸಕ. ಜನಪ್ರತಿನಿಧಿಯಾಗಿದ್ದ ಬಿಜೆಪಿ ಪಕ್ಷದವರೇ ನಾಗಪುರದ RSS ಕಚೇರಿಯಲ್ಲಿ ಅಸ್ಪೃಶ್ಯತೆ ಎದುರಿಸಿದೆ ಎಂದು ಹೇಳಿದ್ದಾರೆ.ʼ ಎಂಬ ಕಾಂಗ್ರೆಸ್‌ ಟ್ವೀಟನ್ನು ಉಲ್ಲೇಖಿಸಿ ತಿರುಗೇಟು ನೀಡಿದೆ.

ಅಷ್ಟಲ್ಲದೇ, ಆರ್.‌ ಎಸ್.‌ ಎಸ್.‌ ಕಚೇರಿಗಳಲ್ಲಿ ಎಲ್ಲರಿಗೂ ಮುಕ್ತವಾದ ಅವಕಾಶವಿದೆ.  ಕಚೇರಿ ಅಥವಾ ಸ್ಮಾರಕಗಳನ್ನು ನೋಡಲು ಬಂದವರ ಹೆಸರನ್ನು ನೋಂದಾಯಿಸಿ ಪ್ರವೇಶ ನೀಡುವ ವ್ಯವಸ್ಥೆ ಎಂಬುದೇ ಇಲ್ಲ.

ಮಾಡಬೇಕಾಗಿರುವ ಕೆಲಸವನ್ನು ಮರೆತು ಸದಾ ಅಪಪ್ರಚಾರ, ಷಡ್ಯಂತ್ರಗಳಲ್ಲಿ ನಿರತವಾದ ಕಾರಣ ಮೂರು ರಾಜ್ಯಗಳಲ್ಲಿ ಹೀನಾಯವಾಗಿ ಸೋತಿದ್ದು ಮಾತ್ರವಲ್ಲದೇ,  ಭಾರತದಲ್ಲಿ ನಿಮ್ಮ ಅಸ್ತಿತ್ವ ಹೇಳಹೆಸರಿಲ್ಲದಂತಾಗುತ್ತಿದೆ, ನಿಮ್ಮ ಅಸ್ತಿತ್ವ ಪಾತಾಳಕ್ಕೆ ಮತ್ತಷ್ಟು ಕುಸಿಯುವ ಮುನ್ನ ಎಚ್ಚೆತ್ತುಕೊಳ್ಳಿ ಎಂಬ ಪಾಠ ಹೇಳಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!