Sunday, September 8, 2024

ಫೇಮಸ್‌ ರೇಡಿಯೋ ಜಾಕಿ ಆಗಿದ್ದ ಬೆರಿಲ್ ವನ್ನೆಹಸಂಗಿ, ಇಂದು ಮಿಜೋರಾಂನ ಅತ್ಯಂತ ಕಿರಿಯ ಶಾಸಕಿ !

ಜನಪ್ರತಿನಿಧಿ ವಾರ್ತೆ (ಮಿಜೋರಾಂ) : ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ  ಮಿಜೋರಾಂನ ಅತ್ಯಂತ ಕಿರಿಯ ಎಂಎಲ್ಎ ಎಂಬ ಹೆಗ್ಗಳಿಕೆಗೆ ಬೆರಿಲ್ ವನ್ನೈಹಸಂಗಿ ಪಾತ್ರರಾಗಿದ್ದಾರೆ. ಅವರು ಗಮನಾರ್ಹ ಇನ್ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿರುವ ರೇಡಿಯೋ ಜಾಕಿ ಎನ್ನುವುದು ಪ್ರಮುಖಾಂಶ.

ಜೋರಾಮ್ ಪೀಪಲ್ಸ್ ಮೂವ್‌ಮೆಂಟ್ (ZPM) ಪಕ್ಷಕ್ಕೆ ಸೇರಿದ 32 ವರ್ಷದ ಅವರು, ಐಜ್ವಾಲ್ ಸೌತ್-III ಕ್ಷೇತ್ರದಿಂದ 1,414 ಮತಗಳ ಅಂತರದಿಂದ ಗೆದ್ದಿದ್ದಾರೆ.

ಮಿಜೋರಾಂನ ಹೊಸ ಪಕ್ಷವಾದ ZPM, 40 ಕ್ಷೇತ್ರಗಳಲ್ಲಿ 27 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಚುನಾವಣೆಯಲ್ಲಿ ಗೆದ್ದು, ಮಿಜೋ ನ್ಯಾಷನಲ್ ಫ್ರಂಟ್ (MNF) ಪಕ್ಷವನ್ನು ಸೋಲಿಸಿ ಮಿಜೋರಾಂ ಅಧಿಕಾರವನ್ನು ಹಿಡಿದಿದೆ.

  

ಮಿಜೋರಾಂ ವಿಧಾನಸಭೆಗೆ ಚುನಾಯಿತರಾದ ಮೂವರು ಮಹಿಳೆಯರಲ್ಲಿ ಒಬ್ಬರಾದ ಬೆರಿಲ್ ವನ್ನೆಹ್‌ಸಂಗಿ ಅವರು 252k ಗಿಂತಲೂ ಹೆಚ್ಚು ಫಾಲೋವರ್ಸ್‌ ಗಳನ್ನು ಹೊಂದಿ ಸಾಮಾಜಿಕ ಜಾಲತಾಣ Instagram ನಲ್ಲಿ ಜನಪ್ರಿಯರಾಗಿದ್ದಾರೆ. ಮಿಜೋ ನ್ಯಾಷನಲ್ ಫ್ರಂಟ್‌ನ (MNF) ಅಭ್ಯರ್ಥಿ ಎಫ್ ಲಾಲ್ನುನ್ಮಾವಿಯಾ ಅವರನ್ನು ಸೋಲಿಸುವ ಮೂಲಕ ಒಟ್ಟು 9,370 ಮತಗಳೊಂದಿಗೆ ವಿಜಯ ಸಾಧಿಸಿದ್ದಾರೆ.

ವನ್ನೆಹಸಂಗಿ ಶಿಲ್ಲಾಂಗ್‌ನ ನಾರ್ತ್ ಈಸ್ಟರ್ನ್ ಹಿಲ್ ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಈ ಹಿಂದೆ ಐಜ್ವಾಲ್ ಮುನ್ಸಿಪಲ್ ಕಾರ್ಪೊರೇಟರ್ ಆಗಿದ್ದರು ಎನ್ನುವುದು ಇಲ್ಲಿಉಲ್ಲೇಖಾರ್ಹ.

ಮಿಜೋರಾಂ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ 174 ಅಭ್ಯರ್ಥಿಗಳ ಪೈಕಿ 16 ಮಂದಿ ಮಹಿಳೆಯರಾಗಿದ್ದರು. ಅವರಲ್ಲಿ ಇಬ್ಬರು ತಲಾ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!