spot_img
Monday, April 27, 2026
spot_img

Dear ಬಿಜೆಪಿ.. ಇಬ್ಬರನ್ನೂ ಹಂಗಾಮಿ ಎಂದು ಘೋಷಿಸಿಬಿಡಿ… : ಕಾಂಗ್ರೆಸ್‌ ಹೇಳಿದ್ದೇನು ?

ಜನಪ್ರತಿನಿಧಿ ವಾರ್ತೆ (ಬೆಂಗಳೂರು) :  ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ವಿಪಕ್ಷ ನಾಯಕ ಬದಲಾವಣೆಯಾಗುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕೊಟ್ಟಿರುವ ಹೇಳಿಕೆಯ ವರದಿಯ ತುಣುಕೊಂದನ್ನು ಉಲ್ಲೇಖಿಸಿ ಆಡಳಿತಾರೂಢ ಕಾಂಗ್ರೆಸ್‌ ಬಿಜೆಪಿ ಬಗ್ಗೆ ಅಪಹಾಸ್ಯ ಮಾಡಿದೆ.

ತನ್ನ ಅಧಿಕೃತ ʼಎಕ್ಸ್‌ʼ ಖಾತೆಯ ಮೂಲಕ ಬಿಜೆಪಿಯನ್ನು ತಿವಿದ ಕಾಂಗ್ರೆಸ್‌, ವಿಜಯೇಂದ್ರ ಹಾಗೂ ಅಶೋಕ್ ಅವರಿಗೆ ಒದಗಿರುವುದು “ತಾತ್ಕಾಲಿಕ ಸಂತೋಷ” ಮಾತ್ರ. ಲೋಕಸಭೆ ಚುನಾವಣೆಯ ಬಳಿಕ ಸಂತೋಷ ಕೂಟದ ಆಟ ಮತ್ತೊಮ್ಮೆ ಶುರುವಾಗಲಿದೆ, ಅದಕ್ಕೆ ಬೇಕಾದ ತಯಾರಿಗಳನ್ನು ಈಗಿನಿಂದಲೇ ಮಾಡಿಕೊಳ್ಳುತ್ತಿದೆ! ಎಂದಿದೆ.

ಅಷ್ಟಲ್ಲದೇ, Dear ಬಿಜೆಪಿ, ಇಬ್ಬರನ್ನೂ ಹಂಗಾಮಿ ಅಧ್ಯಕ್ಷ ಹಾಗೂ ಹಂಗಾಮಿ ವಿಪಕ್ಷ ನಾಯಕ ಎಂದು ಘೋಷಿಸಿಬಿಡಿ!  ಅಥವಾ ಕೊಳಕು ಬಾಯಿಯ ಯತ್ನಾಳರಿಗೆ ಬಿಜೆಪಿಯ ಹೊಸ ಜೋಕರ್ ಪಟ್ಟ ಕಟ್ಟಿಬಿಡಿ! ಎಂದು ವ್ಯಂಗ್ಯವಾಡಿದೆ.

ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಹಾಗೂ ವಿರೋಧ ಪಕ್ಷ ನಾಯಕ ಸ್ಥಾನದ ಹೈಕಮಾಂಡ್‌ ಆಯ್ಕೆಯ ಬಗ್ಗೆ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ತಾರಕಕ್ಕೇರಿದ್ದರೂ, ಒಂದಿಷ್ಟು ಸಣ್ಣಗಾಗಿತ್ತು, ಆದರೇ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ತಮ್ಮ ಅಸಮಾಧಾನವನ್ನು ಪದೇ ಪದೇ ಪುನರುಚ್ಛರಿಸಿಸುತ್ತಿದ್ದು, ಮಾಧ್ಯಮ ವರದಿಗಾರರಿಗೆ ಅವರು, ಉತ್ತರ ಕರ್ನಾಟಕದವರು ದಕ್ಷಿಣ ಕರ್ನಾಟಕ ಭಾಗದ ನಾಯಕರ ಗುಲಾಮರಲ್ಲ. ಉತ್ತರ ಕರ್ನಾಟಕದವರಿಗೆ ನಾಯಕತ್ವ ನೀಡುವವರೆಗೂ ಪಕ್ಷದ ಶಾಸಕಾಂಗ ಸಭೆಗೂ ನಾನು ಹೋಗುವುದಿಲ್ಲ ಎಂದು ಹೇಳಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!