spot_img
Monday, April 27, 2026
spot_img

ಉಡುಪಿ ಜಿಲ್ಲಾ ನಮ್ಮ ನಾಡ ಒಕ್ಕೂಟ : ಅಧ್ಯಕ್ಷರಾಗಿ ಮುಸ್ತಾಕ್ ಅಹಮ್ಮದ್ ಬೆಳ್ವೆ ಮರು ಆಯ್ಕೆ

ಕುಂದಾಪುರ: ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆಯು ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ ಅಧ್ಯಕ್ಷತೆಯಲ್ಲಿ ಉಡುಪಿ ಮಣಿಪಾಲ್ ಇನ್ ಹೋಟೆಲ್‌ನಲ್ಲಿ ಇತ್ತೀಚೆಗೆ ನಡೆಯಿತು.
ಹಿಂದಿನ ಅಧ್ಯಕ್ಷರಾಗಿದ್ದ ಮುಸ್ತಾಕ್ ಅಹ್ಮದ್ ಬೆಳ್ವೆ ಅವರು ಮುಂದಿನ ಎರಡು ವರ್ಷಗಳ ಅವಧಿಗೆ ಮರು ಆಯ್ಕೆ ಗೊಂಡಿದ್ದಾರೆ.

ಗೌರವ ಅಧ್ಯಕ್ಷರಾಗಿ ಬಿ ಎಸ್ ಎಫ್ ರಫೀಕ್ ಗಂಗೊಳ್ಳಿ, ಜಿಲ್ಲಾ ಸಂಯೋಜಕರಾಗಿ ಶೈಖ್ ವಾಹಿದ್, ಜಿಲ್ಲಾ ಹಿರಿಯ ಉಪಾಧ್ಯಕ್ಷರಾಗಿ ಎಸ್ ದಸ್ತಗೀರ್ ಕಂಡ್ಲೂರ್, ಪ್ರಧಾನ ಕಾರ್ಯದರ್ಶಿಯಾಗಿ ಝಹಿರ್ ಅಹ್ಮದ್ ನಾಕುದ ಗಂಗೊಳ್ಳಿ, ಖಜಾಂಚಿ ನಕ್ವಾ ಯಾಹ್ಯಾ ಉಡುಪಿ, ಉಪಾಧ್ಯಕ್ಷರಾಗಿ ರಶೀದ್ ಯು ಏ., ಉಸ್ತಾದ್ ಸಾದಿಕ್ ಹೂಡೆ, ಶಾಕಿರ್ ಹಾವಂಜೆ, ಅಬು ಮೊಹಮ್ಮದ್ ಕುಂದಾಪುರ, ಸಯ್ಯದ್ ಅಜ್ಮಲ್ ಶಿರೂರ್, ನಜಿರ್ ಶಾ ಅಜೆಕಾರ್, ಸಂಘಟನಾ ಕಾರ್ಯದರ್ಶಿ ಫಾಝಿಲ್ ಆದಿ ಉಡುಪಿ, ಕ್ರೀಡಾ ಕಾರ್ಯದರ್ಶಿ ಆಶ್ರಫ್ ಪಡುಬಿದ್ರಿ, ಯುವ ಘಟಕದ ಜಿಲ್ಲಾ ಅಧ್ಯಕ್ಷರಾಗಿ ಅರ್ಫಾತ್ ಬೆಳ್ವೆ, ಯುವ ಘಟಕದ ಸಂಯೋಜಕರಾಗಿ ಅಬ್ದುಲ್ ಖಾದರ್ ಮೂಡುಗೋಪಾಡಿ ಆಯ್ಕೆಗೊಂಡರು.

ಜಿಲ್ಲಾ ಸಮಿತಿ ಸದಸ್ಯರಾಗಿ ಪಿರ್ ಮೊಹಮ್ಮದ್ ಉಡುಪಿ, ಇಮ್ರಾನ್ ಹೆನ್ನಾಬೈಲ್, ಶಾಬಾನ್ ಹಂಗಳೂರು, ನಿಹಾರ್ ಅಹ್ಮದ್, ಫಝಲ್ ಅಹ್ಮದ್ ಕಂಡ್ಲೂರ್, ಅಬೂಬಕ್ಕರ್ ಮಾವಿನಕಟ್ಟೆ, ಮೊಹಮ್ಮದ್ ಪಿ ಗುಲ್ವಾಡಿ, ಉಸ್ಮಾನ್ ಪಳ್ಳಿ, ಜಮಾಲ್ ಗುಲ್ವಾಡಿ, ಅನ್ವರ್ ಕಂಡ್ಲೂರ್, ಮುಜಾಹಿದ್ ಗಂಗೊಳ್ಳಿ, ಇರ್ಫಾನ್ ಕಾಪು, ಹಮೀದ್ ಯೂಸುಫ್, ರಜ್ಜಾಕ್ ಹುಸೇನ್, ಮುಸ್ತಾಕ್ ಹೆನ್ನಾಬೈಲ್.ಅನ್ಸಾರ್ ಹೊಸಂಗಡಿ. ಮುನವರ್ ಅಜೆಕಾರ್.ಆಸೀಫ್ ಅಲ್ಬಾಡಿ. ರಯಾನ್ ಬೆಳ್ವೆ. ಉಡುಪಿಯ ಉಸ್ತುವಾರಿಯಾಗಿ ನಝಿರ್ ನೆಜಾರ್, ಸಮೀರ್ ಮಣಿಪಾಲ್ ಕಾರ್ಕಳದ ಉಸ್ತುವಾರಿಯಾಗಿ ಶಿಷಾ ಹುಸೇನ್. ಮುಸ್ತಫಾ ಕಾರ್ಕಳ. ಸಮದ್ ಖಾನ್. ಹೆಬ್ರಿ ಉಸ್ತುವಾರಿಯಾಗಿ ಮೊಹಮ್ಮದ್ ರಫೀಕ್ ಅಜೆಕಾರ್ ಅಬ್ದುಲ್ ಶುಕೂರ್ ಬೆಳ್ವೆ. ಬೈಂದೂರು ಉಸ್ತುವಾರಿ ಯಾಗಿ ಸಮಿ ಹಳಗೇರಿ ಇವರುಗಳು ಆಯ್ಕೆಯಾಗಿದ್ದಾರೆ.ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ ಉಪಸ್ಥಿತರಿದ್ದರು.

ಮುಸ್ತಾಕ್ ಅಹ್ಮದ್ ಬೆಳ್ವೆ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು. ಮೌ ಫಝಲ್ ಅಹ್ಮದ್ ಕಂಡ್ಲೂರ್ ಕುರಾನ್ ಪಠಣ ಮಾಡಿದರು. ಪ್ರಧಾನ ಕಾರ್ಯದರ್ಶಿ ಮೌಝಮಿರ್ ಅಹ್ಮದ್ ರಷಾದಿ ವರದಿ ವಾಚಿಸಿದರು. ಸಯ್ಯದ್ ಅಜ್ಮಲ್ ಲೆಕ್ಕ ಪತ್ರ ಮಂಡಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!