Sunday, September 8, 2024

6ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಶ್ರೀಶ ಗುಡ್ರಿ ಇವರಿಗೆ ಚಿನ್ನ ಮತ್ತು ಬೆಳ್ಳಿಯ ಪದಕ

ಕುಂದಾಪುರ: ಕೊಬುಡೋ ಬುಡೋಕನ್ ಕರಾಟೆ-ಡೋ ಅಸೋಸಿಯೇಷನ್, ಕರ್ನಾಟಕ (ಆರ್.) (ಕರಾಟೆ ಬುಡೋಕನ್ ಇಂಟರ್‌ನ್ಯಾಶನಲ್‌ನ ಶಾಖೆ ಕೇಂದ್ರ, ಆಸ್ಟ್ರೇಲಿಯಾ) ಇವರ ಆಯೋಜನೆಯಲ್ಲಿ ಡಿಸೆಂಬರ್ 2 ಮತ್ತು 3ರಂದು ಹಿರಿಯಡ್ಕದ ಶ್ರೀ ವೀರಭದ್ರ ಸಭಾಂಗಣದಲ್ಲಿ ನಡೆದ ಆರನೇ ರಾಷ್ಟ್ರ ಮಟ್ಟದ ಆಹ್ವಾನಿತ ತಂಡಗಳ ಕರಾಟೆ ಸ್ಪರ್ಧಾಕೂಟ-2023 (6TH NATIONAL LEVEL OPEN INVITATIONAL KARATE CHAMPIONSHIP-2023) ಇದರಲ್ಲಿ ನಮ್ಮೂರ ಪ್ರತಿಭೆಯಾದ ಮಾಸ್ಟರ್ ಶ್ರೀಶ ಗುಡ್ರಿ ಇವರು ಭಾಗವಹಿಸಿ ಕುಮಿಟಿ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಚಿನ್ನದ ಪದಕವನ್ನು ಗೆದ್ದು ಹಾಗೂ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆಯುವ ಮೂಲಕ ಬೆಳ್ಳಿಯ ಪದಕ ತನ್ನದಾಗಿಸಿಕೊಂಡಿದ್ದಾರೆ. ಇವರು ಈ ಮೊದಲು ದೆಹಲಿಯಲ್ಲಿ ನಡೆದಂತಹ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಕುಂದಾಪುರದ ಸಂತೋಷ್ ಮೊಗವೀರ ಮೇಲ್ ಹರ್ಜಿ ಮತ್ತು ಹೇಮಾವತಿ ಗುಡ್ರಿ ದಂಪತಿಯ ಪುತ್ರನಾದ ಶ್ರೀಶ ಗುಡ್ರಿ Phoenix Academy India ಇದರ ಮುಖ್ಯಸ್ಥ ಶಿಹಾನ್ ಕೀರ್ತಿ ಜಿಕೆ ಇವರ ಶಿಷ್ಯ ಕೋಚ್ ಅಕ್ಷಯ್ ಹೆಮ್ಮಾಡಿ ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!