Sunday, September 8, 2024

ಹರಕೆ ಸೇವೆಯಾಟಗಳ ಪರಿಪೂರ್ಣತೆಯಿಂದ ದೇವರ ಅನುಗ್ರಹ ಪ್ರಾಪ್ತಿ-ಡಾ.ಅಶೋಕ ಶೆಟ್ಟಿ

kundapura: ಯಕ್ಷಗಾನ ಮೇಳಗಳಿಗೆ ಭಕ್ತಾಧಿಗಳು ನೀಡುವ ಪೌರಾಣಿಕ ಪ್ರಸಂಗಗಳ ಹರಕೆ ಸೇವೆಯಾಟವು ಧಾರ್ಮಿಕ ನೆಲೆಯಲ್ಲಿ ಅತ್ಯಂತ ಮಹತ್ವವನ್ನು ಹೊಂದಿರುವುದರಿಂದ ಯಕ್ಷಗಾನ ಆರಂಭಗೊಂಡ ಬಳಿಕ ಬೆಳಗ್ಗಿನ ಬ್ರಾಹ್ಮೀ ಮುರ್ಹೂತದಲ್ಲಿ ಮುಕ್ತಾಯಗೊಳ್ಳುವ ಮೂಲಕ ಪರಿಪೂರ್ಣಗೊಳ್ಳಬೇಕು, ಈ ನಿಟ್ಟಿನಲ್ಲಿ ಭಕ್ತಾಧಿಗಳು ಹರಕೆ ಸೇವೆಯಾಟಗಳಿಗೆ ಹೆಚ್ಚಿನ ಮಹತ್ವವನ್ನು ನೀಡಿ ದೇವರ ಅನುಗ್ರಹ ಪಡೆಯಬೇಕು ಎಂದು ಆಜ್ರಿ ಚೋನಮನೆ ಶ್ರೀಶನೀಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಡಾ.ಅಶೋಕ ಶೆಟ್ಟಿ ಹೇಳಿದರು.

ಅವರು ಆಜ್ರಿ ಚೋನಮನೆ ಶ್ರೀಶನೀಶ್ವರ ದೇವಸ್ಥಾನದಲ್ಲಿ ಶ್ರೀಶನೀಶ್ವರ ಕೃಪಾಪೋಷಿತ ಯಕ್ಷಗಾನ ಮೇಳದ ತಿರುಗಾಟದ ಪ್ರಯುಕ್ತ ಹಮ್ಮಿಕೊಂಡ ಸಭಾ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಹೇಳಿದರು.

ಯಕ್ಷಗಾನ ಪ್ರಸಂಗಕರ್ತ ಪಿ.ವಿ.ಆನಂದ ಸಾಲಿಗ್ರಾಮ ಮಾತನಾಡಿ, ಪೌರಾಣಿಕ ಯಕ್ಷಗಾನ ಪ್ರಸಂಗಗಳು ಉತ್ತಮ ಧಾರ್ಮಿಕ ಹಿನ್ನಲೆಯನ್ನು ಹೊಂದಿವೆ, ಕಲಾವಿದರು ಕಲೆಯನ್ನು ಗೌರವಿಸುವ ಮೂಲಕ ಗುರುತಿಸಿಕೊಳ್ಳಬೇಕು. ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಕಲಾಭಿಮಾನಿಗಳ ಪ್ರೋತ್ಸಾಹ ಅಗತ್ಯವಿದೆ ಎಂದರು.

ದೇವದಾಸ್ ಶೆಟ್ಟಿ ಮಕ್ಕಿಮನೆ, ಜಯಂತ ಶೆಟ್ಟಿ ಕುಂಟೋಡಿ, ಮಂಜುನಾಥ ಶೆಟ್ಟಿ ಜಡ್ಡಿನಮುಲ್ಲಿ, ಆನಂದ ಶೆಟ್ಟಿ ಆಲೂರು, ಯಕ್ಷಗಾನ ಪ್ರಸಂಗಕರ್ತ ಪಿ.ವಿ.ಆನಂದ ಸಾಲಿಗ್ರಾಮ, ಆಜ್ರಿ ಚೋನಮನೆ ಶ್ರೀಶನೀಶ್ವರ ದೇವಸ್ಥಾನದ ಪಾತ್ರಿ ಮಂಜುನಾಥ ಪೂಜಾರಿ, ಮೇಳದ ಮೆನೇಜರ್ ಸುಬ್ರಮಣ್ಯ ಗಾಣಿಗ ತೆಗ್ಗರ್ಸೆ ಹಾಗೂ ಇನ್ನೀತರರು ಉಪಸ್ಥಿತರಿದ್ದರು.
ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಗೋಪಾಲ ಗಾಣಿಗ ಆಜ್ರಿ, ಉಪ್ಪುಂದ ನಾಗೇಂದ್ರ ರಾವ್ ಇವರುಗಳನ್ನು ಸನ್ಮಾನಿಸಲಾಯಿತು.

ಸಂತೋಷ ಶೆಟ್ಟಿ ಸ್ವಾಗತಿಸಿದರು. ಅಮೃತ್ ಶೆಣೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!