spot_img
Monday, April 27, 2026
spot_img

ಸಾಸ್ತಾನ: ಶ್ರೀ ಕ್ಷೇತ್ರ ಗೋಳಿಗರಡಿ ಮೇಳ ದೇವರ ಸೇವೆ: ಗೋಳಿಗರಡಿ ಚಂದು ಪೂಜಾರಿ ಪ್ರಶಸ್ತಿ ಪ್ರದಾನ

ಸಾಸ್ತಾನ: ಶ್ರೀ ಕ್ಷೇತ್ರ ಗೋಳಿಗರಡಿ ಶ್ರೀ ಪಂಜುರ್ಲಿ ಕೃಪಾಪೋಷಿತ ಯಕ್ಷಗಾನ ಕಲಾಮಂಡಳಿ ಸಾಸ್ತಾನ ಇದರ ಈ ಸಾಲಿನ ತಿರುಗಾಟಕ್ಕೆ ಚಾಲನೆ ಹಾಗು ಗೋಳಿಗರಡಿ ಚಂದು ಪೂಜಾರಿ ಪ್ರಶಸ್ತಿ ಪ್ರದಾನ ಸಮಾರಂಭ ನ.22 ರಂದು ಶ್ರೀ ಕ್ಷೇತ್ರದಲ್ಲಿ ಜರಗಿತು.

ಈ ಪ್ರಯುಕ್ತ ಕ್ಷೇತ್ರದ ವತಿಯಿಂದ ನೀಡುವ ಗೋಳಿಗರಡಿ ಚಂದು ಪೂಜಾರಿ ಪ್ರಶಸ್ತಿಯನ್ನು ಹಿರಿಯ ಭಾಗವತ ನಾರಾಯಣ ಶಬರಾಯ ಅವರಿಗೆ ನೀಡಿ ಗೌರವಿಸಲಾಯಿತು.

ಸಾಸ್ತಾನದ ಜ್ಯೋತಿಷಿ ಹಾಗು ಪುರೋಹಿತ್ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಯಕ್ಷಗಾನ ವಿಮರ್ಶಕ ಎಸ್.ವಿ.ಉದಯಕುಮಾರ್ ಶೆಟ್ಟಿ ಉಪಸ್ಥತರಿದ್ದು ಶುಭಹಾರೈಸಿದರು.

ಗೋಳಿಗರಡಿಯ ಮೊಕ್ತೇಸರರಾದ ಬಿ.ಸುಧಾಕರ ಶೆಟ್ಟಿ, ಡಾ| ಕೃಷ್ಣಪ್ರಸಾದ್ ಶೆಟ್ಟಿ, ಪಾಂಡೇಶ್ವರ ರಕ್ತೇಶ್ವರಿ ದೇವಸ್ಥಾನದ ರಮೇಶ್ ರಾವ್, ಗರಡಿಯ ಪಾತ್ರಿಗಳಾದ ಶಂಕರ ಪೂಜಾರಿ, ಮೇಳದ ಅಧ್ಯಕ್ಷರಾದ ಜಿ.ವಿಠಲ ಪೂಜಾರಿ ಉಪಸ್ಥಿತರಿದ್ದರು.

ಮೇಳದ ಗೌರವಾಧ್ಯಕ್ಷ ಸಿ.ಎ. ಎ.ದೇವಾನಂದ್ ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ್ ಪೂಜಾರಿ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿ. ಕೇಶವ ಆಚಾರ್ ಸಮ್ಮಾನ ಪತ್ರ ವಾಚಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!