spot_img
Monday, April 27, 2026
spot_img

ಗುಜ್ಜಾಡಿಯ ಶ್ರೀ ಬ್ರಹ್ಮ ಬಂಟರ ಕೋಟಿ ಚೆನ್ನಯ್ಯ ಗರಡಿ ವತಿಯಿಂದ ಸುನೀತಾ ಪೂಜಾರಿ ಅವರಿಗೆ ಸನ್ಮಾನ

ಗಂಗೊಳ್ಳಿ : ದೇಶ ಸೇವೆಯ ಕನಸಿನೊಂದಿಗೆ ಪಂಜಾಬ್‌ನ ಬಿ‌ಎಸ್‌ಎಫ್ ಕ್ಯಾಂಪ್‌ನಲ್ಲಿ 11 ತಿಂಗಳ ತರಬೇತಿ ಮುಗಿಸಿ ಪಶ್ಚಿಮ ಬಂಗಾಲದ ನದಿಯಾ ಜಿಲ್ಲೆಯಲ್ಲಿನ ಭಾರತ-ಬಾಂಗ್ಲಾ ಗಡಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡ ಸುನೀತಾ ಪೂಜಾರಿ ಅವರನ್ನು ಗುಜ್ಜಾಡಿಯ ಶ್ರೀ ಬ್ರಹ್ಮ ಬಂಟರ ಕೋಟಿ ಚೆನ್ನಯ್ಯ ಗರಡಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಗುಜ್ಜಾಡಿ ಗ್ರಾಮದ ಶ್ರೀ ಬ್ರಹ್ಮ ಬಂಟರ ಕೋಟಿ ಚೆನ್ನಯ್ಯ ಗರಡಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಗರಡಿಯ ಮೊಕ್ತೇಸರ ಸುಕ್ರ ಪೂಜಾರಿ ಹಾಗೂ ಗೌರವ ಅಧ್ಯಕ್ಷ ಶಿವರಾಮ ಪೂಜಾರಿ ಅವರು ಗರಡಿ ವತಿಯಿಂದ ಸುನೀತಾ ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ಗರಡಿಯ ಬಲ್ಲಾಳ ಪ್ರದೀಪ ಶೆಟ್ಟಿ, ಪ್ರಧಾನ ಅರ್ಚಕ ಸುಬ್ಬ ಪೂಜಾರಿ, ಪಾತ್ರಿ ರಾಘವೇಂದ್ರ ಪೂಜಾರಿ, ಗರಡಿಯ ಸದಸ್ಯರು, ಬ್ರಹ್ಮ ಬಂಟರ ಯುವಕ ಮತ್ತು ಮಹಿಳಾ ಮಂಡಳಿ ಸದಸ್ಯರು, ಗ್ರಾಮಸ್ಥರು, ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!