spot_img
Monday, April 27, 2026
spot_img

ವಿಶ್ವಕಪ್‌ ವಿಜೇತ ತಂಡ ಆಸ್ಟ್ರೇಲಿಯಾದ ಹಿಂದೆ ಕರಾವಳಿಯ ನಾರಿ ಶಕ್ತಿ !

ಜನಪ್ರತಿನಿಧಿ ವಾರ್ತೆ :  ವಿಶ್ವಕಪ್‌ ಗೆದ್ದ ಆಸಿಸ್‌ ತಂಡದ ಹಿಂದೆ ಮಂಗಳೂರಿನ ನಾರಿಶಕ್ತಿ ಇದೆ ಎಂಬ ವಿಚಾರ ಈಗ ಮುನ್ನೆಲೆಗೆ ಬಂದಿದೆ. ಆಸ್ಟ್ರೇಲಿಯಾ ಗೆಲುವಿಗೂ ಭಾರತದ ಸಹಕಾರವಿದೆ. ಕರ್ನಾಟಕದ ಮಂಗಳೂರು ಮೂಲದ ಯುವತಿ ಆಸ್ಟ್ರೇಲಿಯಾ ಕಪ್ ಗೆಲ್ಲಲು ಹಿಂದಿನ ಶಕ್ತಿಯಾಗಿ ನಿಂತಿದ್ದಾರೆ.

ಊರ್ಮಿಳಾ ರೊಸಾರಿಯೋ ಎಂಬ ಮಂಗಳೂರಿನ ಕಿನ್ನಿಗೋಳಿ ಮೂಲದ ನಾರಿ ಆಸಿಸ್‌ ಕ್ರಿಕೇಟ್‌ ತಂಡದ ಹಿಂದಿನ ಶಕ್ತಿ ಎಂಬುವುದು ಭಾರತಕ್ಕೂ, ಕರ್ನಾಟಕ ರಾಜ್ಯಕ್ಕೂ ಹೆಮ್ಮೆಯ ವಿಚಾರ. ಹೌದು, ಆಸ್ಟ್ರೇಲಿಯಾ ತಂಡದ ವ್ಯವಸ್ಥಾಪಕಿಯಾಗಿ ಊರ್ಮಿಳಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೌದು. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿ ಮಂಗಳೂರು ಮೂಲದ ಯುವತಿ ಕಾರ್ಯನಿರ್ವಹಿಸಿದ್ದು, ಆರನೇ ಬಾರಿಗೆ ಟ್ರೋಫಿ ಗೆಲ್ಲಲು ಕಾಂಗರೂ ಪಡೆಯನ್ನು ಹುರಿದುಂಬಿಸಿದ್ದಾರೆ. ಕಿನ್ನಿಗೋಳಿಯ ಐವಿ ಹಾಗೂ ವಾಲೆಂಟೈನ್‌ ರೊಸಾರಿಯೋ ದಂಪತಿಗಳ ಮಗಳಾದ ಊರ್ಮಿಳಾ ರೊಸಾರಿಯೋ ಆಸ್ಟ್ರೇಲಿಯಾ ಕ್ರಿಕೇಟ್‌ ತಂಡದ ಕೇರ್‌ ಟೇಕರ್‌ ಆಗಿ ವಿಶ್ವಕಪ್‌ ಟೂರ್ನಮೆಂಟ್‌ ನಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಊರ್ಮಿಳಾ ಅವರ ಹೆತ್ತವರು ಮಂಗಳೂರಿನ ಕಿನ್ನಿಗೋಳಿಯವರಾದರೂ ಕೂಡ, ಉದ್ಯೋಗ ನಿಮಿತ್ತ ಕತಾರ್‌ ನ ದೋಹಾದಲ್ಲಿ ವಾಸ್ತವ್ಯ ಹೂಡಿದ್ದರು. ಊರ್ಮಿಳಾ  ಕತಾರ್‌ ನಲ್ಲಿಯೇ ಜನಿಸಿದವರಾಗಿದ್ದು, ಕಾರ್ನೇಗಿ ಮೆಲಾನ್‌ ವಿಶ್ವವಿದ್ಯಾಲಯದಲ್ಲಿ ಬಿಬಿಎ ಪದವಿ ಪಡೆದಿದ್ದಾರೆ. ಎಳವೆಯಿದಲೇ ಕ್ರೀಕೇಟ್‌ ಸೇರಿ ಇತರೆ ಕ್ರೀಡೆಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದವರಾಗಿದ್ದಾರೆ. ಈ ಹಿಂದೆ ಊರ್ಮಿಳಾ ಕತಾರ್‌ ನ ಟೆನ್ನಿಸ್‌ ಫೆಡರೇಶನ್‌ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಆಸ್ಟ್ರೇಲಿಯಾ ಅಡಿಟೇಲ್‌ ಕ್ರಿಕೇಟ್‌ ತಂಡದಲ್ಲಿ ಮೂರು ವರ್ಷಗಳ ಕಾಲ ವ್ಯವಸ್ಥಾಪಕಿಯಾಗಿ, ನಂತರ ಆಸ್ಟ್ರೇಲಿಯಾ ಮಹಿಳಾ ಕ್ರಿಕೇಟ್‌ ತಂಡದ ವ್ಯವಸ್ಥಾಪಕಿಯಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಊರ್ಮಿಳಾಗೆ ಇದೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಕತಾರ್‌ ನಲ್ಲಿ ನಡೆದ ವಿಶ್ವ ಫುಟ್ಬಾಲ್‌ ವೇಳೆ ನಾಲ್ಕು ತಿಂಗಳ ಕಾಲ ಸೇವೆ ಸಲ್ಲಿಸಿದ್ದರು. ಅಪಾರ ಅನುಭವದೊಂದಿಗೆ ಕಳೆದ ಸಪ್ಟೆಂಬರ್‌ ನಲ್ಲಿ ಆಸ್ಟ್ರೇಲಿಯಾಕ್ಕೆ ಮರಳಿದ ಊರ್ಮಿಳಾ, ಸದ್ಯ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಕೇರ್‌ ಟೇಕರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಶ್ವಕಪ್‌ ಟೂರ್ನಮೆಂಟ್‌ ಗಾಗಿ ಆಸ್ಟ್ರೇಲಿಯಾದ ಪುರುಷರ ಕ್ರಿಕೇಟ್‌ ತಂಡದೊಂದಿಗಿದ್ದ ಊರ್ಮಿಳಾ , ಶೀಘ್ರದಲ್ಲಿಯೇ ಅವರು ಮಹಿಳಾ ಆಸ್ಟ್ರೇಲಿಯಾ ತಂಡಕ್ಕೆ ಸೇರಿಕೊಳ್ಳಲಿದ್ದು, ಮಹಿಳಾ ಕ್ರಿಕೇಟ್‌ ಟೀಮ್‌ ನೊಂದಿಗೆ ಡಿಸೆಂಬರ್‌ ನಲ್ಲಿ ನಡೆಯಲಿರುವ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ.

ಇನ್ನು, ಊರ್ಮಿಳಾ ರೊಸಾರಿಯೋ ಅವರ ಹೆತ್ತವರು ಕಳೆದ ಏಳು ವರ್ಷಗಳಿಂದ ಸಕಲೇಶಪುರದ ನೆಲೆಸಿದ್ದು. ಅಲ್ಲಿಯೇ ಎಸ್ಟೇಟ್‌ ಖರೀದಿಸಿ ವಾಸ್ತವ್ಯ ಹೂಡಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!