spot_img
Tuesday, April 28, 2026
spot_img

ʼಸುಳ್ಳುʼ ಕುಮಾರಸ್ವಾಮಿಯವರ ಮನೆ ದೇವರು : ಎಚ್‌ಡಿಕೆ ವಿರುದ್ಧ ಸಿಎಂ ಆಕ್ರೋಶ 

ಜನಪ್ರತಿನಿಧಿ ವಾರ್ತೆ(ಮೈಸೂರು) : ಕುಮಾರಸ್ವಾಮಿ ನನ್ನ ಮೇಲಿನ ಹೊಟ್ಟೆಕಿಚ್ಚು ಹಾಗೂ ದ್ವೇಷದಿಂದ ಸುಖಾಸುಮ್ಮನೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ನನ್ನ ಮಗ(ಡಾ. ಯತೀಂದ್ರ ಸಿದ್ದರಾಮಯ್ಯ ) ವಿಚಾರದಲ್ಲಿ ಸುಳ್ಳು ಹಬ್ಬಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ವರದಿಗಾರರಿಗೆ ಇಲ್ಲಿ ಸ್ಪಂದಿಸಿದ ಅವರು, ವರುಣಾ ವಿಧಾನಸಭಾ ಕ್ಷೇತ್ರವನ್ನು ನನಗಾಗಿ ನನ್ನ ಮಗ ಬಿಟ್ಟು ಕೊಟ್ಟಿದ್ದಾನೆ. ಈಗ ನನ್ನ ಪರವಾಗಿ ಅಲ್ಲಿ ಜನರ ಕೆಲಸ ಮಾಡುತ್ತಿದ್ದಾನೆ. ಇದರಲ್ಲಿ ಏನು ತಪ್ಪಿದೆ ? ಕೆಡಿಪಿ ಸದಸ್ಯನಾಗಿರುವ ಕಾರಣ ಕೆಲವು ವಿಚಾರಗಳ ಬಗ್ಗೆ ನನ್ನ ಜೊತೆ ಚರ್ಚೆ ಮಾಡಿದ್ದಾನೆ. ಅಷ್ಟಕ್ಕೆ ಬೇರೆ ಅರ್ಥ ನೀಡಿದರೇ ಹೇಗೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ದ್ವೇಷದ ರಾಜಕಾರಣ ಮಾಡುವುದಕ್ಕೆ ನನಗೆ ಗೊತ್ತಿಲ್ಲ. ತಪ್ಪು ಮಾಡಿದವರು ಯಾರೇ ಆಗಲಿ ಅವರನ್ನು ಒಪ್ಪುವುದಿಲ್ಲ. ಕುಮಾರಸ್ವಾಮಿ ಹೇಳುವುದೆಲ್ಲಾ ಶುದ್ಧ ಸುಳ್ಳು. ಸುಳ್ಳು ಅವರ ಮನೆ ದೇವರು. ಕುಮಾರಸ್ವಾಮಿ ಈವರೆಗೆ ಒಂದು ಸತ್ಯವನ್ನಾಡಿದ್ದಿದ್ದರೇ ತೋರಿಸಿ. ಬರೀ ಹಿಟ್‌ ಅಂಡ್‌ ರನ್‌ ಮಾಡುತ್ತಾರೆ ಎಂದು ಅವರು ಕುಮಾರಸ್ವಾಮಿ ವಿರುದ್ಧ ಗುಡುಗಿದ್ದಾರೆ.

ಈ ಹಿಂದಿನ ಸರ್ಕಾರದ ಆಡಳಿತಾವಧಿಯಲ್ಲಿ ನಡೆದಿದ್ದ ಬಿಟ್‌ ಕಾಯಿನ್, ಕೋವಿಡ್‌, ಮೆಡಿಕಲ್‌ ಕಾಲೇಜು ಮಂಜೂರಾತಿ, ೪೦ ಪರ್ಸಂಟೇಜ್‌ ಕಮಿಷನ್‌ ವಿಚಾರದಲ್ಲಿ ತನಿಖೆಗೆ ನಾಲ್ಕು ಸಮಿತಿಗಳನ್ನು ರಚಿಸಿ ತನಿಖೆಗೆ ವಹಿಸಿದ್ದೇವೆ. ಆ ಸಮಿತಿಗಳು ಇನ್ನೂ ವರದಿ ನೀಡಿಲ್ಲ. ಕುಮಾರಸ್ವಾಮಿ ಸುಳ್ಳು ಆರೋಪಗಳನ್ನು ಮಾಡುತ್ತಾರೆ. ಅದನ್ನೆಲ್ಲಾ ತನಿಖೆ ನಡೆಸುವುದಕ್ಕೆ ಸಾಧ್ಯವಿದೆಯೇ ? ಅಗತ್ಯವಿದ್ದರೇ ಕುಮಾರಸ್ವಾಮಿ ವಿರುದ್ದವೂ ತನಿಖೆ ನಡೆಸುವುದಕ್ಕೆ ಹಿಂಜರಿಯುವುದಿಲ್ಲ ಎಂದು ಅವರು ಹೇಳಿದ್ದಾರೆ.  

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!