spot_img
Tuesday, April 28, 2026
spot_img

ಬೆಂಗಳೂರಿನಲ್ಲಿ ನ.18ರಂದು ಯಕ್ಷ ಸಂಕ್ರಾಂತಿ: ಪಂಚ ಪ್ರಸಂಗಗಳ ಪ್ರದರ್ಶನ


ಬೆಂಗಳೂರು:
ಯಕ್ಷ ಸಂಕ್ರಾಂತಿ ಪ್ರಸ್ತುತಿಯಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನ.18ರಂದು ರಾತ್ರಿ ಐದು ಪ್ರಸಂಗಗಳ ಅದ್ದೂರಿಯ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಹಿಮ್ಮೇಳದಲ್ಲಿ ಕೊಳಗಿ ಕೇಶವ ಹೆಗ್ಡೆ, ಗಣೇಶ್ ಹೆಬ್ರಿ, ಚಂದ್ರಕಾಂತ್ ಮೂಡುಬೆಳ್ಳೆ, ಎನ್.ಜಿ ಹೆಗಡೆ, ಶಿವಾನಂದ ಕೋಟ, ಸುಜನ್ ಹಾಲಾಡಿ, ಶಶಾಂಕ್ ಆಚಾರ್ ಭಾಗವಹಿಸಲಿದ್ದಾರೆ. ಮೊದಲ ಪ್ರಸಂಗ ಭೀಷ್ಮ ಪರ್ವ: ಭೀಷ್ಮನಾಗಿ ಕೃಷ್ಣ ಯಾಜಿ ಬಳ್ಕೂರು, ಕೌರವ-ನವೀನ್ ಶೆಟ್ಟಿ ಐರ್‌ಬೈಲ್, ಕೃಷ್ಣ ವಿಶ್ವನಾಥ ಹೆನ್ನಾಬೈಲು, ಧರ್ಮರಾಯ ಮಂಜುನಾಥ ಚೌಕುಳಮಕ್ಕಿ, ರಾತ್ರಿ 11.45ರಿಂದ 1.15ರ ತನಕ ಉದ್ಧಾಲಕ ಚಂಡಿ: ಉದ್ಧಾಲಕ-ಉಜಿರೆ ಅಶೋಕ್ ಭಟ್, ಚಂಡಿ-ಶಶಿಕಾಂತ್ ಶೆಟ್ಟಿ ಕಾರ್ಕಳ, ಬ್ರಾಹ್ಮಣ-ರಮೇಶ ಭಂಡಾರಿ ಮುರೂರು. 1.15ರಿಂದ 2.45ರ ತನಕ ಮಾಗಧ ವಧೆ: ಮಾಗಧ-ಪ್ರಸನ್ನ ಶೆಟ್ಟಿಗಾರ್, ಕೃಷ್ಣ ಸುಬ್ರಹ್ಮಣ್ಯ ಚಿಟ್ಟಾಣಿ, 2.45ರಿಂದ 4.15ರ ತನಕ ಜಾಬಲಿ ನಂದಿನಿ: ಜಾಬಲಿ-ವಿಶ್ವನಾಥ ಹೆನ್ನಾಬೈಲು, ನಂದಿನಿ ಶಶಿಕಾಂತ್ ಶೆಟ್ಟಿ ಕಾರ್ಕಳ, 4.15ರಿಂದ 6 ಗಂಟೆಯ ತನಕ ಭರ್ಬರಿಕ: ಭರ್ಬರಿಕ ಚಂದ್ರಹಾಸ ಹೊಸಪಟ್ಣ, ಕೃಷ್ಣ ಹರೀಶ ಜಪ್ತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಯಕ್ಷ ಸಂಕ್ರಾಂತಿ ತಂಡದ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!