spot_img
Tuesday, April 28, 2026
spot_img

ಮಲ್ಪೆ ಕೊಲೆ ಪ್ರಕರಣ : 15 ನಿಮಿಷಗಳಲ್ಲಿ ನಾಲ್ಕು ಕೊಲೆ | ಆಟೋ ರಿಕ್ಷಾದಲ್ಲಿ ಬಂದಿದ್ದ ಹಂತಕ !

ಜನಪ್ರತಿನಿಧಿ ವಾರ್ತೆ : ಇಂದು ಬೆಳಗ್ಗೆ(ನ.12) ಮಲ್ಪೆ ಪೊಲೀಸ್‌ ಠಾಣಾ ವ್ಯಾಪ್ತಿಯ ನೇಜಾರಿನ ತೃಪ್ತಿ ಲೇಔಟ್‌ನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಭೀಕರವಾಗಿ ಹತ್ಯೆಗೈದ ಪ್ರಕರಣದ ಆರೋಪಿ ಸಂತಕಟ್ಟೆಯಿಂದ ತೃಪ್ತಿ ಲೇಔಟ್‌ಗೆ ಆಟೋ ರೀಕ್ಷಾದಲ್ಲಿ ಬಂದಿದ್ದನೆಂದು ಈಗ ತಿಳಿದುಬಂದಿದೆ.

ಸಂತೆಕಟ್ಟೆಯಿಂದ ಶ್ಯಾಮ್‌ ಎನ್ನುವವರ ಆಟೋದಲ್ಲಿ ಆರೋಪಿ ಬಂದಿದ್ದ. ಬೆಳಗ್ಗೆ ಸುಮಾರು 8:30 ರಿಂದ 9 ಗಂಟೆಯ ನಡುವೆ ದ್ವೀಚಕ್ರವಾಹನದಲ್ಲಿ ಬಂದಿದ್ದ ವ್ಯಕ್ತಿವೋರ್ವ ಕ್ವೀನ್ಸ್‌ ರಸ್ತೆಯಲ್ಲಿ ತನ್ನ ರಿಕ್ಷಾವನ್ನು ಏರಿದ್ದಾನೆ. ನೇಜಾರಿನ ತೃಪ್ತಿ ಲೇಔಟ್‌ಗೆ ಕರೆದೊಯ್ಯುವಂತೆ ಸೂಚಿಸಿದ್ದಾನೆ. ಅವನು ಹೇಳಿದಂತೆ ತೃಪ್ತಿ ಲೇಔಟ್‌ ನ ಈಗ ಕೊಲೆ ಪ್ರಕರಣ ನಡೆದಿರುವ ಮನೆಯ ಗೇಟ್‌ ಬಳಿ ಬಿಟ್ಟಿದ್ದೇನೆ ಎಂದು ಆಟೋ ಚಾಲಕ ಶ್ಯಾಮ್‌ ಪೊಲೀಸರಲ್ಲಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

15 ನಿಮಿಷಗಳ ಅಂತರದಲ್ಲಿ ನಾಲ್ಕು ಕೊಲೆ :

ಈಗ ಹತ್ಯೆ ನಡೆದಿರುವ ಮನೆಯ ಬಳಿ ಆಟೋ ಚಾಲಕ  ಬಿಟ್ಟ 15 ನಿಮಿಷಗಳ ಅಂತರದಲ್ಲಿ ಹಂತಕ ನಾಲ್ಕು ಮಂದಿಯನ್ನು ಕೊಲೆಗೈದು ಸಂತೆಕಟ್ಟೆಯ ಆಟೋ ರಿಕ್ಷಾ ನಿಲ್ದಾಣಕ್ಕೆ ಬಂದು ಕ್ಯೂ ನಲ್ಲಿದ್ದ ಮತ್ತೊಂದು ರಿಕ್ಷಾ ಏರಿದ್ದಾನೆ. ಈ ವೇಳೆ ಆ ವ್ಯಕ್ತಿಯನ್ನು ಗುರುತಿಸಿದ್ದ ಆಟೋ ಚಾಲಕ ಶ್ಯಾಮ್‌, ಇಷ್ಟು ಬೇಗ ಬರುವುದಿದ್ದರೇ ನಾನು ಕಾಯುತ್ತಿದ್ದೆ ಎಂದು ಹೇಳಿದ್ದಾರೆ. ಅದಕ್ಕೆ ಆತ ಪರವಾಗಿಲ್ಲ ಎಂದು ಪ್ರತಿಕ್ರಿಯಿಸಿದ್ದಾನೆ. ಮಾತ್ರವಲ್ಲದೇ ವೇಗವಗಿ ಹೋಗುವಂತೆ ಆ ರಿಕ್ಷಾ ಚಾಲಕನಿಗೆ ಸೂಸಿರುವುದಾಗಿ ಈಗ ತಿಳಿದು ಬಂದಿದೆ.

ಸುಮಾರು 45 ವರ್ಷದ ಆಸುಪಾಸಿನ ಆತ ಕನ್ನಡ ಮಾತನಾಡುತ್ತಿದ್ದ, ಮುಖಕ್ಕೆ ಮಾಸ್ಕ್‌ ಧರಿಸಿದ್ದ. ಆತನ ಕಣ್ಣಿನ ಭಾಗ ಮಾತ್ರ ಕಾಣಿಸುತ್ತಿತ್ತು. ಬೋಳು ತಲೆಯ ಆ ವ್ಯಕ್ತಿ ಬಿಳಿ ಮೈಬಣ್ಣ ಹೊಂದಿದ್ದ ಎಂಬ ವಿಚಾರ ಈಗ ತಿಳಿದು ಬಂದಿದೆ.

ಇಂದು ಬೆಳಗ್ಗೆ ನೇಜಾರುವಿನ ತೃಪ್ತಿ ಲೇಔಟ್‌ನ ನಿವಬಾಸಿ ಹಸೀನಾ (42 ವ) ಅವರ ಪುತ್ರಿಯರಾದ ಅಫ್ನಾನ್‌ (22 ವ) ಅಯ್ನಾಝ್‌ (20 ವ) ಮತ್ತು ಪುತ್ರ ಅಸೀಮ್‌ (12 ವ) ನನ್ನು ಹಂತಕ ಹರಿತವಾದ ಆಯುದದಿಂದ ಇರಿದು ಕೊಲೆ ಮಾಡಿದ್ದ.ನ್ನು, ಅತ್ತೆ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!