spot_img
Tuesday, April 28, 2026
spot_img

ಇಲಾಖೆಯಲ್ಲಿ ಮಧ್ಯವರ್ತಿಗಳ ಮೊರೆ ಹೋಗಬೇಡಿ-ತಹಶೀಲ್ದಾರ್ ಶೋಭಾಲಕ್ಷ್ಮೀ

ಬೈಂದೂರು: ಕಂದಾಯ ಇಲಾಖೆ ಮಾತೃ ಇಲಾಖೆ ಜನರ ಪ್ರತಿಯೊಂದು ಆಗುಹೋಗುಗಳಿಗೆ ಇಲಾಖೆಯ ಸ್ಪಂದನೆ ಇರುತ್ತದೆ. ಮನುಷ್ಯನ ಹುಟ್ಟಿನಿಂದ ಅಂತ್ಯದ ವರೆಗೂ ಕಂದಾಯ ಇಲಾಖೆ ದಾಖಲೆ ನೀಡುತ್ತದೆ. ಈ ಮಟ್ಟದಲ್ಲಿ ಸಿಗುವ ಸೌಲಭ್ಯಗಳು ಅನೇಕ ಇವೆ. ಅದನ್ನು ಕಂದಾಯ ಇಲಾಖೆ ನೀಡುತ್ತದೆ. ತಾಯಿಯಂತೆ ಕಂದಾಯ ಇಲಾಖೆ ಕಾರ್ಯನಿರ್ವಹಿಸುತ್ತದೆ. ಕಛೇರಿಯಲ್ಲಿ ಆಗಬೇಕಾದ ಕಾರ್ಯಗಳಿಗೆ ಮದ್ಯವರ್ತಿಗಳ ಮೊರೆ ಹೋಗಬೇಡಿ. ನೇರವಾಗಿ ಕಛೇರಿಗೆ ಬಂದು ಕೆಲಸ ಮಾಡಿಕೊಂಡು ಹೋಗಬಹುದು ಎಂದು ತಹಶೀಲ್ದಾರ್ ಶ್ರೀಮತಿ ಶೋಭಾಲಕ್ಷ್ಮೀ ಹೇಳಿದರು.

ಅವರು ಬೈಂದೂರು ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವತಿಯಿಂದ ನಡೆದ ಆರೋಗ್ಯ ಮತ್ತು ಕಂದಾಯ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ಮಾಹಿತಿ ನೀಡಿದ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಕ್ಕಳ ತಜ್ಞೆ ಡಾ| ನಂದಿನಿ ಮಾತನಾಡುತ್ತಾ ಮಕ್ಕಳಲ್ಲಿ ಜನನಪೂರ್ವ ಆರೋಗ್ಯ ಬಹಳ ಮುಖ್ಯ. ಮೊದಲ ಸಾವಿರ ದಿನ ಅಂದರೆ ೪ ತಿಂಗಳಿಂದ ೨ ವರ್ಷದ ವರೆಗೆ ತಾಯಿಯ ಆರೋಗ್ಯ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಗರ್ಬಿಣಿಯಿಂದ ಬಾಣಂತಿತನದ ವರೆಗೆ ಮಹಿಳೆಯನ್ನು ಮನೆಯವರು, ಸಮಾಜ ಉತ್ತಮ ವಾತಾವರಣದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಆರೋಗ್ಯ ಪಾಲನೆಯಲ್ಲಿ ಮಹಿಳೆಯರು ಜಾಗೃತಿ ವಹಿಸಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರಾಜು ಪೂಜಾರಿ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ಜಗನ್ನಾಥ ಶೆಟ್ಟಿ, ಉಪಾಧ್ಯಕ್ಷರಾದ ಎಂ.ವಿನಾಯಕ ರಾವ್ ಮರವಂತೆ, ನಿರ್ದೇಶಕರಾದ ಸೀತರಾಮ ಮಡಿವಾಳ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಟ್ಟಣ್ಣ ರೈ ಉಪಸ್ಥಿತರಿದ್ದರು.
ಸಂತೋಷ್ ಮರಾಠಿ ಸ್ವಾಗತಿಸಿ, ಶ್ರೀನಿವಾಸ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!