spot_img
Tuesday, April 28, 2026
spot_img

ಕುಂದನಾಡು ರೈತ ಉತ್ಪಾದಕರ ಕಂಪನಿ ವಂಡ್ಸೆ ಹೋಬಳಿ, ಅಂಪಾರು: ನೂತನ ಅಧ್ಯಕ್ಷರಾಗಿ ಉದಯಕುಮಾರ್ ಶೆಟ್ಟಿ ಆಯ್ಕೆ


ಕುಂದಾಪುರ: ಕುಂದನಾಡು ರೈತ ಉತ್ಪಾದಕರ ಕಂಪನಿ (ರಿ) ವಂಡ್ಸೆ ಹೋಬಳಿ, ಅಂಪಾರು, ಕುಂದಾಪುರ ತಾಲೂಕು ಇದರ ನೂತನ ಅಧ್ಯಕ್ಷರಾಗಿ ಉದಯ ಕುಮಾರ್ ಶೆಟ್ಟಿ ವಂಡ್ಸೆ ಸರ್ವಾನುಮತದಿಂದ ಆಯ್ಕೆಯಾದರು.

ಕುಂದನಾಡು ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಸ್ಥಾನದ ಹುದ್ದೆಯ ಆಯ್ಕೆ ಪ್ರಕ್ರಿಯೆ ನ.5ರಂದು ಆಡಳಿತ ಕಛೇರಿಯಲ್ಲಿ ಅಟಲ್ ಇನ್ಕ್ಯೂಬಷನ್ ಸೆಂಟರ್ ನಿಟ್ಟೆಯ ಮುಖ್ಯಕಾರ್ಯನಿರ್ವಾಹಣಾ ಧಿಕಾರಿಯಾದ ಡಾ. ಎ. ಪಿ. ಆಚಾರ್ ಉಪಸ್ಥಿತಿಯಲ್ಲಿ ನಡೆಯಿತು. ಕಂಪನಿಯ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಇವರು ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡಿದ್ದು ತೆರವಾದ ಹುದ್ದೆಗೆ ಆಯ್ಕೆ ಪ್ರಕ್ರಿಯೆ ನಡೆಯಿತು.

ಉಪಾಧ್ಯಕ್ಷರಾಗಿ ಕೆಂಚನೂರು ಚಂದ್ರಶೇಖರ ಉಡುಪ, ಕಾರ್ಯದರ್ಶಿಯಾಗಿ ಉಮೇಶ್ ಶೆಟ್ಟಿ ಶ್ಯಾನ್ಕಟ್ ಆಯ್ಕೆಯಾದರು. ಕೋರ್ ಕಮಿಟಿ ಸದಸ್ಯರಾಗಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸಹಿತ ಜ್ಯೋತಿ ಶೆಟ್ಟಿ ಮೂಡುಬಗೆ, ಶರತ್ಚಂದ್ರ ಶೆಟ್ಟಿ, ಉದಯ್ ಜಿ ಪೂಜಾರಿ ಚಿತ್ತೂರು ಇವರು ಆಯ್ಕೆಯಾದರು

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!